ಮಡಿಕೇರಿ, ಆ. ೨೧: ಟೋಕಿಯೋ ದಲ್ಲಿ ಜರುಗಿದ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ರಾಜ್ಯದ ಮೂವರು ಕ್ರೀಡಾಪಟುಗಳು ಹಾಗೂ ಓರ್ವ ತರಬೆೆÃತುದಾರರಿಗೆ ಕರ್ನಾಟಕದ ರಾಜ್ಯಪಾಲರು ತಲಾ ೧ ಲಕ್ಷ ಪ್ರೋತ್ಸಾಹಧನ ಘೋಷಿಸಿದ್ದಾರೆ.
ಇವರ ಪೈಕಿ ಕೊಡಗಿನವರಾದ ಭಾರತ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಬಿ.ಎಸ್. ಅಂಕಿತಾ ಅವರು ಸೇರಿದ್ದಾರೆ. ಇವರಿಗೂ ರೂ. ೧ ಲಕ್ಷ ಪ್ರೋತ್ಸಾಹಧನ ಸಿಗಲಿದೆ. ಸದ್ಯದಲ್ಲಿ ಇವರನ್ನು ರಾಜಭವನದಲ್ಲಿ ರಾಜ್ಯಪಾಲರು ಸನ್ಮಾನಿಸಲಿರುವುದಾಗಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.