ಸೋಮವಾರಪೇಟೆ,ಆ.೨೧: ಕೊಡಗು ಜಿಲ್ಲಾ ಪತಂಜಲಿ ಯೋಗ ಸಮಿತಿ ಮತ್ತು ಭಾರತ್ ಸ್ವಾಭಿಮಾನ್ ಟ್ರಸ್ಟ್ ಅಧ್ಯಕ್ಷ ಎಂ.ಆರ್. ಚಂದ್ರಪ್ಪ ಮಾಸ್ಟರ್ (೭೮) ಅವರು ತಾ. ೨೧ರಂದು ಹೃದಯಾಘಾತದಿಂದ ನಿಧನರಾದರು.

ಶನಿವಾರಸಂತೆ ಸಮೀಪದ ಮುಳ್ಳೂರು ಗ್ರಾಮ ನಿವಾಸಿಯಾಗಿದ್ದ ಚಂದ್ರಪ್ಪ ಅವರ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ ನಂತರ ಬಾಬಾ ರಾಮ್‌ದೇವ್ ಅವರ ಪತಂಜಲಿ ಯೋಗ ಸಮಿತಿಗೆ ನೇಮಕಗೊಂಡು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಕಳೆದ ೧೪ ದಿನಗಳ ಹಿಂದಷ್ಟೇ ಇವರ ಪುತ್ರ ಉಮಾಪತಿ ಅವರು ನಿಧನರಾಗಿದ್ದರು. ಮೃತರು ಪತ್ನಿ ಕಮಲಮ್ಮ ಸೇರಿದಂತೆ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ದೇಹದಾನ: ಮೃತ ಚಂದ್ರಪ್ಪ ಅವರು ತಮ್ಮ ದೇಹದಾನಕ್ಕೆ ಒಪ್ಪಿಗೆ ನೀಡಿದ್ದರಿಂದ ಹಾಸನದ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಆಸ್ಪತ್ರೆಗೆ ಮೃತದೇಹ ಹಸ್ತಾಂತರಿಸಲಾಯಿತು. ಕೋವಿಡ್ ಪರೀಕ್ಷೆಯ ನಂತರ ದೇಹವನ್ನು ಆಸ್ಪತ್ರೆಗೆ ನೀಡಲಾಯಿತು.