ಚೆಟ್ಟಳ್ಳಿ, ಆ. ೨೭: ಕೊಡವ ಮಕ್ಕಡ ಕೂಟ ಹೊರತಂದಿರುವ ನಾಲ್ಕು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿಗೆ ಆಯ್ಕೆಗೊಂಡಿದೆ ಎಂದು ಕೊಡವ ಮಕ್ಕಡ ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ಪ್ರಕಟಣೆÉಯಲ್ಲಿ ತಿಳಿಸಿದ್ದಾರೆ.
೨೦೧೯-೨೦ನೇ ಸಾಲಿನ ಪುಸ್ತಕ ಪ್ರಶಸ್ತಿಯಲ್ಲಿ ಬರಹಗಾರ್ತಿ ಕಾಡ್ಯಮಾಡ ರೀಟಾ ಬೋಪಯ್ಯ ಬರೆದ ವiಹಾವೀರ ಅಚ್ಚುನಾಯಕ ಸಾಹಿತ್ಯಕೃತಿ, ಹಿರಿಯ ರಂಗಕರ್ಮಿ ಅಡ್ಡಂಡ ಕಾರ್ಯಪ್ಪನವರು ಬರೆದ ಬದ್‌ಕ್ ಪಿಂಞ ದೇಚವ್ವ ಕೊಡವ ನಾಟಕ ಕೃತಿ, ಹಿರಿಯ ಸಾಹಿತಿಗಳಾದ ಬಾಚರಣಿಯಂಡ ಅಪ್ಪಣ್ಣ ಹಾಗೂ ರಾಣು ಅಪ್ಪಣ್ಣ ಬರೆದ ಪೊಂಜAಗ್ ಪುಸ್ತಕ.
ಹಿರಿಯ ಸಾಹಿತಿ ನಾಗೇಶ್ ಕಾಲೂರ್ ಬರೆದಿರುವ ನಾಡಪೆದ ಆಶಾ ಕಾದಂಬರಿಯು ಕೊಡವ ಮಕ್ಕಡಕೂಟದಿಂದ ಬಿಡುಗಡೆಗೊಂಡು ೨೦೨೦-೨೧ರ ಸಾಲಿನಲ್ಲಿ ಪ್ರಶಸ್ತಿಗೆ ಆಯ್ಕೆಗೊಂಡಿದೆ.