ವೀರಾಜಪೇಟೆ:ಆ:೨೩: ಜೀವನದಲ್ಲಿ ನೊಂದು ವೃದ್ಧೆ ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ನಗರದ ಶಿವಕೇರಿಯಲ್ಲಿ ನಡೆದಿದೆ.

ಮಾಚಮ್ಮ (೬೩) ನೇಣಿಗೆ ಶರಣಾದ ವೃದ್ಧೆ. ಕಳೆದ ೬ ತಿಂಗಳ ಹಿಂದೆ ಪತಿ ರಮೇಶ್ ನಿಧನಗೊಂಡ ಬಳಿಕ ನೊಂದ ಮಾಚಮ್ಮ ಇಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ವೃದ್ದೆಯ ಅಕ್ಕ ತಾಯವ್ವ ಅವರು ನೀಡಿದ ದೂರಿನ ಅನ್ವಯ ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.