ಮಡಿಕೇರಿ, ಆ.೩೦ : ಕರ್ನಾಟಕ ಒಲಂಪಿಕ್ ಸಂಸ್ಥೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ೩೮ನೇ ರಾಜ್ಯ ಮಟ್ಟದ ಟೆಕ್ವಾಂಡೋ ಚಾಂಪಿಯನ್ ಶಿಪ್ಗೆ ಕೊಡಗಿನ ನಾಲ್ವರು ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ತಾ.೩೧ರಂದು (ಇಂದು) ನಡೆಯುವ ಪಂದ್ಯದಲ್ಲಿ ಕೊಡಗಿನ ಇಮ್ರಾನ್, ಎಂ.ಆರ್.ಲಿಪಿಕಾ, ಕೆ.ವಿ.ಪುನೀತ್ ಹಾಗೂ ಬಿ.ವಿ.ವೈಷ್ಣವಿ ಭಾಗವಹಿಸಲಿದ್ದಾರೆ. ಇವರು ಮಡಿಕೇರಿಯ ಮರ್ಕರ ಟೆಕ್ವಾಂಡೋ ಕ್ಲಬ್ನ ಮಾಸ್ಟರ್ ಕುಶಾಲ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಆ.೨೫ ರಿಂದ ಪಂದ್ಯಾವಳಿ ನಡೆಯುತ್ತಿದೆ.