ವೀರಾಜಪೇಟೆ, ಆ. ೨೭: ವೀರಾಜಪೇಟೆ ಪಟ್ಟಣ ಪಂಚಾಯಿತಿ ಮೀನುಪೇಟೆ ವಾರ್ಡ್ನ ಸದಸ್ಯ ಸ್ಥಾನಕ್ಕೆ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಕೌತುಕಕ್ಕೆ ಉತ್ತರ ದೊರೆತಿದೆ. ಇದೀಗ ರಾಜಕೀಯ ಚಟುವಟಿಕೆ, ಗೆಲುವಿಗಾಗಿ ತಂತ್ರಗಾರಿಕೆ ಶುರುವಾಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಹರ್ಷವರ್ದನ್ ನಿಧನದಿಂದ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ಬಿಜೆಪಿಯಿಂದ ಮಂಡೇಪAಡ ವಿಯಾಂಕ್ ಹಾಗೂ ಕಾಂಗ್ರೆಸ್, ಜೆಡಿಎಸ್ ಹಾಗೂ ಸಿಪಿಎಂ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಮಾದಂಡ ತಿಮ್ಮಯ್ಯ ಕಣದಲ್ಲಿ ದ್ದಾರೆ. ಇವರಿಬ್ಬರ ಸ್ಪರ್ಧೆಯಿಂದ ಮೀನುಪೇಟೆ ವಾರ್ಡ್ನ ಉಪಚುನಾವಣೆ ರಂಗೇರಿದೆ.
ವಾರ್ಡ್ ೧೩ರಲ್ಲಿ ಈ ಹಿಂದೆ ಕೆ.ಬಿ ಹರ್ಷವರ್ಧನ್ ಅವರು ಭಾ.ಜ.ಪ.ದಿಂದ ಆಯ್ಕೆಗೊಂಡು ಬಹುಮತದಿಂದ ಗೆಲುವು ಸಾಧಿಸಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅವರ ಅಕಾಲಿಕ ಮರಣದಿಂದ ಇದೀಗ ಉಪ ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತ, ಇಲ್ಲ ಕಾಂಗ್ರೆಸ್‌ಗೆ ಮತದಾರ ಮಣೆ ಹಾಕುತ್ತಾರೋ.? ಎಂದು ಸೆ.೩ ರ ತನಕ ಕಾದು ನೋಡಬೇಕಾಗಿದೆ.
ರಾಜಕೀಯ ಹಿನ್ನೆಲೆಯ ಅಭ್ಯರ್ಥಿಗಳು
ಉಪಚುನಾವಣೆ ನಡೆಯುವ ಮೀನುಪೇಟೆ ವಾರ್ಡ್ನಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರ ಸಹೋದರರಾದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಂಡೆಪAಡ ಸುಜಾ ಕುಶಾಲಪ್ಪ ಅವರ ಎರಡನೇ ಪುತ್ರ ವಿನಾಂಕ್ ಅವರು ಕಣಕ್ಕಿಳಿದ್ದಿದ್ದು, ಮತ್ತೊಂದೆಡೆ ಒಮ್ಮತದ ಅಭ್ಯರ್ಥಿಯಾಗಿ ವೀರಾಜಪೇಟೆ ಹಿರಿಯ ವಕೀಲ, ಕಾಂಗ್ರೆಸ್ ಮುಖಂಡರೂ ಆದ ಎಂ.ಎಸ್. ಪೂವಯ್ಯನವರ ಪುತ್ರ, ಅಂತರ ರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಅವರು ಕಣಕ್ಕಿಳಿದಿದ್ದಾರೆ. ಇಬ್ಬರು ಯುವ ಅಭ್ಯರ್ಥಿಗಳಾಗಿದ್ದು, ವೀರಾಜಪೇಟೆ ನಗರದ ಅಭಿವೃದ್ಧಿಯ ತಮ್ಮದೇ ಆದ ದೃಷ್ಟಿಕೋನಗಳನ್ನು ಹೊಂದಿದ್ದಾರೆ.
ಈರ್ವರು ಅಭ್ಯರ್ಥಿಗಳು ರಾಜಕೀಯ ಹಿನ್ನೆಲೆಯಿರುವ ಕುಟುಂಬದಿAದ ಬಂದಿರುವುದು ವಿಶೇಷವಾಗಿವೆ.
ಪ್ರಸ್ತುತ ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿಯಿಂದ ಗೆದ್ದಿರುವ ೭ ಸದಸ್ಯರಿದ್ದಾರೆ. ಇನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಮತ್ತು ಮಿತ್ರಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳ ಮೈತ್ರಿ ಈ ಚುನಾವಣೆ ಯಲ್ಲಿಯೂ ಮುಂದುವರೆದಿದೆ. ಕಾಂಗ್ರೆಸ್‌ನ ೭ ಹಾಗೂ ಜೆಡಿಎಸ್‌ನ ೧ ಮತ್ತು ಸ್ವತಂತ್ರವಾಗಿ ಗೆದ್ದಿರುವ ೩ ಅಭ್ಯರ್ಥಿಗಳು ಸೇರಿದರೆ ಹನ್ನೊಂದು ಸಂಖ್ಯಾಬಲ ಇದೆ.
ಕಳೆದ ಬಾರಿ ಉಭಯ ಪಕ್ಷಗಳು ಸಮಬಲ ಸಾಧಿಸಿದ್ದು, ಅಧ್ಯಕ್ಷ ಗಾದಿಯ ಅಭ್ಯರ್ಥಿಗಳು ಇರದ ಕಾರಣ ಕಾಂಗ್ರೆಸ್ ಚುನಾವಣೆಯಿಂದ ಹೊರಗುಳಿದಿತ್ತು. ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಮೀನುಪೇಟೆ ಕ್ಷೇತ್ರದಲ್ಲಿ ಜಯ ಸಾಧಿಸಬೇಕು ಎಂದು ಕಾದು ಕುಳಿತಿದ್ದು, ಮತದಾರರು ಯಾರಿಗೆ ಬೆಂಬಲ ನೀಡುತ್ತಾರೆ ಎಂದು ಫಲಿತಾಂಶದ ತನಕ ಕಾದು ನೋಡಬೇಕಾಗಿದೆ.
ವಾರ್ಡ್ ನಂ. ೧೩ ರಲ್ಲಿ ಒಟ್ಟು ೫೪೦ ಮತದಾರರಿದ್ದು ಅದರಲ್ಲಿ ಅಲ್ಪಸಂಖ್ಯಾತರು ೮೫, ಮಲೆಯಾಳಿ ೧೦೮, ಕೊಡವರು ೧೦೦, ಪರಿಶಿಷ್ಟ ಜಾತಿ ಹಾಗೂ ಪಂಗಡ ೬೫, ಬಾಕಿ ಇತರರು ಇದ್ದಾರೆ.
ಮೈತ್ರಿ ಮುಂದುವರಿಕೆ
ಪ್ರಸ್ತುತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಜಾತ್ಯಾತೀತ ಜನತಾ ದಳ ಮತ್ತು ಸಿ.ಪಿ.ಐ. ಪಕ್ಷಗಳ ಬೆಂಬಲ ಪಡೆದು ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಒಮ್ಮತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ರಾಜಕೀಯ ಹಾಗೂ ಸಂಘಟನಾತ್ಮಕವಾಗಿ ಶಕ್ತಿಶಾಲಿ ಯಾಗಿರುವ ಬಿಜೆಪಿಗೆ ಪ್ರಬಲ ಪೈಪೋಟಿ ಒಡ್ಡಿದೆ.
ಕಳೆದ ಬಾರಿಯ ಚುನಾವಣೆ ಯಲ್ಲಿ ಅಲ್ಪಮತಗಳ ಅಂತರದಿAದ ಕಾಂಗ್ರೆಸ್ ಪರಾಭವಗೊಂಡಿತ್ತು. ಈ ಬಾರಿ ಟಿಕೆಟ್‌ಗಾಗಿ ಹಲವರು ಕಸರತ್ತು ನಡೆಸಿದ್ದರು.
ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮಾಡುವಾಗ, ಜೆಡಿಎಸ್ ಪ್ರಮುಖರು, ಪಟ್ಟಣ ಪಂಚಾಯಿತಿ ಸ್ವತಂತ್ರ ಸದಸ್ಯರುಗಳು ಒಂದಾಗಿದ್ದರು. ಇದು ಮೈತ್ರಿ ಪಕ್ಷಗಳ ಒಗ್ಗಟ್ಟನ್ನು ಪ್ರದರ್ಶಿಸಿತ್ತು. ಮತ್ತೊಂದೆಡೆ ಬಿಜೆಪಿ ಕೂಡ ಸಂಘಟನಾತ್ಮಕವಾಗಿ ಪ್ರಬಲವಾಗಿ ರುವುದರಿಂದ ಚುನಾವಣೆ ಇನ್ನಷ್ಟು ರಂಗು ಪಡೆದುಕೊಂಡಿದೆ.
ಸೆ.೩ ರಂದು ನಡೆಯುವ ಪಟ್ಟಣ ಪಂಚಾಯಿತಿ ಉಪ ಚುನಾವಣೆಯಲ್ಲಿ ಮತದಾರರು ಪಕ್ಷವೇ ಅಥವಾ ಅಭ್ಯರ್ಥಿಯೇ, ಸರ್ಕಾರದ ಅಭಿವೃದ್ಧಿ ಮಂತ್ರವೇ ಇಲ್ಲ, ಹೊಸ ಮುಖಗಳು, ಅವರ ಶೈಕ್ಷಣಿಕ ಹಿನ್ನೆಲೆ ಇವುಗಳ ಆಧಾರದ ಮೇಲೆ ಮತ ನೀಡಲಿದ್ದಾರ.? ಫಲಿತಾಂಶದವರೆಗೂ ಕಾಯಲೇಬೇಕಾಗಿದೆ.
- ಉಷಾ ಪ್ರೀತಮ್