ಕೊಡಗಿನ ಇತಿಹಾಸದ ಬಗ್ಗೆ ರಿಕ್ಟರ್, ರೈಸ್, ಐ. ಎಂ. ಮುತ್ತಣ್ಣ ಅವರಲ್ಲದೆ ಡಿ. ಎನ್. ಕೃಷ್ಣಯ್ಯ ಇವರುಗಳು ಬರೆದ ಕೃತಿಗಳು ಉಲ್ಲೇಖನೀಯವಾದವು. ಕೊಡಗಿನಲ್ಲಿರುವ ಇತಿಹಾಸ ಪೂರ್ವಕಾಲದ ಕಲ್ಲುಗೋರಿಗಳು, ವೀರಗಲ್ಲುಗಳು, ಶಾಸನಗಳು, ಕೋಟೆ, ಕಡಂಗ (ಕಂದಕ)ಗಳು, ದೇವಾಲಯ, ಬಸದಿ, ಮಸೀದಿ, ಇಗರ್ಜಿ ಸುಗ್ಗಿಕಟ್ಟೆ ಮುಂತಾದ ರಚನೆಗಳು ಉಲ್ಲೇಖನೀಯ ಪುರಾತತ್ತ÷್ವ ಆಕರÀಗಳಾಗಿವೆ.

‘ಪಟ್ಟೋಳೆ ಪಳಮೆ’ಯಿಂದ ಆರಂಭಿಸಿ ಅಪಾರ ಜಾನಪದ ಪರಂಪರಾಗತ ಸಾಹಿತ್ಯವಿದೆ. ಅದರಲ್ಲಿ ಎಷ್ಟೋ ಪಾಲು ಸಂಗ್ರಹವಾಗಿಲ್ಲ; ಸಂಗ್ರಹವಾದುದು ಪ್ರಕಟವಾಗಿಲ್ಲ. ಪ್ರಕಟವಾದುವನ್ನು ಇತಿಹಾಸ ರಚನೆಗೆ ಇಲ್ಲಿ ಬಳಸಿದೆ.

ಪುರಾಣಗಳು : ಕೊಡಗಿನ ಇತಿಹಾಸಕ್ಕೆ ಸಂಬAಧಿಸಿದ ಅನೇಕ ಐತಿಹ್ಯಗಳೂ, ಪುರಾಣಗಳೂ ಇವೆ. ಸ್ಕಾಂದಪುರಾಣದ (೧೧ ರಿಂದ ೧೪ನೆಯ ಅಧ್ಯಾಯದ) ಭಾಗವನ್ನೆಲಾದ ‘ಕಾವೇರಿ ಮಹಾತ್ಮೆöÊ’ಯಲ್ಲಿ ಕೊಡಗಿನ ವಿಚಾರದ ಬಗ್ಗೆ ಕೆಲವೊಂದು ದಂತ ಕಥೆಗಳಿವೆ. ಕೊಡಗನ್ನು ಹಿಂದೆ ಮತ್ಸö್ಯದೇಶ, ಬ್ರಹ್ಮದೇಶ, ಕ್ರೋಢದೇಶ ಎಂದೆಲ್ಲಾ ಕರೆಯಲಾಗುತ್ತಿತ್ತೆಂಬ ಐತಿಹ್ಯಗಳಿವೆ. ತೀರ್ಥಯಾತ್ರೆಗೆಂದು ಹೊರಟ ಬ್ರಹ್ಮದೇವನು ಕೊಡಗಿನ ಇಂದಿನ ಪ್ರದೇಶಕ್ಕೆ ಬಂದನು. ಈಗ ಬ್ರಹ್ಮಗಿರಿಯೆಂದು ಕರೆಯಲಾಗುವ ಆಕರ್ಷಕ ತಾಣದಲ್ಲಿ ನೂರು ಕೊಂಬೆಗಳುಳ್ಳ ಒಂದು ನೆಲ್ಲಿಯ ಮರದ ಕೆಳಗೆ ಆತನಿಗೆ ವಿಷ್ಣುವಿನ ದರ್ಶನವಾಯಿತು. ಇಲ್ಲಿ ಬ್ರಹ್ಮನು ಕೆಲಕಾಲ ತಪಸ್ಸು ಮಾಡಿದ್ದರಿಂದ ಆ ತಾಣಕ್ಕೆ ಬ್ರಹ್ಮಗಿರಿಯೆಂದು ಹೆಸರಾಗಿ ಕೊಡಗು ಬ್ರಹ್ಮ ಕ್ಷೇತ್ರವೆನಿಸಿತು.

ಇನ್ನೊಂದು ಐತಿಹ್ಯದಂತೆ ಮತ್ಸö್ಯದೇಶದ ರಾಜ ಸಿದ್ದಾರ್ಥನ ಪುತ್ರ ಚಂದ್ರವರ್ಮನು ಬ್ರಹ್ಮಗಿರಿಯಲ್ಲಿ ಬಂದು ಪಾರ್ವತಿಯನ್ನು ಧ್ಯಾನಿಸಿ, ಆ ದೇವಿಯನ್ನು ಸಾಕ್ಷಾತ್ಕಾರ ಮಾಡಿಕೊಂಡನು. ಪಾರ್ವತಿಯು ಆತನಿಗೆ ಒಂದು ರಾಜ್ಯವನ್ನು ನಿರ್ಮಿಸಿಕೊಟ್ಟಳು. ಈ ಚಂದ್ರವರ್ಮನಿಗೆ ಕ್ಷತ್ರಿಯಳಲ್ಲದ ಪತ್ನಿಯಲ್ಲಿ ೧೧ ಜನ ಗಂಡು ಮಕ್ಕಳಾದರು. ಅವರನ್ನು ಪಾರ್ವತಿಯು ‘ಉಗ್ರ’ರೆಂದು ಸಂಬೋಧಿಸಿ ಅವರು ಕ್ಷತ್ರಿಯರಿಗೆ ಸಮಾನರಾದವರೆಂದು ತಿಳಿಸಿ ಹೇಳಿದಳು. ಚಂದ್ರವರ್ಮನು ಮತ್ಸö್ಯದೇಶದವನಾದುದರಿಂದ ಈ ದೇಶವನ್ನೂ ಮತ್ಸö್ಯದೇಶವೆಂದು ಕರೆದರು.

ಕೊಡಗಿಗೆ ಕ್ರೋಢದೇಶವೆಂಬ ಹೆಸರಿತ್ತು ಎಂದು ವಿವರಿಸುವ ಇನ್ನೊಂದು ಐತಿಹ್ಯದಂತೆ, ಚಂದ್ರವರ್ಮನ ೧೧ ಜನ ಮಕ್ಕಳು ವಿದರ್ಭದ ರಾಜಕುಮಾರಿಯರನ್ನು ವರಿಸಿದರು. ಅವರ ಸಂತತಿ ವರ್ಧಿಸಲು ಅವರು ಕೊಡಗಿನಲ್ಲಿ ಕೃಷಿಯನ್ನು ವಿಸ್ತರಿಸಿದರು. ನೆಲವನ್ನು ಹದಗೊಳಿಸಲು ತಮ್ಮ ಕೈಗಳಿಂದ ಕೆಲಸ ಮಾಡಿದರು. ಕಾಡುಹಂದಿಗಳAತೆ ಇವರು ದುಡಿದು ಸಿದ್ಧಪಡಿಸಿದ ಎಡೆಯು ‘‘ಕ್ರೋಢದೇಶ’ ಎನಿಸಿತು. ಇವೆಲ್ಲವೂ ‘ಕಾವೇರಿ ಮಹಾತ್ಮೆöÊ’ಯಲ್ಲಿ ಅಡಕವಾಗಿರುವ ಕಥನಗಳು.

‘‘ಕಾವೇರಿ ಮಹಾತ್ಮೆöÊ’’ಯಲ್ಲಿ ಹೇಳಿರುವಂತೆ ಬ್ರಹ್ಮಗಿರಿವಾಸಿಯಾದ ಕವೇರ ಮುನಿಯು ಬ್ರಹ್ಮನ ಮಗಳಾದ ಲೋಪಾಮುದ್ರೆಯನ್ನು ತನ್ನ ಮಗಳಾಗಿ ಸ್ವೀಕರಿಸಿ, ತನ್ನ ಈ ದತ್ತು ಪುತ್ರಿಯನ್ನು ಅಗಸ್ತö್ಯ ಮುನಿಗೆ ಮದುವೆ ಮಾಡಿಕೊಟ್ಟನು. ಎಂದಿಗೂ ತನ್ನನ್ನು ಬಿಟ್ಟಿರಬಾರದೆಂಬ ಷರತ್ತನ್ನು ಕಾವೇರಿಯು ಅಗಸ್ತö್ಯನಿಗೆ ವಿವಾಹಪೂರ್ವದಲ್ಲಿ ಹಾಕಿದ್ದಳು. ಆದರೆ ಒಮ್ಮೆ ತನ್ನ ಪತ್ನಿಯನ್ನು ತನ್ನ ಕಮಂಡಲದಲ್ಲಿ ಆವಾಹಿಸಿ ಅಗಸ್ತö್ಯನು ಸ್ನಾನಕ್ಕೆ ಹೋಗಿರಲು ಕಾವೇರಿಯು ಕಮಂಡಲದಿAದ ಹೊರ ಬಂದು ತಲಕಾವೇರಿಯಲ್ಲಿನ ಚಿಕ್ಕ ಕುಂಡಿಕೆಯಿAದ ನದೀರೂಪದಲ್ಲಿ ಪ್ರವಹಿಸಲು ಆರಂಭಿಸಿದಳು. ಅಂತರ್ವಾಹಿನಿಯಾಗಿ ಮುಂದೆ ಭಾಗಮಂಡಲದಲ್ಲಿ ಕಾಣಿಸಿಕೊಂಡಳು. ಇದೇ ಕತೆಯ ಇನ್ನೊಂದು ರೂಪದಲ್ಲಿ ವಿಷ್ಣುಮಾಯ ಎಂಬ ಬ್ರಹ್ಮನ ಮಗಳನ್ನು ಕವೇರ ಋಷಿ ಸಾಕಿಕೊಂಡಿರಲು, ವಿಷ್ಣುವಿನ ಅನುಜ್ಞೆಯಂತೆ ಈ ಕನ್ಯೆಯ ದೇಹರೂಪಿಯಾಗಿ ಲೋಪಾಮುದ್ರಾ ಎಂಬ ಹೆಸರಿನಿಂದ ಅಗಸ್ತö್ಯನ ಸತಿಯೂ ನದೀರೂಪಿಯಾಗಿ ಕಾವೇರಿಯೂ ಆದಳು. ದಕ್ಷಿಣದಲ್ಲಿ ಜಲಕ್ಷಾಮವಿದೆಯೆಂದು ಸುದ್ದಿ ತಿಳಿದ ಅಗಸ್ತö್ಯನು ತನ್ನ ಪತ್ನಿಯ ಜೊತೆ ಸಹ್ಯಾದ್ರಿ (ಪಶ್ಚಿಮ ಘಟ್ಟ)ಯ ತಪ್ಪಲ ಬ್ರಹ್ಮಗಿರಿಗೆ ಹಿಮಾಲಯದಿಂದ ಬಂದನು. ಮೇಲೆ ಹೇಳಿದಂತೆ ಕಮಂಡಲದಲ್ಲಿ ಆವಾಹಿತಳಾಗಿದ್ದ ಕಾವೇರಿಯು (ಬಲವಾಗಿ ಗಾಳಿಬೀಸಿ ಕಮಂಡಲವು ಉರುಳಿದಾಗ) ನದಿಯಾಗಿ ಹರಿಯಲು ಆರಂಭಿಸಿದಳು. ಬ್ರಹ್ಮಗಿರಿಯಲ್ಲಿದ್ದ ನೆಲ್ಲಿಯ ಮರದ ಸಾನ್ನಿದ್ಯದಲ್ಲಿ ವಿಷ್ಣುವನ್ನು ಪೂಜಿಸಲು ಬ್ರಹ್ಮನು ಶಂಖವೊAದರಲ್ಲಿ ತುಂಬಿಕೊAಡು ಕೈಲಾಸದ ವ್ರಜನದಿಯಿಂದ ತಂದ ಪವಿತ್ರ ಜಲವು ಇದರಲ್ಲಿ ಐಕ್ಯವಾಗಿ ಕಾವೇರಿಯ ಹರಿವು ತೀರಾ ಪವಿತ್ರವೆನಿಸಿತು.

ಈ ಕತೆಯ ಮತ್ತೊಂದು ರೂಪದಂತೆ ಶೂರಪದ್ಮನೆಂಬ ಅಸುರನು ತನ್ನ ವಿಶೇಷ ಶಕ್ತಿಯಿಂದ ಮಳೆ ಬೀಳುವುದನ್ನು ತಡೆದನು. ದಕ್ಷಿಣದಲ್ಲಿ ಇದರಿಂದ ಹಾಹಾಕಾರವಾಗಲು ಇಂದ್ರನ ಪ್ರಾರ್ಥನೆಯಂತೆ ಗಣೇಶನು ಕಾಗೆಯ ರೂಪತಳೆದು ಕವೇರ ಋಷಿಯ ಕಮಂಡಲವನ್ನು ಕೆಡವಿ ಕಾವೇರಿಯ ಪ್ರವಾಹಕ್ಕೆ ಕಾರಣನಾದನು.

ಈ ಎಲ್ಲಾ ಐತಿಹ್ಯಗಳಿಂದ ಇತಿಹಾಸವನ್ನು ರೂಪಿಸುವುದು ಕಷ್ಟ. ಆದರೆ, ಕೊಡಗಿನ ಜನರು ಕಾವೇರಿಯನ್ನು ತೀರ ಪವಿತ್ರ ನದಿಯೆಂದು ತಿಳಿಯುತ್ತಾರೆ; ಕೊಡವರು ತಮ್ಮ ತಾಯಿಯೆಂದು ಭಾವಿಸುತ್ತಾರೆ. ತಲಕಾವೇರಿ, ಭಾಗಮಂಡಲ, ಬಲಮುರಿಗಳು ಅವರಿಗೆ ಪುಣ್ಯಕ್ಷೇತ್ರಗಳು. ಬಲಮುರಿಯಲ್ಲಿ ಕಾವೇರಿ ಹರಿಯುವಿಕೆಯ ರಭಸಕ್ಕೆ ಅಲ್ಲಿದ್ದ ಕೊಡವ ಸ್ತಿçÃಯರ ಸೀರೆಗಳು ಹಿಂದು ಮುಂದಾಗಿ ಸೀರೆಯ ನೆರಿಗೆಗಳು ಬೆನ್ನ ಕಡೆ ಬರುವಂತಾಯಿತು. ಆ ಬಳಿಕ ಕೊಡವ ಸ್ತಿçà ಯರು ಸೀರೆ ಧರಿಸು ವಾಗ ಸೀರೆಯ ನೆರಿಗೆ ಗಳನ್ನು ಹಿಂಬದಿಗೆ ಜೋಡಿಸಿ ಧರಿಸುವ ಸಂಪ್ರದಾಯ ಪ್ರಾರಂಭ ವಾಯಿತು ಎಂದು ಕಥಾ ರೂಪದಲ್ಲಿ ವಿವರಣೆಯಿದೆ.

ಕೊಡಗು ಗ್ಯಾಸೆಟಿಯರ್‌ನಲ್ಲಿ ಭಾಗಮಂಡಲ ಕ್ಷೇತ್ರ ಮಾಹಿತಿ

ಮಡಿಕೇರಿಯಿಂದ ೨೯ ಕಿ. ಮೀ. ಮತ್ತು ವೀರಾಜಪೇಟೆಯಿಂದ ೫೦ ಕಿ. ಮೀ. ದೂರ ದಲ್ಲಿರುವ ಜನಪ್ರಿಯ ಪುಣ್ಯಕ್ಷೇತ್ರ ಭಾಗಮಂಡಲವು ಕಾವೇರಿ, ಕನ್ನಿಕೆ ಹಾಗೂ ಗುಪ್ತಗಾಮಿನಿ ಯಾಗಿರುವಳೆಂದು ನಂಬಲಾದ ಸುಜ್ಯೋತಿ ನದಿಗಳ ತ್ರಿವೇಣಿ ಸಂಗಮದ ದಡದಲ್ಲಿದೆ. ಶ್ರೀಭಗಂಡೇಶ್ವರ ದೇವಾಲಯದ ಸಮುಚ್ಚಯದಿಂದ ಇದು ಪ್ರಸಿದ್ಧವಾಗಿದೆ. ಪೌರಾಣಿಕವಾಗಿ ಭಗಂಡ ಮಹರ್ಷಿಗಳು ತಪಸ್ಸು ಮಾಡಿದ ಪವಿತ್ರ ತಾಣವೆಂದೂ ಇದೇ ಸ್ಥಳದಲ್ಲಿ ಶ್ರೀಸ್ಕಂದನು ಒಲಿದು, ವರವಿತ್ತು, ಋಷಿಯನ್ನು ಅನುಗ್ರಹಿಸಿದನೆಂದೂ ಸ್ಕಾಂದ ಪುರಾಣದಲ್ಲಿದೆ. ಭಗಂಡ ಋಷಿಗಳು ಶಿವಲಿಂಗವನ್ನು ಪ್ರತಿಷ್ಠೆ ಮಾಡಿದ ಕಾರಣ ಇದಕ್ಕೆ ‘ಭಗಂಡೇಶ್ವರ’ ಎಂದೂ ಮತ್ತು ಈ ಕ್ಷೇತ್ರಕ್ಕೆ ಭಾಗಮಂಡಲವೆAದೂ ಹೆಸರು ಬಂದಿತೆAದು ಪ್ರತೀತಿಯಿದೆ. ಭಗಂಡೇಶ್ವರ ದೇವಾಲಯದ ಆವರಣದಲ್ಲಿ ದೊರೆತಿರುವ ಶಾಸನದಲ್ಲಿ ಈ ಸ್ಥಳವನ್ನು

‘ಭಗಂಡಾಶ್ರಮ’ ಎಂದು ಕರೆದಿರುವರು. ಈ ಶಾಸನದಲ್ಲಿ (ಶಾ. ಸಂ.೨೧) ಬೋದ ರೂಪ ಭಗವತ್ ಎಂಬ ಧಾರ್ಮಿಕ ಗುರು ಇಲ್ಲಿನ ದೇವಾಲಯದ ಸೇವೆ ಗಳನ್ನು ನಿಯತಗೊಳಿ ಸಿದ್ದು ತಿಳಿಯುತ್ತದೆ. ಇದು ೧೧ನೇಯ ಶತಮಾನದ ಬಹುಭಾಷಾ ಶಾಸನ ವಾಗಿದೆ. ಇಂಥದೇ ಶಾಸನ ಪಾಲೂರಿ ನಲ್ಲೂ ಇದೆ.

ಕರ್ನಾಟಕವನ್ನು ಆಳಿದ ಎಲ್ಲಾ ರಾಜ ವಂಶಗಳು ಭಾಗಮಂಡಲಕ್ಕೆ ಅದರ ಗೌರವವನ್ನು ಸಲ್ಲಿಸಿರುವುದು ವ್ಯಕ್ತವಾಗುತ್ತದೆ. ಟಿಪ್ಪು ಸುಲ್ತಾನನು ಭಾಗಮಂಡಲಕ್ಕೆ ಮುತ್ತಿಗೆ ಹಾಕಿ ಈ ದೇವಾಲಯದ ಪರಿಸರವನ್ನು ಆಕ್ರಮಿಸಿ ತನ್ನ ಕೋಟೆಯನ್ನಾಗಿ ಪರಿವರ್ತಿಸಿದುದು ಮಾತ್ರವಲ್ಲದೇ ಈ ಸ್ಥಳವನ್ನು ಅಬಜಲಾಬಾದ್ ಎಂದು ಕರೆದನು. ನಂತರ ಕೊಡಗಿನಲ್ಲಿದ್ದ ದೊಡ್ಡವೀರರಾಜೇಂದ್ರನು ೧೭೯೦ರಲ್ಲಿ ಭಾಗಮಂಡಲವನ್ನು ತನ್ನ ಸೈನ್ಯದೊಂದಿಗೆ ದಾಳಿ ಮಾಡಿ, ಟಿಪ್ಪುಸುಲ್ತಾನನ ಸೈನಿಕರೊಡನೆ ಸತತವಾಗಿ ಐದು ದಿನಗಳ ಕಾಲ ಹೋರಾಡಿ ಜಯಗಳಿಸಿ ಭಾಗಮಂಡಲವನ್ನು ತನ್ನ ವಶಕ್ಕೆ ತೆಗೆದುಕೊಂಡನು.

ಎರಡೂ ಸೈನ್ಯಗಳ ಗುಂಡು ದಾಳಿಯ ಪರಿಣಾಮವಾಗಿ ದೇವಾಲಯದ ಛಾವಣಿಯಲ್ಲಿದ್ದ ಮೂರು ತಾಮ್ರದ ಮುಚ್ಚಿಗೆಯ ತಗಡುಗಳು ಹಾಳಾದವು; ಮತ್ತು ನಂತರ ದೊಡ್ಡವೀರರಾಜೇಂದ್ರನು ಇವುಗಳಿಗೆ ಬದಲಾಗಿ ಬೆಳ್ಳಿಯ ಹೆಂಚುಗಳನ್ನು ಹಾಕಿಸಿದನು. ಈಗಲೂ ಈ ಹೆಂಚುಗಳು ಕಾಣಸಿಗುತ್ತವೆ. ಟಿಪ್ಪುವಿನ ದಾಳಿಯ ಸಮಯದಲ್ಲಿ ಇಲ್ಲಿದ್ದ ವಿಗ್ರಹಗಳನ್ನು ಗುಪ್ತ ಸ್ಥಳಕ್ಕೆ ಸಾಗಿಸಿ, ದೊಡ್ಡವೀರರಾಜೇಂದ್ರನು ಇವುಗಳನ್ನು ಪುನಃ ಪ್ರತಿಷ್ಠಾಪಿಸಿ ದಕ್ಷಿಣ ಕನ್ನಡದ ಶಿವಳ್ಳಿ ಬ್ರಾಹ್ಮಣ ಕುಟುಂಬದವರನ್ನು ನೇಮಕ ಮಾಡಿ ನಿರಂತರವಾಗಿ ಪೂಜಾ ವಿಧಿಗಳು ಇಲ್ಲಿ ನೆರವೇರುವಂತೆ ಮಾಡಿದನೆಂದು ತಿಳಿದುಬರುತ್ತದೆ. (ಮುಂದುವರೆಯುವುದು)

(ಸAಗ್ರಹ) ಬಿ. ಜಿ. ಅನಂತಶಯನ

ಮಡಿಕೇರಿ.