ಮಡಿಕೇರಿ, ಆ. ೩೦: ಕೊಡಗು ಪ್ರೆಸ್ ಕ್ಲಬ್‌ನ ೨೦೨೧-೨೪ನೇ ಅವಧಿಗೆ ಅಧ್ಯಕ್ಷರಾಗಿ ಅಜ್ಜಮಾಡ ರಮೇಶ್ ಕುಟ್ಟಪ್ಪ ಮರು ಆಯ್ಕೆಯಾಗಿದ್ದಾರೆ. ಇಂದು ನಡೆದ ಕೊಡಗು ಪ್ರೆಸ್ ಕ್ಲಬ್ ನೂತನ ನಿರ್ದೇಶಕರ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ಪ್ರಧಾನ ಕಾರ್ಯದರ್ಶಿಯಾಗಿ ರೆಜಿತ್ ಕುಮಾರ್ ಗುಹ್ಯ, ಹಿರಿಯ ಉಪಾಧ್ಯಕ್ಷರಾಗಿ ಆರ್. ಸುಬ್ರಮಣಿ, ಉಪಾಧ್ಯಕ್ಷರಾಗಿ ಚೀಯಂಡಿ ತೇಜಸ್ ಪಾಪಯ್ಯ, ಖಜಾಂಚಿಯಾಗಿ ಬೊಳ್ಳಜಿರ ಅಯ್ಯಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಎಂ.ಎನ್. ಚಂದ್ರಮೋಹನ್, ಸಹಕಾರ್ಯದರ್ಶಿ ಯಾಗಿ ಪ್ರಜ್ಞಾ ಜಿ.ಆರ್., ಶಿಸ್ತು ಸಮಿತಿ ಅಧ್ಯಕ್ಷರಾಗಿ ಸುನಿಲ್ ಪೊನ್ನೆಟ್ಟಿ, ಶಿಸ್ತು ಸಮಿತಿ ಸದಸ್ಯರಾಗಿ ನವೀನ್ ಡಿಸೋಜ, ಕುಡಿಯರ ದಿವಾಕರ ಬೋಜಪ್ಪ, ಈ.ಆರ್. ವಿಶ್ವಕುಮಾರ್, ಕುಪ್ಪಂಡ ದತ್ತಾತ್ರಿ ಆಯ್ಕೆ ಆಗಿದ್ದಾರೆ. ನಾಮ ನಿರ್ದೇಶಿತ ಸದಸ್ಯರಾಗಿ ಪುತ್ತಂ ಪ್ರದೀಪ್, ಬಿ.ಎ. ಭಾಸ್ಕರ್, ಕೆ.ಆರ್. ಪ್ರಸಿನ್ ನೇಮಕಗೊಂಡಿದ್ದಾರೆ.