ಕುಶಾಲನಗರ, ಆ. ೨೮: ಕುಶಾಲನಗರದ ಯುವಕನೊಬ್ಬ ಬೈಲುಕೊಪ್ಪ ಬಳಿ ಮೊಬೈಲ್ ಟವರ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ವರದಿಯಾಗಿದೆ. ಕುಶಾಲನಗರ ಪಟ್ಟಣದ ಬಸವೇಶ್ವರ ಬಡಾವಣೆ ನಿವಾಸಿ ಪುನೀತ್ (೨೯) ಎಂಬ ಯುವಕ ಆತ್ಮಹತ್ಯೆಗೆ ಶರಣಾಗಿದ್ದು ಕಾರಣ ತಿಳಿದು ಬಂದಿಲ್ಲ.

ಪುನೀತ್ ಬೈಲುಕುಪ್ಪೆ ಬಳಿ ಟಿಬೆಟಿಯನ್ ಶಿಬಿರದ ಕ್ಯಾಂಪ್‌ನಲ್ಲಿ ಮೊಬೈಲ್ ತಂತ್ರಜ್ಞನಾಗಿ ಕೆಲಸ ನಿರ್ವಹಿಸುತ್ತಿದ್ದ ಎಂದು ಬೈಲಕುಪ್ಪೆ ಪೊಲೀಸರು ತಿಳಿಸಿದ್ದಾರೆ.

ಮೃತ ಯುವಕ ಅವಿವಾಹಿತನಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ ಎಂದು ಅಪರಾಧ ವಿಭಾಗದ ಅಧಿಕಾರಿ ವಿಜಯೇಂದ್ರ ತಿಳಿಸಿದ್ದಾರೆ. ಬೈಲಕುಪ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.