ಮಡಿಕೇರಿ, ಆ. ೨೮: ಇಂಜಿನಿಯರಿAಗ್, ಮೆಡಿಕಲ್ ಕಾಲೇಜುಗಳ ಪ್ರವೇಶಾತಿಗೆ ಅವಶ್ಯವಿರುವ ಸಿ.ಇ.ಟಿಯ ಗಣಿತ ಹಾಗೂ ಜೀವಶಾಸ್ತç ವಿಷಯದ ಪರೀಕ್ಷೆಗಳು ಇಂದು ರಾಜ್ಯಾದ್ಯಂತ ನಡೆದಿದ್ದು, ಜಿಲ್ಲೆಯಲ್ಲಿ ಗಣಿತ ಪರೀಕ್ಷೆಗೆ ನೋಂದಣಿ ಮಾಡಿದ್ದ ೧೦೯೯ ಮಂದಿಯ ಪೈಕಿ ೮೫ ಮಂದಿ ಗೈರಾಗಿದ್ದು ಶೇ.೯೨.೨ ಹಾಜರಾತಿ ದಾಖಲಿಸಿದ್ದರೆ, ಜೀವಶಾಸ್ತç ವಿಷಯಕ್ಕೆ ನೋಂದಣಿ ಮಾಡಿದ್ದ ೧೦೯೯ ವಿದ್ಯಾರ್ಥಿಗಳ ಪೈಕಿ ೨೯೭ ಮಂದಿ ಗೈರಾಗಿದ್ದು, ಶೇ.೭೨.೯ ರಷ್ಟು ಹಾಜರಾತಿ ದಾಖಲಾಗಿದೆ.

ಗಣತಿ ವಿಷಯದಲ್ಲಿ ಮಡಿಕೇರಿ ಪದವಿಪೂರ್ವ ಕಾಲೇಜಿನಲ್ಲಿ ೪೭೫, ಸೋಮವಾರಪೇಟೆಯಲ್ಲಿ ೨೦೮ ಹಾಗೂ ವೀರಾಜಪೇಟೆಯಲ್ಲಿ ೩೩೧ ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, ಜೀವಶಾಸ್ತç ವಿಷಯದಲ್ಲಿ ಮಡಿಕೇರಿಯಲ್ಲಿ ೩೮೦, ಸೋಮವಾರಪೇಟೆಯಲ್ಲಿ ೧೬೧ ಹಾಗೂ ವೀರಾಜಪೇಟೆಯಲ್ಲಿ ೨೬೧ ಮಂದಿ ಪರೀಕ್ಷೆ ಎದುರಿಸಿದರು.

ಪ್ರತಿ ವರ್ಷ ಸಿ.ಇ.ಟಿ ಯಲ್ಲಿ ರ‍್ಯಾಂಕ್ ನೀಡುವಾಗ ಸಿ.ಇ.ಟಿಯಲ್ಲಿ ಪಡೆದ ಅಂಕದೊAದಿಗೆ ದ್ವಿತೀಯ ಪಿ.ಯುವಿನಲ್ಲಿ ಪಡೆದ ಅಂಕವನ್ನೂ ಶೇ.೫೦ರಷ್ಟು ಪರಿಗಣಿಸಿ ರ‍್ಯಾಂಕ್ ನೀಡಲಾಗುತ್ತಿತ್ತು. ಆದರೆ ಈ ವರ್ಷ ದ್ವಿತೀಯ ಪಿ.ಯು ಪರೀಕ್ಷೆಯೇ ರದ್ದಾದ ಕಾರಣ ಸಿ.ಇ.ಟಿ ಅಂಕಗಳ ಆಧಾರದಲ್ಲಿ ಮಾತ್ರ ರ‍್ಯಾಂಕ್ ನೀಡಲಾಗುತ್ತದೆ.

ಇಂದು ನಡೆದ ಪರೀಕ್ಷೆ ಸಂದರ್ಭ ೩ ಪರೀಕ್ಷಾ ಕೇಂದ್ರಗಳಲ್ಲಿಯೂ ಕೂಡ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಆರೋಗ್ಯ ಇಲಾಖೆ ವತಿಯಿಂದ ವಿದ್ಯಾರ್ಥಿಗಳ ಉಷ್ಣಾಂಶ ಪರೀಕ್ಷೆ ಮಾಡುವ ಕಾರ್ಯ ಕೂಡ ನಡೆಯಿತು.