ಗೋಣಿಕೊಪ್ಪಲು, ಆ.೨೮: ನಗರದ ಕಾವೇರಿ ಕಾಲೇಜಿನ ಸುವರ್ಣ ಮಹೋತ್ಸವ ಅಂಗವಾಗಿ ಹಳೆಯ ವಿದ್ಯಾರ್ಥಿಗಳು ನಿರ್ಮಿಸಿದ ಕಟ್ಟಡವನ್ನು ಲೋಕಾರ್ಪಣೆ ಮಾಡಲಾಯಿತು. ಕಾವೇರಿ ಕಾಲೇಜು ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಚಿರಿಯಪಂಡ ಕೆ.ಉತ್ತಪ್ಪ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಿದರು. ೩೫ ಲಕ್ಷದ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಟ್ಟಡದಲ್ಲಿ ವಿದ್ಯಾರ್ಥಿಗಳ ಉತ್ತಮ ಕಲಿಕೆಗೆ ೪೫ ಕಂಪ್ಯೂಟರ್ ಅಳವಡಿಸಲಾಗಿದೆ. ಗೋಲ್ಡನ್ ಜೂಬ್ಲಿಯ ಹಳೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಕಳೆದ ಮೂರು ವರ್ಷಗಳಿಂದ ನೂತನ ಕಟ್ಟಡ ನಿರ್ಮಾಣಕ್ಕೆ ಪಣ ತೊಟ್ಟಿದ್ದು, ಹಳೆಯ ವಿದ್ಯಾರ್ಥಿ ಗಳಿಂದ ಧನ ಸಹಾಯ ಪಡೆಯುವ ಮೂಲಕ ಕಟ್ಟಡ ನಿರ್ಮಾಣ ಮಾಡಲಾಗಿದೆ. ಸಂಘದ ಕಾರ್ಯ ಶ್ಲಾಘನೀಯ ಎಂದು ಉದ್ಘಾಟಕರಾದ ಉತ್ತಪ್ಪ ವಿದ್ಯಾರ್ಥಿ ಸಂಘದ ಕಾರ್ಯವನ್ನು ಪ್ರಶಂಸಿದರು.

ಹಿರಿಯ ರಂಗಕರ್ಮಿ, ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಕಾಲೇಜು ಅನೇಕರ ಬದುಕನ್ನು ಕಟ್ಟಿಕೊಟ್ಟಿದೆ. ರಾಷ್ಟಿçÃಯ ಮಟ್ಟದಲ್ಲಿ ಕಾಲೇಜು ಹೆಸರು ಮಾಡಿದೆ. ಕಾಲೇಜಿನ ಅಭಿವೃದ್ಧಿಗೆ ನಾವುಗಳು ಸಹಕಾರ ನೀಡಬೇಕು ವಿದ್ಯಾರ್ಥಿಗಳಿಗೆ ಕೌಶಲ್ಯ ತರಗತಿಗಳು ಹೆಚ್ಚಾಗಿ ನಡೆಯಬೇಕು ಎಂದರು.

ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಮಾತನಾಡಿ, ಈಗಷ್ಟೇ ಕಾಲೇಜಿನ ಅಭಿವೃದ್ಧಿಗೆ ವಿದ್ಯಾರ್ಥಿ ಸಂಘ ಕೆಲಸ ಆರಂಭ ಮಾಡಿದೆ. ಮುಂದೆ ಬಹಳಷ್ಟು ಕೆಲಸಗಳು ಬಾಕಿ ಇವೆ. ಆಡಳಿತ ಮಂಡಳಿ ಸಹಕಾರದಿಂದ ಇಂತಹ ಕೆಲಸ ಮಾಡಲು ಸಹಾಯವಾಗಿದೆ. ಮುಂದೆ ಮತ್ತಷ್ಟು ಅಭಿವೃದ್ಧಿಗೆ ಸಂಘವು ಶ್ರಮಿಸಲಿದೆ ಎಂದರು. ನಿವೃತ್ತ ಪ್ರಾಂಶುಪಾಲರಾದ ಪ್ರೊ.ಪಟ್ಟಡ ಪೂವಣ್ಣ, ಪ್ರೊ.ಎ.ಎಸ್. ಈರಪ್ಪ, ಮಾಜಿ ಅಧ್ಯಕ್ಷ ಡಾ.ಅಜ್ಜಿನಿಕಂಡ ಗಣಪತಿ, ಪ್ರೊ.ಎಂ.ಎಸ್.ಭಾರತಿ, ಹಳೆಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ವಾಣಿಚಂಗಪ್ಪ, ನಿರ್ದೇಶಕ ಅಜಿತ್ ಅಯ್ಯಪ್ಪ ಮಾತನಾಡಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಾಳೇಟಿರ ಬಿ.ಕಾವೇರಪ್ಪ, ಖಜಾಂಜಿ ಪಾಲೇಕಂಡ ಮನು ನಂಜಪ್ಪ, ಸಂಚಾಲಕಿ ರಜಿನಿ, ನಿವೃತ್ತ ಪ್ರಾಂಶುಪಾಲರಾದ ಪ್ರೊ.ಮೂಕಳಮಾಡ, ಮೊಣ್ಣಪ್ಪ, ಪ್ರೊ. ಕುಸುಮದರ್, ಕಾರ್ಯದರ್ಶಿ ಕೆ.ಜಿ.ಉತ್ತಪ್ಪ, ಪದವಿಪೂರ್ವ ಕಾಲೇಜುವಿನ ಪ್ರಾಂಶುಪಾಲ ಸಣ್ಣುವಂಡ ಮಾದಯ್ಯ ಸೇರಿದಂತೆ ಇನ್ನಿತgರು ಉಪಸ್ಥಿತರಿದ್ದರು. ಕುಸುಂ ಪ್ರಾರ್ಥಿಸಿ, ಸಂಚಾಲಕಿ ರಜಿನಿ ಸ್ವಾಗತಿಸಿ, ಚಿತ್ರವತಿ, ಪೊನ್ನಮ್ಮ ನಿರೂಪಿಸಿ, ಸಂಘದ ಉಪಾಧ್ಯಕ್ಷ ಪ್ರೊ.ತಿರುನೆಲ್ಲಿಮಾಡ ದೇವಯ್ಯ ವಂದಿಸಿದರು.

-ಹೆಚ್.ಕೆ. ಜಗದೀಶ್