ಕಡಂಗ, ಆ. ೨೧: ಶಿಕ್ಷಣ ಪಡೆಯದೆ ಲೌಕಿಕ ಶಿಕ್ಷಣ ಮಾತ್ರ ಪಡೆಯುತ್ತಿರುವ ವಿದ್ಯಾರ್ಥಿಗಳು ಹಾಗೂ ಉದ್ಯೋಗದಲ್ಲಿರುವ ಎಸ್ಎಸ್ಎಫ್ ಕಾರ್ಯಕರ್ತರಿಗೆ ಧಾರ್ಮಿಕ ವಿಜ್ಞಾನ ನೀಡುವ ಸಲುವಾಗಿ ಕರ್ನಾಟಕ ರಾಜ್ಯ ಸಮಿತಿ "ಸುಹ್ಬಾ" ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ.
ಇದನ್ನು ಜಾರಿಗೊಳಿಸುವ ಸಲುವಾಗಿ ವಿವಿಧ ಘಟಕಗಳ ನಾಯಕರನ್ನು ಒಳಗೊಂಡ "ಸುಹ್ಬಾ ಮೀಟ್" ಸುಂಟಿಕೊಪ್ಪದ ಮುನವ್ವಿರುಲ್ ಇಸ್ಲಾಂ ಮದರಸದಲ್ಲಿ ನಡೆಯಿತು.
ಕೊಡಗು ಜಿಲ್ಲಾ ಅಧ್ಯಕ್ಷರಾದ ಶಾಫಿ ಸಅದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ಸಮಿತಿ ದಅವಾ ಕಾರ್ಯದರ್ಶಿಗಳಾದ ಮುಸ್ತಫಾ ನಯಿಮಿ ಉಸ್ತಾದರು ತರಗತಿ ನಡೆಸಿದರು.
ಕಾರ್ಯಕರ್ತರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕೊಡಗು ಜಿಲ್ಲಾ ದಅವಾ ಕಾರ್ಯದರ್ಶಿ ರಫೀಕ್ ಲತೀಫಿ ತಿಳಿಸಿದ್ದಾರೆ. ಸಭೆಯಲ್ಲಿ ಜಿಲ್ಲಾ ಸಮಿತಿ ಕೋಶಾಧಿಕಾರಿ ಅಬ್ದುಲ್ ರಹೀಮ್ ಹೊಸತೋಟ, ಸ್ವಾಧಿಕ್ ಕರ್ಕಳ್ಳಿ ಮತ್ತಿತರರು ಹಾಜರಿದ್ದರು. ಕಮರುದ್ದೀನ್ ಸಖಾಫಿ ವಂದಿಸಿದರು.