ಮಡಿಕೇರಿ, ಆ. ೨೮; ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವನ್ಯ ಪ್ರಾಣಿಗಳ ಹಾವಳಿ ಅಷ್ಟೊಂದಿಲ್ಲ., ೨೦೧೮ರಲ್ಲಿ ಭೂಕುಸಿತ ಉಂಟಾದ ಬಳಿಕ ಜನರ ವಾಸ ಕಡಿಮೆಯಾದ ಮೇಲೆ ಒಂದಷ್ಟು ಕಾಡು ಹಂದಿಗಳು, ಮಂಗಗಳು., ಜೊತೆಗೆ ನವಿಲುಗಳು ಬಂದು ಸೇರಿಕೊಂಡಿವೆ. ಕಾಡಾನೆ ಹಾವಳಿ ಬಹಳ ಅಪರೂಪ., ಆದರೆ ಹಲವು ವರ್ಷಗಳಿಂದ ಆನೆಯೊಂದು ವರ್ಷಕ್ಕೊಮ್ಮೆ ಈ ಗ್ರಾಮದಲ್ಲಿ ಸುಳಿದಾಡಿ ಹೋಗುತ್ತದೆ., ಮೊನ್ನೆ ಕೂಡ ಈ ವರ್ಷದ ಅತಿಥಿಯ ಆಗಮನವಾಗಿದೆ..!

ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಹೆಮ್ಮೆತ್ತಾಳು ಗ್ರಾಮದ ಬಾಲಾಜಿ ತೋಟದ ಮೂಲಕ ಹಾದು ಹೋಗುವ ರಸ್ತೆಯಲ್ಲಿ ಸಾಗಿ ಬರುವ ಈ ಅತಿಥಿ ವರ್ಷಂಪ್ರತಿ ರಸ್ತೆ ಬದಿ ಇರುವ ಬಾಳೆಯನ್ನು ತಿಂದು ಮುಂದಕ್ಕೆ ಸಾಗುತ್ತದೆ. ಅಲ್ಲಿಂದ ಹೆಮ್ಮೆತ್ತಾಳುವಿಗಾಗಿ ತಂತಿಪಾಲ ಅಥವಾ ಮುಕ್ಕೋಡ್ಲು ಕಡೆಗೆ ತೆರಳುತ್ತದೆ. ಹೆಮ್ಮೆತ್ತಾಳುವಿನಲ್ಲಿ ಭೂ ಕುಸಿತ ಉಂಟಾದ ಬಳಿಕ ಅತ್ತ ಕಡೆ ಹೋಗುತ್ತಿಲ್ಲ, ಅಲ್ಲಿನ ಕುಲಾಕ್ಷಿ ತೋಟಕ್ಕಾಗಿ ದಾರಿ ಬದಲಾಯಿಸುತ್ತದೆ. ರಾತ್ರಿ ವೇಳೆಯಲ್ಲಿ ಸಂಚರಿಸುವ ಅತಿಥಿ ಇದುವರೆಗೆ ಬೇರೇನೂ ತೊಂದರೆ ಮಾಡಿಲ್ಲ. ಒಮ್ಮೆ ಬಂದು ಹೋದರೆ ಇನ್ನು ಮರಳಿ ಬರುವದು ಮುಂದಿನ ವರ್ಷ ಮಳೆ ಕಡಿಮೆಯಾದ ಬಳಿಕವೇ..!

ವರ್ಷಂಪ್ರತಿ ಬರುತ್ತಿದ್ದರೂ ಈ ಅತಿಥಿಯನ್ನು ಯಾರೂ ಕಂಡವರಿಲ್ಲ..! ?ಸAತೋಷ್