ಕೋವರ್ ಕೊಲ್ಲಿ ಇಂದ್ರೇಶ್

ಮಡಿಕೇರಿ, ಆ. ೨೧: ಬಹು ನಿರೀಕ್ಷಿತ ಮೈಸೂರು - ಮಡಿಕೇರಿ ರಾಷ್ಟಿçÃಯ ಹೆದ್ದಾರಿಯ ನಿರ್ಮಾಣ ಕಾರ್ಯ ಮುಂದಿನ ವರ್ಷದ ಜೂನ್‌ನಿಂದ ಆರಂಭಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಸುಮಾರು ೩೮೮೩ ಕೋಟಿ ರೂಪಾಯಿಗಳ ಈ ಯೋಜನೆ ಜಾರಿಗೆ ಬಂದರೆ ಬೆಂಗಳೂರು ಮಡಿಕೇರಿ ನಡುವಿನ ಪ್ರಯಾಣದ ಅವಧಿ ಈಗಿನ ಆರು ತಾಸುಗಳಿಂದ ಮೂರೂವರೆ ಗಂಟೆಗಳಿಗೆ ಇಳಿಕೆಯಾಗಲಿದೆ.

ಈ ಉದ್ದೇಶಿತ ಹೆದ್ದಾರಿಯಲ್ಲಿ ಸುಮಾರು ೨೭೩೩ ಕೋಟಿ ರೂಪಾಯಿಗಳನ್ನು ನಿರ್ಮಾಣ ಕಾರ್ಯಕ್ಕೆ ಬಳಸಲಾಗುವುದಲ್ಲದೆ ಭೂ ಸ್ವಾಧೀನ ಕಾರ್ಯದ ಪರಿಹಾರ ನೀಡಲು ೧೧೫೦ ಕೋಟಿ ರೂಪಾಯಿಗಳು ವೆಚ್ಚವಾಗಲಿದೆ. ಈ ಉದ್ದೇಶಿತ ರಸ್ತೆ

(ಮೊದಲ ಪುಟದಿಂದ) ಶ್ರೀರಂಗ ಪಟ್ಟಣದ ಪಶ್ಚಿಮ ವಾಹಿನಿಯ ಬಳಿಯಿಂದ ಆರಂಭಗೊAಡು ಮಡಿಕೇರಿವರೆಗೆ ತಲುಪಲಿದೆ.

ಈಗ ಬೆಂಗಳೂರು -ಮೈಸೂರು ಎಕ್ಸ್ಪ್ರೆಸ್ ವೇ ಕಾಮಗಾರಿ ಭರದಿಂದ ಸಾಗಿದ್ದು, ಇದು ಮುಂದಿನ ೨೦೨೨ರ ಸೆಪ್ಟೆಂಬರ್ ವೇಳೆಗೆ ಮುಗಿಯಲಿದೆ. ಈ ೮೦೦೦ ಕೋಟಿ ರೂಪಾಯಿಗಳ ೬ ಪಥಗಳ ಹೆದ್ದಾರಿಯಿಂದ ಬೆಂಗಳೂರು - ಮೈಸೂರು ನಡುವಿನ ಪ್ರಯಾಣದ ಅಂತರ ಈಗಿನ ೩ ಗಂಟೆಗಳಿAದ ೯೦ ನಿಮಿಷಗಳಿಗೆ ಇಳಿಕೆ ಆಗಲಿದೆ.

ಆದರೆ ೯೦ ನಿಮಿಷದ ಅವಧಿಯಲ್ಲಿ ಮೈಸೂರಿನಿಂದ ಕೆಂಗೇರಿವರೆಗೆ ಮಾತ್ರ ತಲುಪಬಹುದಾಗಿದ್ದು ಮೆಜೆಸ್ಟಿಕ್ ತಲುಪಲು ಇನ್ನೂ ೩೦ ರಿಂದ ೪೦ ನಿಮಿಷಗಳ ಕಾಲಾವಕಾಶ ಬೇಕಾಗುತ್ತದೆ. ಈ ಹೆದ್ದಾರಿಗೆ ಮಡಿಕೇರಿ ರಸ್ತೆಯು ಸಂಪರ್ಕಗೊಳ್ಳಲಿದೆ. ಉದ್ದೇಶಿತ ಮೈಸೂರು - ಮಡಿಕೇರಿ ರಸ್ತೆಯು ಪೂರ್ಣಗೊಂಡಲ್ಲಿ ಬೆಂಗಳೂರು - ಮಂಗಳೂರಿನ ನಡುವಿನ ಪ್ರಯಾಣದ ಅವಧಿಯೂ ಗಣನೀಯವಾಗಿ ಕಡಿಮೆ ಆಗಲಿದ್ದು ರಸ್ತೆಯ ದಟ್ಟಣೆಯೂ ಹೆಚ್ಚಲಿದೆ.

ಈ ಕುರಿತು ಮಾತನಾಡಿದ ಈ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ದೇವರಾಜ್ ಅವರು ಮೈಸೂರು -ಮಡಿಕೇರಿ ಉದ್ದೇಶಿತ ಹೆದ್ದಾರಿ ಯೋಜನೆಯ ಅನುಷ್ಠಾನಕ್ಕಾಗಿ ಕಳೆದ ವರ್ಷವೇ ಮೈಸೂರಿನ ಚಾಮುಂಡಿಪುರAನಲ್ಲಿ ಭೂಸ್ವಾಧೀನ ಕಚೇರಿ ತೆರೆಯಲಾಗಿದೆ. ಈಗಾಗಲೇ ಮೈಸೂರಿನಿಂದ ಮಡಿಕೇರಿವರೆಗೂ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ (ಓಊಂI) ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸರ್ವೆ ಕಾರ್ಯವನ್ನೂ ಮುಗಿಸಿದ್ದು, ಮೈಸೂರು ಮತ್ತು ಹುಣಸೂರು ತಾಲೂಕುಗಳ ಹೆದ್ದಾರಿ ಹಾದು ಹೋಗುವ ಭಾಗದ ಭೂ ಮಾಲೀಕರಿಗೆ ಪರಿಹಾರ ನೀಡಲು ನೋಟಿಫಿಕೇಷನ್ ಕೂಡ ಹೊರಡಿಸಲಾಗಿದೆ. ಪಿರಿಯಾಪಟ್ಟಣ, ಕುಶಾಲನಗರ ಮತ್ತು ಮಡಿಕೇರಿ ತಾಲೂಕುಗಳ ಭೂ ಮಾಲೀಕರಿಗೆ ಪರಿಹಾರ ನೀಡುವ ಸಂಬAಧ ನೋಟಿಫಿಕೇಷನ್ ಹೊರಡಿಸಬೇಕಿದೆ ಎಂದರು.

ಈ ಉದ್ದೇಶಿತ ಹೆದ್ದಾರಿಯು ಸಂಪೂರ್ಣ ಟೋಲ್ ಹೆದ್ದಾರಿ ಆಗಿರುತ್ತದೆ. ಇದಕ್ಕೆ ಗುಡ್ಡೆಹೊಸೂರು, ಸುಂಟಿಕೊಪ್ಪ, ಕುಶಾಲನಗರ, ಪಿರಿಯಾಪಟ್ಟಣ, ಹುಣಸೂರಿನಿಂದ ಮಾತ್ರ ಸಂಪರ್ಕ ಇರುತ್ತದೆ. ಈ ಹೆದ್ದಾರಿಗೆ ಸರ್ವೀಸ್ ರಸ್ತೆ ನಿರ್ಮಿಸಲಾಗುವುದಿಲ್ಲ. ಈ ಉದ್ದೇಶಿತ ರಸ್ತೆ ನಿರ್ಮಾಣವಾದರೂ ಈಗಿರುವ ಹಾಲಿ ಬೆಂಗಳುರು - ಮಂಗಳೂರು ರಾಷ್ಟಿçÃಯ ಹೆದ್ದಾರಿಯು ಹಾಗೆ ಇರಲಿದೆ ಎಂದು ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.