ಕುಶಾಲನಗರ, ಆ.೨೩: ವೀಕೆಂಡ್ ಲಾಕ್‌ಡೌನ್ ತೆರವುಗೊಳಿಸುವಂತೆ ಸರ್ಕಾರದ ಗಮನ ಸೆಳೆಯಲು ಪ್ರವಾಸೋದ್ಯಮ ಅವಲಂಭಿತರ ಒಕ್ಕೂಟದಿಂದ ಪ್ರವಾಸೋದ್ಯಮ ಮತ್ತು ಇತರ ಉದ್ಯಮಗಳ ಮಾಲೀಕರು, ಸಿಬ್ಬಂದಿಗಳು, ಕಾರ್ಮಿಕರು, ಚಾಲಕರು ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅವಲಂಬಿತರಾಗಿರುವ ಜನರು ಒಟ್ಟಾಗಿ ತಾ. ೨೫ ರಂದು ಮಡಿಕೇರಿಯಲ್ಲಿ ಹೋರಾಟಕ್ಕೆ ನಿರ್ಧಾರ ಕೈಗೊಂಡಿದ್ದಾರೆ. ಅಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಸೇರಿ ನಂತರ ಜಿಲ್ಲಾಧಿಕಾರಿಗಳಿಗೆ ತಮ್ಮ ಸಮಸ್ಯೆಗಳ ಬಗ್ಗೆ ವಿವರಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.