ಗೋಣಿಕೊಪ್ಪಲು, ಆ. ೨೭: ಯುವ ಪಡೆಯೊಂದಿಗೆ ಪಕ್ಷವನ್ನು ಮತ್ತಷ್ಟು ಸಂಘಟನೆಗೊಳಿಸಲಾಗುವುದೆAದು ಪೊನ್ನಂಪೇಟೆ ವಲಯ ಕಾಂಗ್ರೆಸ್‌ನ ನೂತನ ಅಧ್ಯಕ್ಷ ತೀತಮಾಡ ಯಶ್ವಿನ್ ಹೇಳಿದರು. ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಅಧ್ಯಕ್ಷತೆಯಲ್ಲಿ ಪೊನ್ನಂಪೇಟೆ ವಲಯದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಯಶ್ವಿನ್ ಮುಂದಿನ ದಿನದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ ಜಿಲ್ಲೆಯಲ್ಲಿ ಅಧಿಕಾರ ಸ್ವೀಕರಿಸಿದ ನಂತರ ನಿರಂತರ ಪ್ರವಾಸ ಕೈಗೊಂಡು ಪಕ್ಷ ಸಂಘಟನೆಗೆ ಒತ್ತು ನೀಡಲಾಗು ತ್ತಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದರು. ಸಭೆಯಲ್ಲಿ ಮಾಜಿ ಜಿ.ಪಂ. ಸದಸ್ಯರಾದ ಮೂಕಳೇರ ಕುಶಾಲಪ್ಪ, ಡಿಸಿಸಿ ಸದಸ್ಯರಾದ ಕೊಲ್ಲಿರ ಬೋಪಣ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೋಳೇರ ಭಾರತಿ, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಲೀರ ರಶೀದ್ ಮುಂತಾದವರು ಮಾತನಾಡಿದರು. ಪಕ್ಷದ ಮುಖಂಡರಾದ ಮತ್ರಂಡ ದಿಲ್ಲು, ತೀತಮಾಡ ಸುಗುಣ ಸೋಮಯ್ಯ, ತೀತಿರ ಜಯ, ಮೂಕಳೇರ ಅಪ್ಪಣ್ಣ, ಕೋಳೇರ ದಿನು, ಬಾಪುಟ್ಟಿ, ಅಡ್ಡಂಡ ಡಾಲಿ, ಸುನೀಲ್, ಮಾಜಿ ಜಿ.ಪಂ. ಸದಸ್ಯ ಶ್ರೀಜಾಅಚ್ಚುತ್ತನ್, ಪೊನ್ನಂಪೇಟೆ ಗ್ರಾ.ಪಂ. ಸದಸ್ಯ ಮೂಕಳೇರ ಸುಮಿತ, ಅಣ್ಣಿರ ಹರೀಶ್, ಜುನೈದ್, ಕರ್ತಮಾಡ ರಸಿಕ, ನೇತ್ರಾವತಿ, ಯಮುನಾ, ಮುಂತಾದವರು ಉಪಸ್ಥಿತರಿದ್ದರು. ಒಬಿಸಿ ಘಟಕದ ಅಧ್ಯಕ್ಷ ಶಾಜಿ ಅಚ್ಚುತ್ತನ್ ಸ್ವಾಗತಿಸಿದರೆ, ಆಲೀರ ರಶೀದ್ ವಂದಿಸಿದರು.