ಸಿದ್ದಾಪುರ, ಆ. ೩೦: ಓ.ಡಿ.ಪಿ ಸಂಸ್ಥೆ ಹಾಗೂ ಅಂದೇರಿ ಹಿಲ್ಪೆ ಜರ್ಮನಿ ಸಹಯೋಗದಲ್ಲಿ ಕೃಷಿರಂಗ ಮಾಲ್ದಾರೆ ರೈತ ಉತ್ಪನ್ನ ಸಮಿತಿ ವತಿಯಿಂದ ರೈತರಿಗೆ ಸಿಗುವ ಸರಕಾರಿ ಯೋಜನೆಗಳ ಬಗ್ಗೆ ಜಾಲಬಂಧ ಕಾರ್ಯಕ್ರಮವು ಸಿದ್ದಾಪುರದ ಸೆಂಟನರಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ನೋಂದಾಯಿತ ರೈತರಿಗೆ ಉಚಿತ ಗೊಬ್ಬರವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಓ.ಡಿ.ಪಿ ಸಂಸ್ಥೆಯ ಸಂಯೋಜಕ ಜಾನ್ ಬಿ. ರಾಡ್ರಿಗಸ್ ಓ.ಡಿ.ಪಿ ಸಂಸ್ಥೆಯು ಕೊಡಗು, ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಸಮಿತಿಗಳನ್ನು ಹೊಂದಿವೆ ಎಂದು ತಿಳಿಸಿದರು. ಸಂಸ್ಥೆಯು ಅಂದೇರಿ ಹಿಲ್ಪೆ ಜರ್ಮನಿ ಸಹಯೋಗದಲ್ಲಿ ನೋಂದಾಯಿತ ರೈತರಿಗೆ ಕಳೆದ ೨ ವರ್ಷಗಳಿಂದ ಉಚಿತವಾಗಿ ಗೊಬ್ಬರಗಳನ್ನು ನೀಡುತ್ತಿದೆ. ಅಲ್ಲದೇ ಸಂಸ್ಥೆಯಲ್ಲಿ ಸದಸ್ಯರಾಗಿರುವವರಿಗೆ ಸಂಸ್ಥೆಯಿAದ ಸಹಾಯಧನ ಕೂಡ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ತುಳಸಿ, ಅಭಿವೃದ್ಧಿ ಅಧಿಕಾರಿ ಮಾದಪ್ಪ, ಕೃಷಿ ಇಲಾಖೆಯ ಸಹಾಯಕ ಅಧಿಕಾರಿ ರಾಮಚಂದ್ರ, ಓ.ಡಿ.ಪಿ ಸಂಸ್ಥೆಯ ಜಿಲ್ಲಾ ಸಂಯೋಜಕಿ ಜಾಯ್ಸ್ ಮಿನಜೆಸ್, ಓ.ಡಿ.ಪಿ ಕಾರ್ಯಕರ್ತರಾದ ವಿಜಯ ನಾರಾಯಣ, ಧನು ಕುಮಾರ್, ವಿಷ್ಣು ಬೆಳ್ಯಪ್ಪ, ರಾಕೇಶ್, ಇನ್ನಿತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ ನೋಂದಾಯಿತ ೫೦ ಜನ ರೈತರಿಗೆ ಗೊಬ್ಬರವನ್ನು ವಿತರಿಸಲಾಯಿತು.