ಹೆಬ್ಬಾಲೆ ಆ.೩೦ : ಸೋಮವಾರಪೇಟೆ ತಾಲೂಕಿನ ಬೇಳೂರು ಗ್ರಾಮದ ನಿವಾಸಿ ಕಾಫಿ ಬೆಳೆಗಾರರಾದ ದಿ.ಬಿ.ಜಿ.ಗುರಪ್ಪ ಅವರ ಮನೆಯಲ್ಲಿ ಸೋಮವಾರ ಹಬ್ಬದ ವಾತಾವರಣ.

ಮನೆಯ ಪ್ರವೇಶದ್ವಾರದಲ್ಲಿ ಹಸಿರು ತಳಿರು ತೋರಣ ಹಾಗೂ ಸ್ವಾಗತ ಬ್ಯಾನರ್ ರಾರಾಜಿಸಿತು. ಇದು ಕೊಡಗು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ೭೫ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಗುರಪ್ಪ ಅವರ ಮನೆಯ ಆವರಣದಲ್ಲಿ ಏರ್ಪಡಿಸಿದ್ದ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಕಂಡು ಬಂದ ಚಿತ್ರಣ. ರಾಷ್ಟçಪಿತ ಮಹಾತ್ಮ ಗಾಂಧೀಜಿ ಅವರು ಸ್ವಾತಂತ್ರ‍್ಯ ಹೋರಾಟದ ಸಂದರ್ಭದಲ್ಲಿ ೧೯೩೪ ರಲ್ಲಿ ಬೇಳೂರು ನಿವಾಸಿ ಗುರಪ್ಪ ಅವರ ಮನೆಯಲ್ಲಿ ವಿಶ್ರಾಂತಿ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಗಾಂಧೀಜಿ ಅವರ ಹೋರಾಟಕ್ಕೆ ನೈತಿಕ ಬೆಂಬಲ ನೀಡಿದ ಗುರಪ್ಪ ಅವರ ಕುಟುಂಬಸ್ಥರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಆಜಾದಿ ಕಾ ಅಮೃತಮಹೋತ್ಸವ ಕಾರ್ಯಕ್ರಮದ ಸವಿನೆನಪಿಗಾಗಿ ಅವರ ಮನೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಭೇಟಿ ನೀಡಿ ಕುಟುಂಬದ ಹಿರಿಯ ಸದಸ್ಯ ಬಿ.ಜಿ.ಗುರುಮಲ್ಲೇಶ್ ಹಾಗೂ ಕುಟುಂಬಸ್ಥರನ್ನು ಸನ್ಮಾನಿಸಿ ಜಿಲ್ಲಾಡಳಿತದಿಂದ ಗೌರವ ಸಮರ್ಪಣೆ ಮಾಡಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಕೇಂದ್ರ ಸರ್ಕಾರ ಅಮೃತಮಹೋತ್ಸವದ ಅಂಗವಾಗಿ ಸ್ವಾತಂತ್ರ‍್ಯ ಹೋರಾಟದಲ್ಲಿ ಪಾಲ್ಗೊಂಡಿ ರುವ ಸ್ವಾತಂತ್ರ‍್ಯ ಹೋರಾಟಗಾರರಿಗೆ ಗೌರವ ಸಮರ್ಪಣೆ ಮಾಡುವಂತೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರö್ಯ ಹೋರಾಟದ ಸಂದರ್ಭ ಗಾಂಧೀಜಿ ಅವರಿಗೆ ಆಶ್ರಯ ನೀಡಿ ಹೋರಾಟಕ್ಕೆ ನೈತಿಕ ಬೆಂಬಲ ನೀಡಿದ ಗುರಪ್ಪ ಅವರ ಮಗ ಬಿ.ಜಿ.ಗುರುಮಲ್ಲೇಶ್ ಹಾಗೂ ಕುಟುಂಬಸ್ಥರನ್ನು ಸನ್ಮಾನಿಸಲಾಗುತ್ತಿದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಗುರುಮಲ್ಲೇಶ್ ಅವರು ರಾಷ್ಟçಪಿತ ಮಹಾತ್ಮ ಗಾಂಧೀಜಿ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದರು.

ಸೊಸೆ ಸುನೈನಾಶಿವಚಂದ್ ಮಾತನಾಡಿ, ಸ್ವಾತಂತ್ರö್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರಿಗೆ ಹೆದರಿ ಗಾಂಧೀಜಿಯವರಿಗೆ ಯಾರು ಆಶ್ರಯ ಕೊಡಲು ಮುಂದೆ ಬರುತ್ತಿರಲಿಲ್ಲ. ಈ ಸಂದರ್ಭ ನಮ್ಮ ಪೂರ್ವಿಕರಾದ ಬಸವೇಗೌಡ ಹಾಗೂ ಗುರಪ್ಪ ಅವರು ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದರು. ತಮ್ಮ ಮನೆಯ ಎಲ್ಲ ಮಹಿಳೆಯರಿಂದ ಒಂದೊAದು ಬೆಳ್ಳಿ ನಾಣ್ಯವನ್ನು ಗಾಂಧೀಜಿ ಅವರಿಗೆ ದೇಣಿಗೆಯಾಗಿ ನೀಡಿ ಅವರ ಹೋರಾಟಕ್ಕೆ ಬೆಂಬಲ ನೀಡಿದ್ದರು. ಇದು ಸ್ವಾತಂತ್ರö್ಯ ಹೋರಾಟಕ್ಕೆ ನಮ್ಮ ಕುಟುಂಬದ ಅಳಿಲು ಸೇವೆಯಾಗಿತ್ತು ಎಂದು ನೆನಪಿಸಿಕೊಂಡರು.

ಜಿಲ್ಲಾಧಿಕಾರಿಯವರು ಗಾಂಧೀಜಿ ವಿಶ್ರಾಂತಿ ಪಡೆದ ಕೋಣೆ ಹಾಗೂ ತೋಟದಲ್ಲಿನ ಗಾಂಧಿ ಕಲ್ಲು ವೀಕ್ಷಣೆ ಮಾಡಿದರು. ಗುರಪ್ಪ ಅವರ ಕುಟುಂಬ ದೊಂದಿಗೆ ಭೋಜನ ಸ್ವೀಕರಿಸಿದರು.

ಪಂ.ಅಧ್ಯಕ್ಷ ಬಿ.ಎಂ. ಪ್ರಶಾಂತ್, ಉಪಾಧ್ಯಕ್ಷೆ ಜಿ.ಜೆ. ಸುಜಾತಾ, ತಹಶೀಲ್ದಾರ್ ಗೋವಿಂದರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ಪಾಂಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಕೆ.ಟಿ. ದರ್ಶನ್, ಕಾರ್ಯ ಕ್ರಮ ಸಂಯೋಜಕ ಮಣಜೂರು ಮಂಜುನಾಥ್, ಬೇಳೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಎಚ್.ಬಿ. ಅಂಜನಾದೇವಿ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಯೋಗೇಶ್, ಶಿಕ್ಷಕರಾದ ಬಸವರಾಜು, ಸೋಮಶೇಖರ್ ಮತ್ತು ಗ್ರಾ.ಪಂ. ಸದಸ್ಯರು, ಕುಟುಂಬಸ್ಥರಾದ ಬಿ.ಎಸ್. ಶಿವಶಂಕರ್, ಗುರುಪ್ರಸಾದ್, ಜಿ.ಎಸ್. ಪ್ರಭುದೇವ, ಸುಮಿತ್ರಾ ಪ್ರಕಾಶ್, ಸರಳಾ ಶ್ರೀಕಾಂತ್, ನಂದಿನಿಪ್ರಭು, ಭಾರತಿ, ಸುಮತಿ ಗುರುಪ್ರಕಾಶ್, ಚೈತ್ರಾ ಮಲ್ಲೇಶ್, ಸುನೈನಾ ಶಿವಚಂದ್ ಹಾಗೂ ಗ್ರಾಮಸ್ಥರು ಇದ್ದರು