ಮಡಿಕೇರಿ, ಆ. ೨೨: ಎ.ಕೆ. ಸುಬ್ಬಯ್ಯ ಪೊನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ ಹಾಗೂ ಶಕ್ತಿ ದಿನಪತ್ರಿಕೆ ಸಹಯೋಗದಲ್ಲಿ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ತಾ. ೨೭ ರಂದು ನಡೆಯಲಿದೆ.
ಬಿಟ್ಟಂಗಾಲದ ಆರ್.ಕೆ. ಫಾರ್ಮ್ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿಗಳಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಮಾಜಿ ಸಚಿವ ಎಂ.ಸಿ. ನಾಣಯ್ಯ, ಕಲಾಸಿಂಚನ ಯೋಗಸ್ಥಳ ಪೌರಾಣಿಕ ಕಲಾ ಸಂಸ್ಥೆಯ ಕಲಾನಿರ್ದೇಶಕಿ ಯಾಮಿನಿ ಮುತ್ತಣ್ಣ ಕೋಟೇರ, ‘ಶಕ್ತಿ’ ಸಂಪಾದಕ ಚಿದ್ವಿಲಾಸ್ ಅವರು ಭಾಗವಹಿಸಲಿದ್ದಾರೆ ಎಂದು ವ್ಯವಸ್ಥಾಪಕ ಟ್ರಸ್ಟಿ ಎ.ಎಸ್. ಪೊನ್ನಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.