ಶನಿವಾರಸAತೆ, ಆ. ೨೨: ದುಂಡಳ್ಳಿ ಗ್ರಾಮದ ಪಂಚಾಯಿತಿ ವ್ಯಾಪ್ತಿಯ ದೊಡ್ಡಕೊಳತ್ತೂರು ಮತ್ತು ಚೀಕನಳ್ಳಿ ಗ್ರಾಮಗಳಲ್ಲಿ ರೈತರು ಹರ್ಷದಿಂದ ನಾಟಿಯಲ್ಲಿ ತೊಡಗಿಸಿಕೊಂಡು ನಾಟಿ ಕೆಲಸ ಮುಗಿಯುವ ಹಂತಕ್ಕೆ ತಲುಪಿದೆ.

ದೊಡ್ಡಕೊಳತ್ತೂರು ಗ್ರಾಮದ ರೈತರಾದ ಗ್ರಾಮ ಪಂಚಾಯಿತಿ ಸದಸ್ಯ ಡಿ.ಪಿ. ಬೋಜಪ್ಪ, ರೈತ ವಸಂತ ಕುಮಾರ್ ಅವರಿಗೆ ಸೇರಿದ ಗದ್ದೆಯಲ್ಲಿ ತಾ. ೧೫ ರಂದು ನಾಟಿ ಮಾಡಿಸಲಾಯಿತು. ಈ ಸಂದರ್ಭ ಗ್ರಾಮದ ರೈತ ಪ್ರಮುಖರಾದ ಸಿ.ಕೆ. ಕುಮಾರಪ್ಪ, ಎ.ಡಿ. ದೊಡ್ಡೇಗೌಡ, ಡಿ.ಪಿ. ಬಸವರಾಜ್ ಇತರರು ಹಾಜರಿದ್ದರು.