ಕಣಿವೆ, ಆ. ೨೧ : ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮೈಸೂರಿನಲ್ಲಿ ನಡೆಯಲಿರುವ ದಸರಾ ಮೆರವಣಿಗೆಗೆ ಆನೆಗಳ ಆಯ್ಕೆ ಆಗಬೇಕಿದ್ದು, ಕೊಡಗಿನ ದುಬಾರೆ ಹಾಗೂ ಮತ್ತಿಗೋಡು ಶಿಬಿರಗಳಿಂದ ಸಾಕಾನೆಗಳನ್ನು ಆಯ್ಕೆ ಮಾಡಲಾಗುತ್ತೆ.

ಈ ಸಂಬAಧ ಇಂದು ದುಬಾರೆ ಸಾಕಾನೆ ಶಿಬಿರಕ್ಕೆ ಆಗಮಿಸಿದ್ದ ಮೈಸೂರು

(ಮೊದಲ ಪುಟದಿಂದ) ವನ್ಯಜೀವಿ ವಿಭಾಗದ ಡಿ.ಎಫ್.ಒ ವಿ.ಕರಿಕಾಳನ್ ಆನೆಗಳನ್ನು ಆಯ್ಕೆ ಮಾಡುವ ಸಂಬAಧ ಪರಿಶೀಲಿಸಿದರು.

ಸಾಕಾನೆಗಳಾದ ಧನಂಜಯ, ಗೋಪಿ, ಪ್ರಶಾಂತ, ವಿಕ್ರಮ, ಹರ್ಷ, ಲಕ್ಷ್ಮಣ ಹಾಗೂ ಕಾವೇರಿ ಸೇರಿದಂತೆ ಒಟ್ಟು ೭ ಆನೆಗಳನ್ನು ಗುರುತಿಸಲಾಯಿತು. ಈ ಸಂದರ್ಭ ಸೋಮವಾರಪೇಟೆ ಉಪವಿಭಾಗದ ಎ.ಸಿ.ಎಫ್ ನೆಹರು, ಕುಶಾಲನಗರ ವಲಯದ ಆರ್.ಎಫ್.ಒ ಅನನ್ಯ ಕುಮಾರ್, ಪಶು ವೈದ್ಯ ಡಾ.ಚಿಟ್ಟಿಯಪ್ಪ ಹಾಗೂ ದುಬಾರೆ ವಿಭಾಗದ ಉಪವಲಯ ಅರಣ್ಯಧಿಕಾರಿ ರಂಜನ್ ಹಾಜರಿದ್ದರು.

ಅಂತಿಮ ಆಯ್ಕೆ ಪ್ರಕ್ರಿಯೆಯನ್ನು ಬೆಂಗಳೂರು ವನ್ಯಜೀವಿ ವಿಭಾಗದ ಪಿ.ಸಿ.ಸಿ.ಎಫ್ ಅವರು ಶೀಘ್ರದಲ್ಲಿ ನಡೆಸಲಿದ್ದಾರೆ.