ಸೋಮವಾರಪೇಟೆ, ಆ. ೨೨: ಸಮೀಪದ ಬಾಣಾವರ ಚೆಕ್‌ಪೋಸ್ಟ್ ಬಳಿಯಿರುವ ಅರಣ್ಯ ಇಲಾಖಾ ವಸತಿ ಗೃಹದ ಮುಂಭಾಗ ಕಳೆದ ೨೦ ದಿನಗಳಿಂದ ದ್ವಿಚಕ್ರ ವಾಹನವೊಂದು ನಿಲುಗಡೆಗೊಂಡಿದ್ದು, ಹಲವಷ್ಟು ಅನುಮಾನಗಳಿಗೆ ಕಾರಣವಾಗಿತ್ತು.

ಕಳೆದ ೨೦ ದಿನಗಳ ಹಿಂದೆ ಕುಟುಂಬವೊAದು ಈ ಬೈಕ್ (ಕೆ.ಎ. ೦೩ ಇವಿ ೧೭೯೧)ನಲ್ಲಿ ಬಂದಿದ್ದು, ಅದನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಬೇರೊಂದು ವಾಹನದಲ್ಲಿ ಅಲ್ಲಿಂದ ತೆರಳಿತ್ತು. ಬೈಕ್ ನಿಲುಗಡೆಗೊಳಿಸುತ್ತಿರುವ ಬಗ್ಗೆ ಯಾರಿಗೂ ಮಾಹಿತಿ ನೀಡಿರಲಿಲ್ಲ. ೨೦ ದಿನಗಳಿಂದಲೂ ಅನಾಥವಾಗಿದ್ದ ಈ ಬೈಕ್‌ನ ಬಗ್ಗೆ ಸ್ಥಳೀಯರು ಸೋಮವಾರಪೇಟೆ ಪೊಲೀಸರಿಗೆ ಮಾಹಿತಿ ನೀಡಿದ ಮೇರೆ, ಸ್ಥಳಕ್ಕೆ ತೆರಳಿದ ಪೊಲೀಸರು ಬೈಕ್‌ನ್ನು ಪರಿಶೀಲಿಸಿ, ಮಾಲೀಕರ ಪತ್ತೆಗೆ ಕ್ರಮ ವಹಿಸಿದ್ದಾರೆ.