ಮಡಿಕೇರಿ, ಆ. ೨೭: ಅಕ್ರಮವಾಗಿ ಬೀಟಿ ಮರ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಅರಣ್ಯ ಇಲಾಖಾ ಸಿಬ್ಬಂದಿಗಳು ಪತ್ತೆ ಹಚ್ಚಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳು ಬಂಧಿತರಾಗಿದ್ದು ಪಿಕಪ್ ವಾಹನ, ಒಂದು ಕಾರು ಸೇರಿದಂತೆ ರೂ. ೮.೫೦ ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಬಿಟ್ಟಂಗಾಲ ಗ್ರಾಮದ ಗೋಣಿಕೊಪ್ಪ -ವೀರಾಜಪೇಟೆಯಲ್ಲಿ ಈ ಪ್ರಕರಣ ನಡೆದಿದ್ದು ಆರೋಪಿಗಳಾದ ಎಮ್ಮೆಮಾಡು ಗ್ರಾಮದ ಅಬ್ದುಲ್ ರಹೀಂ,

(ಮೊದಲ ಪುಟದಿಂದ) ಶಷೀರ್ ಕೆÀ.ಎಸ್., ಮುಸ್ತಾಫ, ಕುಟ್ಟ, ಪಿ.ಎಂ. ಸಪುರುದ್ದೀರ್ ಎಂಬವರು ಬಂಧಿತರಾಗಿದ್ದಾರೆ.

ಗೋಣಿಕೊಪ್ಪ - ವೀರಾಜಪೇಟೆ ಮುಖ್ಯ ರಸ್ತೆಯಲ್ಲಿ ರೋಟರಿ ಸ್ಕೂಲ್ ಬಳಿ ಅರಣ್ಯ ಅಧಿಕಾರಿಗಳು ರಾತ್ತು ಗಸ್ತು ಸಂಚರಿಸುತ್ತಿದ್ದ ವೇಳೆ ಅನುಮಾನಗೊಂಡ ಅರಣ್ಯ ಸಿಬ್ಬಂದಿಯವರು ನಿಧಾನಗತಿಯಲ್ಲಿ ಬರುತ್ತಿದ್ದ ಪಿಕಪ್ ವಾಹನ (ಕೆ.ಎ-೧೨ ಬಿ-೮೯೧೪)ನ್ನು ನೋಡಿ ಅನುಮಾನಗೊಂಡು ಪರಿಶೀಲಿಸಿದಾಗ ಬೀಟೆ ಮರದ ತುಂಡುಗಳಿರುವುದು ಕಂಡುಬAದಿದೆ. ಇದೇ ಸಂದರ್ಭದಲ್ಲಿ ಸದರಿ ಸ್ಥಳಕ್ಕೆ ಮಾರುತಿ ೮೦೦ (ಕೆಎ-೩೧-ಎಂ೨೦೩೯) ಕಾರಿನಲ್ಲಿ ೩-೪ ಜನರು ಬಂದು ಪಿಕಪ್ ವಾಹನದ ಚಾಲಕನನ್ನು ಅರಣ್ಯ ಸಿಬ್ಬಂದಿಗಳಿAದ ಬಿಡಿಸಿಕೊಳ್ಳಲು ಯತ್ನಿಸುತ್ತಿದ್ದರು. ಅರಣ್ಯ ಸಿಬ್ಬಂದಿಗಳು ಹಠಾತ್ ದಾಳಿ ನಡೆಸಿ ಕಾರಿನಲ್ಲಿದ್ದ ಒಬ್ಬ ವ್ಯಕ್ತಿಯನ್ನು ಹಾಗೂ ಸದರಿ ಕಾರನ್ನು ವಶಪಡಿಸಿಕೊಂಡು ವಿಚಾರಿಸಿದಾಗ ಸದರಿ ಕಾರು ಎಸ್ಕಾಟ್ ವಾಹನವಾಗಿರುವುದು ತಿಳಿದು ಬಂದಿರುತ್ತದೆ. ಬೀಟೆ ಮರವನ್ನು ವೀರಾಜಪೇಟೆ ತಾಲೂಕು ಕೋತೂರು ಗ್ರಾಮದಿಂದ ಕಡಿದು ಕೇರಳಕ್ಕೆ ಸಾಗಾಟ ಮಾಡುತ್ತಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಬೀಟೆ ಮರದ ನಾಟಗಳು ಹಾಗೂ ವಾಹನಗಳು ಸೇರಿ ಅಂದಾಜು ರೂ. ೮.೫೦ ಲಕ್ಷ ಮೌಲ್ಯದ ಸೊತ್ತನ್ನು ವೀರಾಜಪೇಟೆ ಅರಣ್ಯ ವಲಯದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ವೈ. ಚಕ್ರಪಾಣಿ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೋಷಿನಿ ಎ.ಜೆ. ಇವರ ಮಾರ್ಗದರ್ಶನದಲ್ಲಿ ಕಳ್ಳೀರ ಎಂ. ದೇವಯ್ಯ, ವಲಯ ಅರಣ್ಯಾಧಿಕಾರಿಗಳು, ಉಪ ವಲಯ ಅರಣ್ಯಾಧಿಕಾರಿಗಳಾದ ಶ್ರೀಶೈಲ ಮಲ್ಲಪ್ಪ ಮಾಲಿಗೌಡ್ರ, ದೇಯಂಡ ಸಂಜಿತ್ ಸೋಮಯ್ಯ, ಆನಂದ ಕೆ.ಆರ್., ಸಚಿನ ನಿಂಬಾಳ್ಕರ್, ಮೋನಿಷಾ ಎಂ.ಎಸ್., ಅಕ್ಕಮ್ಮ ಎನ್.ಎನ್., ಅನಿಲ್ ಸಿ.ಟಿ. ಅರಣ್ಯ ರಕ್ಷಕರಾದ ಚಂದ್ರಶೇಖರ್ ಅಮರಗೋಳ, ನಾಗರಾಜ ರಡರಟ್ಟಿ ಮಾಲತೇಶ ಬಡಿಗೇರ, ಅರುಣ ಸಿ.ಟಿ., ಎನ್. ಪ್ರಶಾಂತಕುಮಾರ್, ವಾಹನ ಚಾಲಕರಾದ ಅಚ್ಚಯ್ಯ, ಅಶೋಕ ಹಾಗೂ ವೀರಾಜಪೇಟೆ ವಲಯದ ಆರ್.ಆರ್.ಟಿ. ತಂಡದ ಅನಿಲ್, ಪೊನ್ನಪ್ಪ, ಸುರೇಶ್, ಮಹೇಶ್, ಲಾರೆನ್ಸ್, ಲತೇಶ್, ವಿಕಾಸ್, ಮಧು ಹಾಗೂ ಸಿಬ್ಬಂದಿಗಳು ಕಾರ್ಯಾ ಚರಣೆಯಲ್ಲಿ ಭಾಗವಹಿಸಿದ್ದರು.