ಮಡಿಕೇರಿ, ಆ. ೨೩: ಅಕ್ರಮವಾಗಿ ಶ್ರೀಗಂಧ ಮರದ ನಾಟಗಳನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಕಲ್ಲಳ್ಳ ಮಾಲ್ದಾರೆ ಗ್ರಾಮದ ಸೈಯ್ಯದ್ ಬಂಧಿತ ಆರೋಪಿ.

ಸುಂಟಿಕೊಪ್ಪ ಸಮೀಪದ ಕೆದಕಲ್ ಬಳಿ ಲಕ್ಷಾಂತರ ರೂಪಾಯಿ ಮೌಲ್ಯದ ಶ್ರೀಗಂಧದ ತುಂಡುಗಳನ್ನು ಮಾರುತಿ ಜೆನ್ ಕಾರ್‌ನಲ್ಲಿ (ಕೆಎ-೦೩-ಎಂವೈ-೭೮೬೫) ಸಾಗಾಟ ಮಾಡುವ ಸಂದರ್ಭ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸಿಐಡಿ ಅರಣ್ಯ ಸಂಚಾರಿ ಘಟಕದ ಎಸ್.ಪಿ. ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಪಿ.ಎಸ್.ಐ. ಸವಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್, ಮೋಹನ್ ಇದ್ದರು.