ಪೊನ್ನAಪೇಟೆ, ಆ. ೨೨: ಮನೆಯ ಹೆಂಚು ತೆಗೆದು ಮನೆಗೆ ನುಗ್ಗಿ ಮನೆಯಲ್ಲಿದ್ದ ಬೆಲೆಬಾಳುವ ಮದ್ಯದ ಬಾಟಲಿಗಳನ್ನು ಕದ್ದು ತಲೆಮರೆಸಿ ಕೊಂಡಿದ್ದ ಆರೋಪಿ ಗಣೇಶ್ (೨೮) ಎಂಬವನನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ.
ತಾ. ೧೬ ರಂದು ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ದೇವನೂರು ಗ್ರಾಮದ ಅಳಮೇಂಗಡ ಸುಜುದೇವಯ್ಯ ಎಂಬವರ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಆರೋಪಿ ಗಣೇಶ್ ಮನೆಯ ಹೆಂಚುಗಳನ್ನು ತೆಗೆದು, ಮನೆಯೊಳಗೆ ನುಗ್ಗಿ ಮನೆಯ ಶೋಕೇಸ್ನಲ್ಲಿಟ್ಟಿದ್ದ ತಲಾ ಹತ್ತು ಸಾವಿರ ರೂಪಾಯಿ ಬೆಲೆಬಾಳುವ ೪ ಮದ್ಯದ ಬಾಟಲಿಗಳನ್ನು ಕಳವು ಮಾಡಿದ್ದಾನೆ. ಈ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇಂದು ದೇವನೂರು ಗ್ರಾಮದಲ್ಲಿ ಆರೋಪಿ ಪಣಿಯರವರ ಗಣೇಶ್ ಅಡ್ಡಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಪೊನ್ನಂಪೇಟೆ ಠಾಣಾಧಿಕಾರಿ ಡಿ. ಕುಮಾರ್ ನೇತೃತ್ವದ ಪೊಲೀಸರ ತಂಡ ದೇವನೂರಿಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆಯ ಸಂದÀರ್ಭ ಗಣೇಶ್ ಮದ್ಯದ ಬಾಟಲಿಗಳನ್ನು ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದು, ಖಾಲಿ ಮದ್ಯದ ಬಾಟಲಿಗಳನ್ನು ತೋಟದೊಳಗೆ ಮಣ್ಣಿನಡಿಯಲ್ಲಿ ಹೂತುಹಾಕಿರುವು ದನ್ನು ಪೊಲೀಸರಿಗೆ ತೋರಿಸಿದ್ದಾನೆ.
ಆರೋಪಿ ಗಣೇಶನನ್ನು ವಿಚಾರಣೆಯ ನಂತರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
-ಚನ್ನನಾಯಕ