ಮಡಿಕೇರಿ, ಆ. ೨೮: ತಾ.೨೩ ರಿಂದ ರಾಜ್ಯಾದ್ಯಂತ ೯,೧೦ ನೇ ತರಗತಿಗಳು ಸೇರಿದಂತೆ ಪಿ.ಯು ತರಗತಿಗಳೂ ಕೋವಿಡ್ ಪಾಸಿಟಿವಿಟಿ ದರ ಶೇ.೨ ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಪ್ರಾರಂಭಿಸುವAತೆ ಸರಕಾರ ಆದೇಶಿಸಿತ್ತು. ತಾ.೨೨ ಕ್ಕೆ ಅನ್ವಯವಾಗುವಂತೆ, ಕಳೆದ ಕೆಲವು ದಿನಗಳಿಂದ ಸತತವಾಗಿ ಕೋವಿಡ್ ಪಾಸಿಟಿವಿಟಿ ದರ ಶೇ.೨ ಕ್ಕಿಂತ ಕಡಿಮೆ ಇದ್ದ ಜಿಲ್ಲೆಗಳಲ್ಲಿ ತರಗತಿಗಳು ಪ್ರಾರಂಭವಾದವು. ಆದರೆ ಕೊಡಗು ಜಿಲ್ಲೆಯನ್ನೊಳಗೊಂಡAತೆ ಒಟ್ಟು ರಾಜ್ಯದ ೫ ಜಿಲ್ಲೆಗಳಲ್ಲಿ ಮಾತ್ರ ಪಾಸಿಟಿವಿಟಿ ದರ ಹೆಚ್ಚಿದ್ದ ಕಾರಣ ಈ ಜಿಲ್ಲೆಯಲ್ಲಿ ತರಗತಿಗಳು ಪ್ರಾರಂಭವಾಗಲಿಲ್ಲ.

ಕೊಡಗು ಜಿಲ್ಲೆಯಲ್ಲಿ ತಾ.೨೩ ರಂದು ಕೂಡ ಶೇ.೨.೭೭ ರಷ್ಟು ಪಾಸಿಟಿವಿಟಿ ದರವಿತ್ತು. ಇದಾದ ಬಳಿಕ ತಾ.೨೪ ರಿಂದ ತಾ.೨೮ ರವರೆಗೆ, ೫ ದಿನಗಳ ಅವಧಿಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.೨ ಕ್ಕಿಂತ ಹೆಚ್ಚಾಗಲಿಲ್ಲ.

ತಾ.೨೪ ರಂದು ಶೇ.೦.೭೮, ತಾ.೨೫ ರಂದು ಶೇ.೦.೭೧, ತಾ.೨೬ ರಂದು ಶೇ.೧.೫೭, ತಾ.೨೭ ರಂದು ಶೇ.೧.೪೧, ತಾ.೨೮ ರಂದು ಶೇ.೧.೪೮ ಪಾಸಿಟಿವಿಟಿ ದರ ದಾಖಲಾಗಿದೆ.

(ಮೊದಲ ಪುಟದಿಂದ)

ಶಾಲಾ-ಕಾಲೇಜುಗಳು ಪ್ರಾರಂಭವಾದ ನಂತರ, ಪಾಸಿಟಿವಿಟಿ ದರ ಒಂದು ವೇಳೆ ಹೆಚ್ಚಾದರೆ ಅಂತಹ ಜಿಲ್ಲೆಗಳಲ್ಲಿ ಮತ್ತೆ ಶಾಲಾ-ಕಾಲೇಜುಗಳನ್ನು ಮುಚ್ಚುವಂತೆ ಸರಕಾರ ಈ ಹಿಂದೆ ಆದೇಶಿಸಿತ್ತು. ಅದೇ ರೀತಿ ತರಗತಿಗಳು ಪ್ರಾರಂಭವಾಗದ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಕಡಿಮೆಯಾದರೆ, ಅಂತಹ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸುವAತೆಯೂ ಸರಕಾರ ಸೂಚಿಸಿದ್ದು, ಕೊಡಗು ಜಿಲ್ಲೆಯಲ್ಲ್ಲಿ ಇದಕ್ಕೆ ಪೂರಕವೆಂಬAತೆ ಕಳೆದ ಐದು ದಿನಗಳ ಅಂಕಿ-ಅAಶಗಳನ್ನು ಗಮನಿಸಿದರೆ ತರಗತಿಗಳು ಪ್ರಾರಂಭವಾಗುವ ಲಕ್ಷಣಗಳು ಕಾಣುತ್ತಿವೆ.

ಈಗಾಗಲೇ ಆನ್‌ಲೈನ್ ತರಗತಿಗಳು ನಡೆಯುತ್ತಿದ್ದು, ನಿರಂತರ ನೆಟ್‌ವರ್ಕ್ ಸಮಸ್ಯೆಯಿಂದ ಬಳಲುತ್ತಿರುವ ಜಿಲ್ಲೆಯ ಗ್ರಾಮೀಣ ಭಾಗದ ಬಹಳಷ್ಟು ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಹಾಜರಾಗದೆ ಇರುವುದಾಗಿ ಹಲವು ಶಿಕ್ಷಕರು ಮಾಹಿತಿ ನೀಡಿದ್ದು, ಭೌತಿಕ ತರಗತಿಗಳು ಪ್ರಾರಂಭವಾಗದಿದ್ದರೆ ಗುಣಮಟ್ಟದ ಪಾಠ-ಪ್ರವಚನ ಅಸಾಧ್ಯವೆಂಬ ಅಭಿಪ್ರಾಯ ಕೂಡ ವ್ಯಕ್ತಪಡಿಸಿದ್ದಾರೆ. ಇದೀಗ ಕೋವಿಡ್ ಪಾಸಿಟಿವಿಟಿ ದರದೊಂದಿಗೆ ಮಳೆಯ ಪ್ರಮಾಣ ಕೂಡ ಇಳಿಕೆಯಾಗಿದ್ದು, ತರಗತಿಗಳ ಪ್ರಾರಂಭಕ್ಕೆ ಸೂಕ್ತ ಸಮಯ ಎಂಬದು ಹಲವು ಪೋಷಕರ ಅಭಿಪ್ರಾಯ ಕೂಡ ಆಗಿದೆ.