ಸುAಟಿಕೊಪ್ಪ, ಆ. ೨೧: ಕಂಬಿಬಾಣೆ ಗ್ರಾ.ಪಂ. ವ್ಯಾಪ್ತಿಯ ಅತ್ತೂರು ನಲ್ಲೂರು ಖಾಸಗಿ ಸಂಸ್ಥೆ ಕಾಫಿ ತೋಟಕ್ಕೆ ಅಸ್ಸಾಂ ಹಾಗೂ ಬಾಂಗ್ಲಾ ಮೂಲದ ಕೂಲಿ ಕಾರ್ಮಿಕರು ೨ ಬಸ್‌ಗಳಲ್ಲಿ ಆಗಮಿಸಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಅಸ್ಸಾಂ ಮೂಲದವರು ಎಂದು ಹೇಳಿಕೊಂಡು ಬಾಂಗ್ಲಾ ಇನ್ನಿತರ ದೇಶಗಳಿಂದ ನೂರಕ್ಕೂ ಮಿಕ್ಕಿ ಕಂಬಿಬಾಣೆಯ ಅತ್ತೂರು ನಲ್ಲೂರು ಖಾಸಗಿ ಸಂಸ್ಥೆ ಕಾಫಿ ತೋಟಕ್ಕೆ ಕೂಲಿ ಕಾರ್ಮಿಕರನ್ನು ಕರೆ ತರಲಾಗಿದೆ. ಈ ವಲಸಿಗ ಕೂಲಿ ಕಾರ್ಮಿಕರಿಂದ ಗ್ರಾಮಸ್ಥರಲ್ಲಿ ಕೊರೊನಾ ಮಹಾಮಾರಿಯು ದಿನದಿಂದ ದಿನಕ್ಕೆ ಉಲ್ಬಣಿಸುವುದೇ ಎನ್ನುವ ಆತಂಕವು ಸ್ಥಳೀಯರಿಗೆ ಆಗಿದೆ. ಆಡಳಿತ ಮಂಡಳಿಯವರು ಸಂಬAಧಿಸಿದ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಈ ಹಿಂದೆ ಗ್ರಾಮದಲ್ಲಿ ಕೊರೊನಾ ಬಾಧಿಸಲು ಹೊರ ರಾಜ್ಯಗಳಿಂದ ಆಗಮಿಸಿದ್ದ ಕಾರ್ಮಿಕರೇ ಕಾರಣವೆಂದು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕೆ.ಬಿ. ಕೃಷ್ಣ ಮತ್ತು ಆರ್.ಆರ್. ಮೋಹನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.