ಗುಡ್ಡೆಹೊಸೂರು, ಆ. ೨೬: ಇಲ್ಲಿಗೆ ಸಮೀಪದ ರಂಗಸಮುದ್ರ ಸರಕಾರಿ ಶಾಲಾ ಆವರಣವನ್ನು ಅಲ್ಲಿನ ಎಸ್.ಡಿ.ಎಂ.ಸಿ. ತಂಡದವರು ಸ್ವಚ್ಛಗೊಳಿಸಿದರು.

ಲಾಕ್‌ಡೌನ್ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಕಾಡುಬೆಳೆದಿತ್ತು. ಈ ಕಾಡನ್ನು ಕಡಿದು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಕೆ.ಟಿ. ಕೇಶವ ಉಪಾಧ್ಯಕ್ಷ ಮಂಜುನಾಥ್ ಮತ್ತು ಸದಸ್ಯರು ಹಾಜರಿದ್ದರು.