ಗೋಣಿಕೊಪ್ಪಲು/ ವೀರಾಜಪೇಟೆ, ಆ. ೨೭: ಜನಸೇವೆಗಾಗಿ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. ತಂದೆ ದಿ. ಎ.ಕೆ. ಸುಬ್ಬಯ್ಯ ಅವರ ಕೊನೆಯ ಇಚ್ಚೆಯಂತೆ ಜನರ ಸೇವೆ ಮಾಡಲು ಮುಂದೆ ಬಂದಿದ್ದೇನೆ. ಜನಸೇವೆಯೇ ನನ್ನ ಗುರಿಯೆಂದು ಮಾಜಿ ಹೆಚ್ಚುವರಿ ಅಡ್ವಕೇಟ್ ಜನರಲ್,ಹೈಕೋರ್ಟ್ನ ಹಿರಿಯ ವಕೀಲ ವ್ಯವಸ್ಥಾಪಕ ಟ್ರಸ್ಟಿ ಅಜ್ಜಿಕುಟ್ಟೀರ ಪೊನ್ನಣ್ಣ ತಿಳಿಸಿದರು.
ಬಿಟ್ಟಂಗಾಲದ ಆರ್.ಕೆ.ಫಾರ್ಮ್ ಸಭಾಂಗಣದಲ್ಲಿ ಆಯೋಜನೆ ಗೊಂಡಿದ್ದ ಎ.ಕೆ.ಸುಬ್ಬಯ್ಯ ಪೊನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ ಹಾಗೂ ‘ಶಕ್ತಿ’ ದಿನಪತ್ರಿಕೆಯ ಸಹಯೋಗದಲ್ಲಿ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪೊನ್ನಣ್ಣ ನಾನು ವಕೀಲ ವೃತ್ತಿಯಲ್ಲಿ ದುಡಿದ ಹಣದಿಂದಲೇ ಸಾಮಾಜಿಕ ಸೇವೆ ಮಾಡಲು ಮುಂದೆ ಬಂದಿದ್ದೇನೆ, ಹೀಗಾಗಿ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಪ್ರತಿವರ್ಷ ತಲಾ ೧೦ ಸಾವಿರದಂತೆ ೪೫ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಪಿಯುಸಿ ಮುಗಿದ ವಿದ್ಯಾರ್ಥಿಗಳಿಗೆ ಈ ಹಣವನ್ನು ನೀಡುತ್ತಿದ್ದು ೩ ವರ್ಷಗಳ ಕಾಲ ತಲಾ ೧೦ ಸಾವಿರ ನೀಡಲಾಗುವುದು.ಇದಕ್ಕಾಗಿ ೧೩ ಲಕ್ಷಕ್ಕೂ ಅಧಿಕ ಹಣವನ್ನು ಮೀಸಲಿಟ್ಟಿದ್ದೇನೆ. ಇಷ್ಟು ಹಣವು ನನ್ನ ಸ್ವಂತ ದುಡಿಮೆಯಾಗಿದೆ. ನನ್ನ ಜೀವಿತ ಅವಧಿಯವರೆಗೂ ಇದನ್ನು ಮುಂದುವರೆಸಿಕೊAಡು ಹೋಗುತ್ತೇನೆ. ಸದಾ ಸಾಮಾಜಿಕ ಸೇವೆಗೆ ನಾನು ಬದ್ದವೆಂದು ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದರು.
ಆರಂಭದಲ್ಲಿ ೨೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ
(ಮೊದಲ ಪುಟದಿಂದ) ವೇತನ ನೀಡುವ ಯೋಚನೆ ಮಾಡಲಾಗಿತ್ತು. ನಂತರ ಹೆಚ್ಚಿನ ವಿದ್ಯಾರ್ಥಿನಿಯರು ಸಾಧನೆ ಮಾಡಿರುವುದರಿಂದ ೪೫ ವಿದ್ಯಾರ್ಥಿನಿಯರಿಗೆ ದತ್ತಿ ನಿಧಿ ನೀಡಲು ನಿರ್ಧಾರ ಮಾಡಿದ್ದೆವು. ಸರಿಯಾದ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಈ ಹಣವನ್ನು ತಲುಪಿಸುವ ಸಲುವಾಗಿ ಶಕ್ತಿ ಪತ್ರಿಕೆಯ ಸಂಪಾದಕರಾದ ಚಿದ್ವಿಲಾಸ್‌ರವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿಷಯವನ್ನು ಮಂಡಿಸಿದಾಗ ಪೂರಕ ಸಹಕಾರ ನೀಡಿದರು. ನಂತರ ವಿದ್ಯಾರ್ಥಿಗಳ ಆಯ್ಕೆಯು ಸುಗಮವಾಯಿತು. ಇದರಲ್ಲಿ ೪೫ ಅರ್ಜಿಗಳನ್ನು ಅಂತಿಮಗೊಳಿಸಲಾಗಿದೆ. ಈ ಕಾರ್ಯಕ್ಕೆ ಶಕ್ತಿ ಪತ್ರಿಕೆಯ ಸಂಪಾದಕರು ಮಾಡಿದ ಸಹಕಾರವನ್ನು ಸ್ಮರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಕಾನೂನು ಸಚಿವ ಎಂ.ಸಿ. ನಾಣಯ್ಯ ಜಾತಿ ಮತ ಭೇದ ಮರೆತವರಿಂದ ಇಂತಹ ಕಾರ್ಯ ಮಾಡಲು ಸಾಧ್ಯ. ಕೈ ಶುದ್ಧ ಇದ್ದಲ್ಲಿ ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಟೀಕೆ ಮಾಡುವವರು ಸದಾ ಮಾಡುತ್ತಲೇ ಇರುತ್ತಾರೆ. ಇಂತಹವರಿAದ ಸಮಾಜಕ್ಕೆ ಕೊಡುಗೆ ಏನೇನು ಇರುವುದಿಲ್ಲ ಎಂದರು. ಜಮ್ಮ ಕೋವಿ ಹಕ್ಕು ಕೊಡಗಿನ ಪ್ರತಿ ಭೂ ಹಿಡುವಳಿದಾರರಿಗೆ ಶಾಶ್ವತವಾಗಿ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ತಾವುಗಳು ಕೋವಿಯ ಹಕ್ಕು ವಿಚಾರದಲ್ಲಿ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿರುವುದು ಉತ್ತಮ ಬೆಳವಣಿಗೆ. ರಾಜಕಾರಣದಲ್ಲಿ ಶುದ್ಧ ಹಸ್ತದ ರಾಜಕಾರಣಿಗಳು ಬಹಳ ಅಪರೂಪವಾಗಿದ್ದಾರೆ. ಶುದ್ಧ ಮನಸ್ಸು ಉಳ್ಳವರು ರಾಜಕೀಯಕ್ಕೆ ಮುಂದೆ ಬರಬೇಕು ಎಂದರು.
ಮತ್ತೋರ್ವ ಅತಿಥಿ ಶಕ್ತಿ ಪತ್ರಿಕೆಯ ಸಂಪಾದಕ ಚಿದ್ವಿಲಾಸ್ ಮಾತನಾಡಿ ಎ.ಎಸ್. ಪೊನ್ನಣ್ಣನವರು ಸಾಮಾಜಿಕ ಜವಾಬ್ದಾರಿ ಧಾರೆ ಎರೆದಿದ್ದಾರೆ. ಹೃದಯವಂತಿಕೆಯ ಇವರು ೧೩.೫೦ ಲಕ್ಷ ಹಣವನ್ನು ಭಾವೀ ಪ್ರಜೆಗಳಾಗಿ ರೂಪುಗೊಳ್ಳುವ ವಿದ್ಯಾರ್ಥಿ ನಿಯರಿಗೆ ನೀಡಲು ಮುಂದೆ ಬಂದಿದ್ದಾರೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಮಕ್ಕಳು ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ವಿದ್ಯಾರ್ಥಿ ವೇತನ ಸದುಪಯೋಗವಾಗಬೇಕು ಎಂದು ಕಿವಿ ಮಾತು ಹೇಳಿದರು.
ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಜಿ ಮಾತನಾಡಿ ಗಳಿಸಿದ ಸಂಪಾದನೆಯಲ್ಲಿ ಸ್ವಲ್ಪಭಾಗವನ್ನು ಸಮಾಜಕ್ಕೆ ಕೊಡುವ ಗುಣಗಳನ್ನು ಹೊಂದಿರುವ ಪೊನ್ನಣ್ಣನವರು ಕೊಡಗಿನ ಗೌರವವನ್ನು ಹೆಚ್ಚಿಸಿದ್ದಾರೆ. ಸಂಪತ್ತು ಇರುವವರು ಬಹಳ ಮಂದಿ ಇದ್ದರೂ ಸಮಾಜಮುಖಿ ಸೇವೆಗೆ ಇವರಿಂದ ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಜ್ಞಾನವೇ ಸಂಪತ್ತು. ಈ ಜ್ಞಾನದಿಂದ ತಾವುಗಳು ಗಳಿಸಿದ ಸಂಪತ್ತನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು, ಕಲಾ ನಿರ್ದೇಶಕರಾದ ಯಾಮಿನಿ ಮುತ್ತಣ್ಣ ಮಾತನಾಡಿ ಯೋಗದ ಮೂಲಕ ಸಾಧನೆ ಮಾಡಬಹುದು, ಇಂತಹ ಮೌಲ್ವಿಕ ಹೆಜ್ಜೆಗಳನ್ನು ಇಡಬೇಕು ಎಂದು ಕರೆ ನೀಡಿದರು. ಇದರಿಂದ ವಿದ್ಯಾಭ್ಯಾಸಕ್ಕೂ ಅನುಕೂಲ ವಾಗಲಿದೆ ಎಂದರು. ಸಾಧನೆಯ ಹಾದಿಯಲ್ಲಿ ಬರುವ ಎಡರು ತೊಡರುಗಳನ್ನು ಮೆಟ್ಟಿ ನಿಂತು ಗುರಿ ತಲುಪುವತ್ತ ಮಾತ್ರ ಮನಸ್ಸು ಇರಬೇಕು ಎಂದು ವಿದ್ಯಾರ್ಥಿನಿಯರಿಗೆ ಹೇಳಿದರು. ಜಿಲ್ಲೆಯ ವಿವಿಧ ಭಾಗದಿಂದ ಆಗಮಿಸಿದ ೪೫ ವಿದ್ಯಾರ್ಥಿನಿಯರಿಗೆ ತಲಾ ೧೦ ಸಾವಿರದಂತೆ ಹಣವನ್ನು ವಿತರಿಸಲಾಯಿತು.
ಮಾಲ್ದಾರೆ ಜನತಾ ಕಾಲೋನಿಯ ನಿವಾಸಿಗಳಿಗೆ ಕುಡಿಯುವ ನೀರಿನ ಸೌಕರ್ಯವನ್ನು ಉಚಿತವಾಗಿ ಮಾಡಿಕೊಟ್ಟ ಪೊನ್ನಣ್ಣನವರ ಕಾರ್ಯವನ್ನು ಶ್ಲಾಘಿಸಿ ಇಲ್ಲಿನ ನಾಗರಿಕರು ಕಲಾವಿದ ಮಾಲ್ದಾರೆ ಬಾವಾ ನಿರ್ಮಿಸಿದ ಎ.ಕೆ.ಸುಬ್ಬಯ್ಯನವರ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಚಂದ್ರಮೌಳಿ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಚೆಪ್ಪುಡೀರ ಅರುಣ್ ಮಾಚಯ್ಯ, ಟಿ.ಪಿ.ರಮೇಶ್, ತೀತಿರ ಧರ್ಮಜ ಉತ್ತಪ್ಪ, ಮುನೀರ್ ಅಹಮ್ಮದ್, ಟಾಟೂ ಮೊಣ್ಣಪ್ಪ,ನರೇಂದ್ರ ಕಾಮತ್, ಪಿ.ಆರ್.ಪಂಕಜ, ಪಿ.ಸಿ.ಹಸೈನಾರ್, ಮೀದೇರಿರ ನವೀನ್, ಸಿ.ಎನ್.ಸಿಯ ಎನ್.ಯು.ನಾಚಯ್ಯ ರೈತ ಸಂಘದ ಮನು ಸೋಮಯ್ಯ, ಕೊಡವ ಸಮಾಜದ ವಿಷ್ಣು ಕಾರ್ಯಪ್ಪ, ರಾಜೀವ್ ಬೋಪಯ್ಯ, ಕರವೇಯ ಪವನ್ ಪೆಮ್ಮಯ್ಯ, ಹುದಿಕೇರಿಯ ಹಿರಿಯ ನಾಗರಿಕರಾದ ಚೆಕ್ಕೆರ ಸೋಮಯ್ಯ, ಪೊಮ್ಮಕ್ಕಡ ಕೂಟದ ಕೊಟ್ಟಂಗಡ ವಿಜು ದೇವಯ್ಯ, ಚೇಂದAಡ ಸುಮಿ ಸುಬ್ಬಯ್ಯ, ಚೆಕ್ಕೇರ ವಾಸು, ಚಂಗುಲAಡ ಸೂರಜ್, ಡಿ.ಸಿ.ಸಿ. ಮಾಜೀ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು. ನೆರವಂಡ ಉಮೇಶ್ ನಿರೂಪಿಸಿ ಅಜ್ಜಿಕುಟ್ಟೀರ ನರೇನ್ ಕಾರ್ಯಪ್ಪ ಸ್ವಾಗತಿಸಿ,ಚೆಕ್ಕೆರ ಪಂಚಮ್ ಬೋಪಣ್ಣ ಪ್ರಾರ್ಥಿಸಿ, ರಮನಾಥ್ ವಂದಿಸಿದರು.
- ಹೆಚ್.ಕೆ.ಜಗದೀಶ್ / ಉಷಾ ಪ್ರೀತಂ