ಮಡಿಕೇರಿ, ಆ. ೨೨: ಕೊಡಗಿನ ಐತಿಹಾಸಿಕ ದೇವಾಲಯಗಳ ಹೆಸರನ್ನು ಪ್ರವಾಸೋದ್ಯಮ ಪಟ್ಟಿಯಿಂದ ಕೈ ಬಿಡಬೇಕು ಮತ್ತು ವಸ್ತç ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಸಾಮಾಜಿಕ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ದೇವಾಲಯಗಳು ಪ್ರವಾಸಿ ತಾಣಗಳಾಗಿ ಮಾರ್ಪಡುತ್ತಿದ್ದು, ಪಾವಿತ್ರö್ಯತೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿವೆ. ದೇವಾಲಯಗಳು ಧಾರ್ಮಿಕ ಶ್ರದ್ಧಾ ಕೇಂದ್ರಗಳಾಗಿಯೇ ಉಳಿದುಕೊಳ್ಳ ಬೇಕು. ವಸ್ತç ಸಂಹಿತೆ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಮುಖ್ಯ ದ್ವಾರದಲ್ಲೇ ಜನ ಜಾಗೃತಿ ಮೂಡಿಸಬೇಕು, ಮದ್ಯಪಾನ, ಮಾಂಸಾಹಾರ ಸೇವನೆ ಮಾಡಿ ದೇವಾಲಯಕ್ಕೆ ಬರುವವರನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಈ ಬಗ್ಗೆ ದೇವಾಲಯದ ಮುಂಭಾಗ ದಲ್ಲಿ ಸೂಚನಾ ಫಲಕವನ್ನು ಕಡ್ಡಾಯ ವಾಗಿ ಅಳವಡಿಸ ಬೇಕೆಂದರು. ಪಾವಿತ್ರö್ಯತೆಗೆ ಒತ್ತು ನೀಡುವ ಸಲುವಾಗಿ ಅನ್ಯ ಧರ್ಮದವರು ದೇವಾಲಯವನ್ನು ಪ್ರವೇಶಿಸುವುದನ್ನು ನಿಷೇಧಿಸಬೇಕು. ನಗರದ ಶ್ರೀ ಓಂಕಾರೇಶ್ವರ ದೇವಾಲಯ ಸಮಿತಿ ವಿಸರ್ಜನೆಯಾಗಿದ್ದು, ತಕ್ಷಣ ನೂತನ ಸಮಿತಿ ರಚನೆಯಾಗಬೇಕು. ಶ್ರೀ ಓಂಕಾರೇಶ್ವರ ದೇವಸ್ಥಾನಕ್ಕೆ ಪ್ರವೇಶಿಸಲು ಶ್ರೀ ಆಂಜನೇಯ ದೇವಸ್ಥಾನದ ಮುಖ್ಯ ದ್ವಾರವನ್ನೇ ಬಳಸಿ ಉಳಿದ ಎಲ್ಲಾ ದ್ವಾರಗಳನ್ನು ಮುಚ್ಚಿದಲ್ಲಿ ವಿನಾಕಾರಣ ಜನರ ಓಡಾಟವನ್ನು ತಪ್ಪಿಸಬಹುದಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭ ಸಾಮಾಜಿಕ ಕಾರ್ಯಕರ್ತರುಗಳಾದ ಉಮೇಶ್ ಗೌಡ, ಶ್ರೀನಿವಾಸ್ ರೈ, ಅಜಿತ್ ಕೊಟ್ಟಕೇರಿಯನ, ಕವನ್ ಕಾವೇರಪ್ಪ, ಮತ್ತಿತರರು ಹಾಜರಿದ್ದರು.