ಕಾವೇರಿ ಬ್ರಹ್ಮಗಿರಿಯಲ್ಲಿ ತಪಸ್ಸು ಮಾಡುತ್ತಿದ್ದಾಗ ಅಲ್ಲಿಗೆ ಅಗಸ್ತö್ಯ ಋಷಿ ಬಂದ. ಕಾವೇರಿಯ ತಪಸ್ಸು ಮುಗಿದ ಮೇಲೆ ಅವಳನ್ನು ಕಂಡು, ಅವಳು ತನ್ನ ಪತ್ನಿಯಾಗಬೇಕೆಂದು ಕೇಳಿಕೊಂಡ. ಅವಳಿಗೆ ತಾನು ನದಿಯಾಗಿ ಹರಿದು ಜನರ ಪಾಪಗಳನ್ನು ಪರಿಹರಿಸಬೇಕೆಂಬ ಇಚ್ಛೆ ಪ್ರಬಲವಾಗಿದ್ದರೂ ಅಗಸ್ತö್ಯನ ಕೋರಿಕೆಯನ್ನು ನಿರಾಕರಿಸಲಾರದೆ ಒಂದು ಷರತ್ತಿನಿಂದ ಅವನನ್ನು ವಿವಾಹವಾಗಲು ಒಪ್ಪಿದಳು.
ಮದುವೆಯಾದ ಮೇಲೆ ಎಂದೂ ಅವಳನ್ನು ಅಗಸ್ತö್ಯ ಒಂಟಿಯಾಗಿ ಬಿಟ್ಟಿರಕೂಡದೆಂದೂ ತಪ್ಪಿದಲ್ಲಿ ನದಿಯಾಗಿ ಹರಿದು ಹೋಗಲು ಅವಳಿಗೆ ಸ್ವಾತಂತ್ರö್ಯ ಇರತಕ್ಕದ್ದೆಂದೂ ಷರತ್ತು ವಿಧಿಸಿದಳು. ಅಗಸ್ತö್ಯ ಒಪ್ಪಿ ಆಕೆಯನ್ನು ವಿವಾಹವಾದ. ನೀರಿನ ರೂಪದಲ್ಲಿ ಕಾವೇರಿಯಿದ್ದ ಕಮಂಡಲವನ್ನು ಅಗಸ್ತö್ಯ ಒಮ್ಮೆ ಶಿಷ್ಯರ ಕೈಯಲ್ಲಿ ಕೊಟ್ಟು ಕನ್ನಿಕಾ ನದಿಗೆ ಸಂಧ್ಯೋಪಾಸನೆಗೆ ಹೋಗಿದ್ದಾಗ, ಅಗಸ್ತö್ಯ ತನಗೆ ಕೊಟ್ಟ ಮಾತಿಗೆ ತಪ್ಪಿದನೆಂದು ಕಾವೇರಿ ಕಮಂಡಲದಿAದ ಬ್ರಹ್ಮಗಿರಿಯ ತೀರ್ಥ ಕುಂಡಿಕೆಗೆ ಜಿಗಿದು ಅಲ್ಲಿಂದ ನದಿಯಾಗಿ ಪ್ರವಹಿಸಿದಳು. ಆಗ ಅಗಸ್ತö್ಯನ ಶಿಷ್ಯರು ಅವಳು ನದಿಯಾಗಿ ಹರಿಯುವುದನ್ನು ತಡೆದರು. ಅವಳು ತೀರ್ಥ ಕುಂಡಿಕೆಯ ಮುಂದಿರುವ ತೀರ್ಥಕೊಳದ ಬಲಭಾಗದ ಇಳಿಜಾರಿನಲ್ಲಿ ಕಲ್ಲುಬಂಡೆಯ ಅಡಿಭಾಗದಲ್ಲಿ ಹರಿದು ಕೆಳಗೆ ಕಾಣಿಸಿಕೊಂಡಳು. ಅಲ್ಲಿಂದ ಭಾಗಮಂಡಲ ಕ್ಷೇತ್ರ ತಲಪಿದಾಗ ಮೊದಲನೆಯ ಉಪನದಿ ಕನ್ನಿಕೆ ಕಾವೇರಿಯನ್ನು ಸೇರಿಕೊಂಡಳು. ತನ್ನ ಪತ್ನಿ ತನಗೆ ತಿಳಿಸದೆ ನದಿಯಾಗಿ ಹರಿದುದಕ್ಕೆ ಅಗಸ್ತö್ಯನಿಗೆ ಕೋಪ ಬಂತು. ಅಷ್ಟರಲ್ಲಿ ಬ್ರಹ್ಮ ಅಗಸ್ತö್ಯನಲ್ಲಿಗೆ ಬಂದು ಅವನನ್ನು ಸಮಾಧಾನ ಪಡಿಸಿದ. ಅನಂತರ ಅಗಸ್ತö್ಯ ನದಿಯಾಗಿ ಹರಿಯುತ್ತಿದ್ದ ಕಾವೇರಿಯನ್ನು ಬ್ರಹ್ಮಗಿರಿಯಿಂದ ಸುಮಾರು ಇಪ್ಪತ್ತು ಮೈಲಿಗಳ ದೂರದಲ್ಲಿರುವ ಬಲಮುರಿಯಲ್ಲಿ ಸಂಧಿಸಿ ಅವಳು ಮತ್ತೆ ತನ್ನ ಪತ್ನಿಯಾಗಿರುವಂತೆ ಕೇಳಿಕೊಂಡ. ಬಳಿಕ ಗುಯ್ಯದಲ್ಲಿ ಮಾತುಕತೆಯಾದ ನಂತರ ಈಶ್ವರ ತನಗೆ ಕೊಟ್ಟ ವರದಂತೆ ಒಂದು ರೂಪದಲ್ಲಿ ಸ್ತಿçÃಯಾಗಿದ್ದು ಅಗಸ್ತö್ಯನ ಪತ್ನಿಯಾಗಿರಲೂ, ಇನ್ನೊಂದು ರೂಪದಲ್ಲಿ ನದಿಯಾಗಿ ಹರಿಯಲೂ ಕಾವೇರಿ ಒಪ್ಪಿದಳು. ಪೂರ್ವ ಸಮುದ್ರವನ್ನು ಸೇರುವವರೆಗೆ ದಾರಿಯಲ್ಲಿ ಕಾವೇರಿ ಯಾತ್ರಾ ಸ್ಥಳಗಳ ಮತ್ತು ಕ್ಷೇತ್ರಗಳ ಮೂಲಕ ಹರಿದು ಹೋಗಬೇಕೆಂಬುದನ್ನು ಅಗಸ್ತö್ಯ ತಿಳಿಸಿದ. ಕಾವೇರಿ ದೇವತೆಯನ್ನು ಕೊಡವರು ತಮ್ಮ ಕುಲದೇವತೆಯೆಂದು ನಂಬಿ ಪೂಜಿಸುತ್ತಾರೆ. ಕಾವೇರಿ ದೇವತೆಯ ವರದಿಂದ ಕೊಡಗಿನಲ್ಲಿ ವ್ಯವಸಾಯಕ್ಕೆ ಅಗತ್ಯವಾದ ಮಳೆಯಾಗುತ್ತದೆಂದೂ ಕೊಡಗಿನವರ ಮುಖ್ಯ ಆಹಾರ ಧಾನ್ಯವಾದ ಭತ್ತದ ಬೆಳೆ ಸಮೃದ್ಧವಾಗಿ ಬೆಳೆಯುತ್ತದೆಂದೂ ಕೊಡಗಿನ ಜನ ನಂಬಿದ್ದಾರೆ.
ಕಾವೇರಿಯ ಕ್ಷೇತ್ರಗಳು: ಉಗಮದಿಂದ ಸಂಗಮದವರೆಗೂ ಕಾವೇರಿಯ ದಂಡೆಯ ಮೇಲೆ ಅನೇಕ ಪುಣ್ಯ ಕ್ಷೇತ್ರಗಳಿವೆ. ಮೊಟ್ಟ ಮೊದಲನೆಯ ಸ್ಥಳ ತಲಕಾವೇರಿ. ವರ್ಷವಿಡೀ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ದೇವರಿಗೆ ಪೂಜೆ ಮಾಡಿಸುವುದು ಪುಣ್ಯಕರವೆಂದು ಜನರು ನಂಬಿದ್ದರು. ತುಲಾ ಮಾಸದಲ್ಲಿ ಕಾವೇರಿ ಸ್ನಾನ ಮಾಡುವುದರಿಂದ ಹೆಚ್ಚು ಪುಣ್ಯ ಉಂಟಾಗುತ್ತದೆAಬುದು ಜನರಿಗೆ ಪುರಾಣದಿಂದ ಪ್ರಾಪ್ತವಾದ ನಂಬಿಕೆ. ತುಲಾ ಸಂಕ್ರಮಣದ ದಿವಸ ಕಾವೇರಿ ತೀರ್ಥ ಆ ಮುಹೂರ್ತಕ್ಕೆ ಸರಿಯಾಗಿ ತೀರ್ಥ ಕುಂಡಿಕೆಯಲ್ಲಿ ಉಕ್ಕುತ್ತದೆ. ಆ ಸಮಯಕ್ಕೆ ಸರಿಯಾಗಿ ತೀರ್ಥಕುಂಡಿಕೆಯ ಇಬ್ಬದಿಗಳಲ್ಲಿ ನಿಂತಿರುವ ಅರ್ಚಕರು ತಾಮ್ರದ ತಂಬಿಗೆ ಗಳಲ್ಲಿ ತೀರ್ಥಕುಂಡಿಕೆಯ ತೀರ್ಥವನ್ನು ತುಂಬಿಸಿಕೊAಡು ಅದರ ಮುಂದಿನ ಕೊಳದಲ್ಲಿ ಸ್ನಾನ ಮಾಡಲು ಇಳಿದು ನಿಂತ ಜನರ ಸಮೂಹದ ಮೇಲೆ ಎರಚುತ್ತಾರೆ. ಅನಂತರ ಆ ದಿವಸ ಅಲ್ಲಿ ನೆರೆದ ಯಾತ್ರಿಕರೆಲ್ಲರೂ ತೀರ್ಥ ಸ್ನಾನ ಮಾಡುತ್ತಾರೆ. ಯಾತ್ರಾರ್ಥಿಗಳಿಂದ ವರ್ಷವಿಡೀ ಪಡೆದುಕೊಂಡ ಪಾಪವನ್ನು ತೊಳೆದುಕೊಳ್ಳಲು ಗಂಗೆಯೂ ಕಾವೇರಿಗೆ ಬಂದು ಆ ದಿನದಂದು ಮೀಯುವಳೆಂದು ಜನರ ನಂಬಿಕೆ. ಕೊಡಗಿನಲ್ಲಿ ಕಾವೇರಿಯ ದಂಡೆಯ ಮೇಲಣ ಇತರ ಪವಿತ್ರ ಕ್ಷೇತ್ರಗಳು ಭಾಗಮಮಡಲ, ಹರಿಶ್ಚಂದ್ರ, ಬಲಮುರಿ, ಗುಹ್ಯ ಮತ್ತು ರಾಮಸ್ವಾಮಿ ಕಣಿವೆ, ಹಾಸನ ಜಿಲ್ಲೆಯ ರಾಮನಾಥಪುರ ಒಂದು ಪ್ರಸಿದ್ಧ ಯಾತ್ರಾಸ್ಥಳ. ಚುಂಚನಕಟ್ಟೆಯಲ್ಲಿ ಕಾವೇರಿಯ ಜಲಪಾತ ಪ್ರೇಕ್ಷಣೀಯ. ದಂಡೆಯ ಮೇಲಣ ಶ್ರೀರಾಮ ದೇವಸ್ಥಾನ ಪ್ರಸಿದ್ಧವಾಗಿದೆ. ಇಲ್ಲೂ ರಾಮನಾಥಪುರದಲ್ಲೂ ವರ್ಷಕ್ಕೊಮ್ಮೆ ಜಾತ್ರೆಗಳು ಜರುಗುತ್ತವೆ. ಕೃಷ್ಣರಾಜಸಾಗರದ ಬೃಂದಾವನವAತೂ ನಯನ ಮನೋಹರವಾದದ್ದು. ಇಲ್ಲಿ ಕಟ್ಟೆಯ ಬದಿಗೆ ಕಾವೇರಿಯ ಪ್ರತಿಮೆಯನ್ನು ಪ್ರತಿಷ್ಠಿಸಲಾಗಿದೆ. ಶ್ರೀರಂಗಪಟ್ಟಣಕ್ಕೆ ಸ್ವಲ್ಪ ಮೇಲಕ್ಕಿರುವ ಪುಟ್ಟ ನಡುಗುಡ್ಡೆ ಪಕ್ಷಿಗಳಿಗೆ ಪ್ರಸಿದ್ಧ ವಾಗಿದೆ. ರಂಗನತಿಟ್ಟು ಎಂದು ಪ್ರಸಿದ್ಧವಾದ ಇಲ್ಲಿಯ ಪಕ್ಷಿಧಾಮಕ್ಕೆ ವಿಶ್ವದ ನಾನಾ ಕಡೆಗಳಿಂದ ಬಗೆ-ಬಗೆಯ ಪಕ್ಷಿಗಳು ವಲಸೆ ಬರುತ್ತವೆ.
ಶ್ರೀರಂಗಪಟ್ಟಣದ ಬಳಿ ಕವಲೊಡೆಯುವ ಕಾವೇರಿಯ ಒಂದು ಶಾಖೆ ಸ್ವಲ್ಪ ದೂರ ಪಶ್ಚಿಮಾಭಿಮುಖವಾಗಿ ಹರಿಯುತ್ತದೆ. ಈ ಕಾರಣದಿಂದಾಗಿ ಆ ಭಾಗ ಹಿಂದೂಗಳಿಗೆ ಪವಿತ್ರ ಶುಭಕಾರ್ಯಗಳಿಗೂ ಶ್ರಾದ್ಧಾದಿಗಳಿಗೂ ಅದು ಹೇಳಿ ಮಾಡಿಸಿದಂತಿರುವ ಸ್ಥಳ. ಕಾವೇರಿಯ ಮೂರು ದೊಡ್ಡ ದ್ವೀಪಗಳ ಪೈಕಿ ಮೊದಲನೆಯದು ಶ್ರೀರಂಗಪಟ್ಟಣ. ಇಲ್ಲೂ ಎರಡನೆಯ ದ್ವೀಪವಾದ ಶಿವಸಮುದ್ರದಲ್ಲೂ, ಮೂರನೆಯದಾದ ಶ್ರೀರಂಗAನಲ್ಲೂ ರಂಗನಾಥ ವಿಗ್ರಹಗಳಿವೆ. ಶ್ರೀರಂಗಪಟ್ಟಣ ಇತಿಹಾಸ ಪ್ರಸಿದ್ಧವಾದ ಸ್ಥಳವೂ ಹೌದು. ತಲಕಾಡಿನ ಬಳಿಯಲ್ಲಿ ಮಾಧವ ಮಂತ್ರಿ ಅಣೆಕಟ್ಟೆ ಇದೆ. ಹೆದೆಯೇರಿಸಿದ ಬಿಲ್ಲಿನಂತೆ ಬಾಗಿ ಹರಿಯುವ ನದಿಗೆ ಇಲ್ಲೊಂದು ಮಡು ಏರ್ಪಟ್ಟಿದೆ. ಮಾಲಿಂಗಿ ಮಡುವೆಂದು ಇದು ಪ್ರಸಿದ್ಧವಾಗಿದೆ. ತಲಕಾಡು ಕೂಡ ಇತಿಹಾಸ ಪ್ರಸಿದ್ಧಿ ಪಡೆದ ಸ್ಥಳ. ಗಂಗರಸರು ಇಲ್ಲಿ ರಾಜ್ಯವಾಳಿದರು. ತಲಕಾಡಿನ ಪಂಚಲಿAಗಗಳು ಹನ್ನೆರಡು ವರ್ಷಗಳಿಗೊಮ್ಮೆ ಅಸಂಖ್ಯಾತ ಯಾತ್ರಿಕರನ್ನು ಆಕರ್ಷಿಸುತ್ತವೆ.
ಶ್ರೀರಂಗನಿAದಾಚೆಗೆ ಕಲ್ಲಣೈಯಲ್ಲಿ ಚೋಳರಾಜ ಕರಿಕಾಲನ ಭವ್ಯ ಪ್ರತಿಮೆಯಿದೆ. ಕಾವೇರಿಯನ್ನು ನೀರಾವರಿಗೆ ಉಪಯೋಗಿಸಿಕೊಂಡ ಮೊದಲ ದೊರೆ ಈತ ತಿರುಚ್ಚಿರಪ್ಪಳ್ಳಿ ಮತ್ತು ತಂಜಾವೂರು ಜಿಲ್ಲೆಗಳಲ್ಲಿ ಅಲ್ಲಲ್ಲಿ ಕಲ್ಲಿನಿಂದ ಕಾವೇರಿ ನದಿಗೆ ಅಣೆೆಕಟ್ಟು ಕಟ್ಟಿಸಿದ್ದ. ತಿರುಚ್ಚಿರಪಳ್ಳಿಯ ಒರೈಯೂರಿನಿಂದ ಕಾವೇರಿ ಪೂಂಪಟ್ಟಿಣAಗೆ ತನ್ನ ರಾಜಧಾನಿ ಬದಲಾಯಿಸಿದ. ಅಲ್ಲಿಂದ ಮುಂದೆ ಸಿಕ್ಕುವ ಇನ್ನೊಂದು ಮುಖ್ಯ ಸ್ಥಳವೆಂದರೆ ಕುಂಭಕೋಣA. ಇಲ್ಲೂ ಹನ್ನೆರಡು ವರ್ಷಗಳಿಗೊಮ್ಮೆ ಜಾತ್ರೆ ನಡೆಯುತ್ತದೆ.
ತಂಜಾವೂರಿನಿAದೀಚೆಗೆ ಸಿಗುವ ಪವಿತ್ರ ಸ್ಥಳ ತಿರುವಾರೂರು. ಮಯೂರಂ. ಇನ್ನೊಂದು ತಿರುವೈಯಾರ್ ತ್ಯಾಗರಾಜರ ತಪೋಭೂಮಿ. ಅಲ್ಲಿ ಇವರ ಸಮಾಧಿಯಿದೆ. ಪ್ರತಿವರ್ಷವೂ ಇವರ ಪುಣ್ಯತಿಥಿಯಂದು ದಕ್ಷಿಣ ದೇಶದ ಸಂಗೀತ ಪ್ರೇಮಿಗಳು ಇಲ್ಲಿ ಸೇರಿ ತ್ಯಾಗರಾಜರನ್ನು ಆರಾಧಿಸು ತ್ತಾರೆ. ಅನಂತರದ ಪವಿತ್ರ ಕ್ಷೇತ್ರ ಚಿದಂಬರA, ಇಲ್ಲಿ ಒಂದೇ ಗುಡಿಯಲ್ಲಿ ಶಿವ, ವಿಷ್ಣು ಇಬ್ಬರಿಗೂ ಪೂಜೆ ಸಲ್ಲುತ್ತದೆ. ಕಾವೇರಿ ಕಡಲಲ್ಲಿ ಐಕ್ಯವಾಗುವ ಎಡೆಯೂ ಪವಿತ್ರವೇ. ಅದು ಸುಪ್ರಸಿದ್ಧವಾದ ಕಾವೇರಿ ಪೂಂಪಟ್ಟಿಣA.
ಕಾವೇರಿ ಪೂಂಪಟ್ಟಿಣA: ತಮಿಳುನಾಡಿನ ಪೂರ್ವ ತೀರದಲ್ಲಿ ಕಾವೇರಿ ನದಿ ಸಮುದ್ರವನ್ನು ಸೇರುವೆಡೆಯಲ್ಲಿರುವ ಒಂದು ಹಳ್ಳಿ, ಚೋಳರ ಆಳ್ವಿಕೆಯ ಮೊದಲ ಕಾಲದಲ್ಲಿ ಇದೊಂದು ಮುಖ್ಯ ರೇವುಪಟ್ಟಣವಾಗಿತ್ತೆಂದು ತತ್ಕಾಲೀನ ಮತ್ತು ಈಚೆಗಿನ ಸಾಹಿತ್ಯದಿಂದಲೂ ವಿದೇಶೀಯರ ಬರವಣಿಗೆಗಳಿಂದಲೂ ತಿಳಿದು ಬಂದಿದೆ. ಈ ಸ್ಥಳದಲ್ಲಿ ಗತಕಾಲದ ಅನೇಕ ದೇವಾಲಯಗಳೂ ಇನ್ನಿತರ ಅವಶೇಷಗಳೂ ಕಾಣಬರುತ್ತವೆ. ಇಲ್ಲಿ ಕ್ರಿಸ್ತಶಕದ ಆರಂಭ ಕಾಲಕ್ಕೆ ಸೇರಿದ ನಾಣ್ಯಗಳು ಮತ್ತು ಮಡಕೆ ಚೂರುಗಳು ದೊರಕಿದುದರಿಂದ ಪುರಾತತ್ವಜ್ಞರು ಭೂಶೋಧನೆ ನಡೆಸಿದರು. ದೋಣಿಗಳಲ್ಲಿ ಸರಕುಗಳನ್ನು ತುಂಬುವ ಮತ್ತು ಅವುಗಳಿಂದ ಇಳಿಸುವ ಸಲುವಾಗಿ ಕ್ರಿ. ಪೂ. ೩ನೆಯ ಶತಮಾನದ ಒಂದು ಬಂದರು ಕಟ್ಟೆ, ಕಾವೇರಿ ನದಿಯಿಂದ ನೀರನ್ನು ಸಂಗ್ರಹಿಸಲು ಸುಟ್ಟ ಇಟ್ಟಿಗೆಗಳಿಂದ ಕಟ್ಟಿದ ಕೊಳ, ಬೌದ್ಧ ವಿಹಾರವೊಂದರಲ್ಲಿ ೮ ಚದರದ ವರ್ಣಚಿತ್ರಗಳನ್ನುಳ್ಳ ಏಳು ಕೋಣೆಗಳ ಒಂದು ಭಾಗ, ಸುಟ್ಟ ಮಣ್ಣಿನ ಮತ್ತು ಸುಣ್ಣದ ಶಿಲ್ಪಗಳಿಂದ ಅಲಂಕೃತವಾದ ಕಂಚಿನ ಧ್ಯಾನಿ ಬುದ್ಧ ವಿಗ್ರಹ, ಬುದ್ಧ ಪದವಿರುವ ಶಿಲೆ ಇವು ಇಲ್ಲಿ ಸಿಕ್ಕಿರುವ ಇತರ ಮುಖ್ಯ ಅವಶೇಷಗಳು. (ಮುಗಿಯಿತು)
(ಸಂಗ್ರಹ) ಜಿ. ಚಿದ್ವಿಲಾಸ್
ಮಡಿಕೇರಿ.