ಮಡಿಕೇರಿ, ಆ.೩೦: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ತಾ.೩೧ ರಂದು (ಇಂದು) ಬೆಳಗ್ಗೆ ೧೦ ಗಂಟೆಗೆ ಪೊನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾಲಯದಲ್ಲಿ “ಕೊಡವ ಪಡಿಪು ಪಾಠ ಪುಸ್ತಕ ಬೊಳಿಪಡ್‌ತುವ ಪಿಂಞ ತಕ್ಕ್ ಬಾಕ್” ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದ ಉದ್ಘಾಟನೆ ಯನ್ನು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್‌ಮಾಡ ರಾಜೀವ್ ಅಪ್ಪಯ್ಯ ಅವರು ನೆರವೇರಿಸಲಿದ್ದಾರೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಪೊನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾಲಯದ ಅಧ್ಯಕ್ಷರಾದ ಮಂಡೇಚAಡ ದಿನೇಶ್ ಚಿಟ್ಟಿಯಪ್ಪ ಅವರು ಭಾಗವಹಿಸಲಿದ್ದಾರೆ.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಕಾಳಿಮಾಡ ಮೋಟಯ್ಯ ಇವರು “ಪಠ್ಯಕ್ರಮತ್‌ಲ್ ಅವ್ವ ಪಾಜೆರ ಬಳಕೆ” ಎಂಬ ವಿಷಯದ ಬಗ್ಗೆ ಮಾತನಾಡು ತ್ತಾರೆ.

ಪಾಠ ಪುಸ್ತಕ ಸಮಿತಿಯ ಸಂಚಾಲಕಿ ಡಾ.ಮುಲ್ಲೇಂಗಡ ರೇವತಿ ಪೂವಯ್ಯ ಅವರು “ಕೊಡವ ಪಡಿಪು ಪಾಠ ಪುಸ್ತಕ ಪರಿಚಯ”ದ ಬಗ್ಗೆ ಮಾತನಾಡುತ್ತಾರೆ. ಪಾಠ ಪುಸ್ತಕ ಸಮಿತಿಯ ಸದಸ್ಯರು ಗೌರವ ಉಪಸ್ಥಿತಿಯಲ್ಲಿರುತ್ತಾರೆ. ಅಲ್ಲದೆ “ಕೊಡವ ಪಡಿಪು” ಪಾಠ ಪುಸ್ತಕ -೦೧ ಹಾಗೂ ಪೊಂಗುರಿ ತ್ರೆöÊಮಾಸಿಕ ಸಂಚಿಕೆ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ.