ಕೂಡಿಗೆ, ಆ.೨೮: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿ ಕಾಡಾನೆಗಳ ದಾಳಿಯಿಂದ ಕಟಾವಿಗೆ ಬಂದ ಮುಸುಕಿನ ಜೋಳ ನಾಶವಾಗಿದೆೆ.
ಸೀಗೆಹೊಸೂರು ಗ್ರಾಮದ ಪುಟ್ಟಪ್ಪ, ಬೆಳೆಗಾರ ರವಿ ಎಂಬವರ ಎರಡು ಎಕರೆಗಳಷ್ಟು ಜಮೀನಿನಲ್ಲಿ ಮುಸುಕಿನ ಜೋಳವನ್ನು ಬೆಳೆಯಲಾಗಿತ್ತು. ಬೆಳೆಯು ಈಗಾಗಲೇ ಕಟಾವು ಹಂತಕ್ಕೆ ಬಂದಿತ್ತು. ಕಳೆದ ಎರಡು ದಿನಗಳಿಂದ ಯಲಕನೂರು, ಹೊಸಹಳ್ಳಿ ಕಡೆಯಿಂದ ಬಂದಿರುವ ನಾಲ್ಕು ಕಾಡಾನೆಗಳು ಜೋಳ ಬೆಳೆಯನ್ನು ನಷ್ಟಪಡಿಸುವುದರ ಜೊತೆಗೆ ಮುಖ್ಯ ರಸ್ತೆಯಲ್ಲಿ ಓಡಾಡುತ್ತಿರುವುದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಸ್ಥಳಕ್ಕೆ ಕೂಡಿಗೆ ಗ್ರಾ.ಪಂ. ಸದಸ್ಯ ಎಸ್.ಎನ್. ಅನಂತ್, ಜಯಶೀಲಾ, ಚಂದ್ರು, ಸೇರಿದಂತೆ ಹೆಬ್ಬಾಲೆ ಉಪವಲಯ ಅರಣ್ಯಾಧಿಕಾರಿ ಭರತ್, ಅರಣ್ಯ ರಕ್ಷಕ ಲೋಕೇಶ್, ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿ ಪರಿಹಾರವನ್ನು ನೀಡುವ ಬಗ್ಗೆ ಭರವಸೆಯನ್ನು ನೀಡಿದರು ಅಲ್ಲದೆ ಸಿಬ್ಬಂದಿಗಳು ಮುಖ್ಯ ರಸ್ತೆಯಲ್ಲಿ ಕಾಣಿಸಿಕೊಂಡ ಕಾಡಾನೆಗಳನ್ನು ಬಾಣವಾರ ಮೀಸಲು ಕಾಡಿನತ್ತÀ ಓಡಿಸಲಾಗಿದೆ.