ಮಡಿಕೇರಿ, ಆ. ೨೮: ಇಂದು ಅರುಣಾಚಲ ಪ್ರದೇಶದಲ್ಲಿ ಆರಂಭಗೊAಡ ‘‘ರೈನ್ ಫಾರೆಸ್ಟ್ ಚಾಲೆಂಜ್’’ ರ‍್ಯಾಲಿಯಲ್ಲಿ ಅಮ್ಮತ್ತಿಯ ಉದ್ದಪಂಡ ಚೇತನ್ ಚೆಂಗಪ್ಪ ಭಾಗವಹಿಸುತ್ತಿದ್ದಾರೆ.
ಈ ಹಿಂದೆ ಉತ್ತರ ಗೋವಾದಲ್ಲಿ ನಡೆದ ರ‍್ಯಾಲಿಯಲ್ಲಿ ಓವರ್ ಆಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಚೇತನ್ ಚೆಂಗಪ್ಪ ಇತರ ರ‍್ಯಾಲಿಪಟು ಜಗತ್ ನಂಜಪ್ಪ ಅವರೊಂದಿಗೂ ಕೂಡಿ ಹೆಸರು ಮಾಡಿದ್ದಾರೆ.
ಇಂದು ಆರಂಭಗೊAಡ ರ‍್ಯಾಲಿ ತಾ. ೪ ರಂದು ಕೊನೆಗೊಳ್ಳಲಿದೆ. ಗೋವಾದಲ್ಲಿ ನಡೆಯುವ ಮುಕ್ತಾಯ ಸಮಾರಂಭದಲ್ಲಿ ಬಹುಮಾನಗಳ ವಿತರಣೆ ನಡೆಯಲಿದೆ.