ಕೂಡಿಗೆ, ಆ. ೨೧: ಕೂಡಿಗೆ ತೋಟಗಾರಿಕಾ ಕ್ಷೇತ್ರದ ಆವರಣದಲ್ಲಿ ಬೆಳೆಸಲಾದ ವಿವಿಧ ಬಗೆಯ ತೋಟಗಾರಿಕಾ ಗಿಡಗಳನ್ನು ರೈತರಿಗೆ ತಾಲೂಕು ಸಹಾಯಕ ತೋಟಗಾರಿಕಾ ನಿರ್ದೇಶಕ ಮಂಜುನಾಥ ಶೆಟ್ಟಿ ವಿತರಿಸಿದರು.
ತೋಟಗಾರಿಕಾ ಕ್ಷೇತ್ರದಲ್ಲಿ ರಾಷ್ಟಿçÃಯ ತೋಟಗಾರಿಕಾ ಮಿಷನ್ ಯೋಜನೆಯ ಅಡಿಯಲ್ಲಿ ಅಡಿಕೆ, ಕಾಳು ಮೆಣಸು ಕಡ್ಡಿ, ನಿಂಬೆ, ಕಿತ್ತಳೆ ಗಿಡ, ಸೇರಿದಂತೆ ವಿವಿಧ ಬಗೆಯ ತೋಟಗಾರಿಕಾ ಬೆಳೆಯ ಗಿಡಗಳನ್ನು ಸರಕಾರ ನಿಗದಿಪಡಿಸಿದ ದರದಲ್ಲಿ ವಿತರಣೆ ಮಾಡಲಾಗುತ್ತಿದೆ.
ಜೊತೆಯಲ್ಲಿ ಸೋಮವಾರಪೇಟೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಯ್ದ ೧೦ ರೈತ ಫಲಾನುಭವಿಗಳಿಗೆ ಅವರುಗಳ ಜಮೀನಿನ ದಾಖಲೆಗಳ ಆಧಾರದ ಮೇಲೆ ತೋಟಗಾರಿಕಾ ಪುನರ್‌ಚೇತನ ಯೋಜನೆಯ ಅಡಿಯಲ್ಲಿ ಉಚಿತವಾಗಿ ಗ್ರಾಮ ಪಂಚಾಯಿತಿ ಶಿಫಾರಸ್ಸು ಪತ್ರದ ಮೇಲೆ ಕಾಳು ಮೆಣಸು ಕಡ್ಡಿ ಮತ್ತು ಕಿತ್ತಳೆ ಗಿಡಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭ ಸೋಮವಾರಪೇಟೆ ಕೂಡಿಗೆ ತೋಟಗಾರಿಕಾ ಕ್ಷೇತ್ರದ ತೋಟಗಾರಿಕಾ ಸಹಾಯಕ ಆನಂದ ಸೇರಿದಂತೆ ಸಿಬ್ಬಂದಿ ವರ್ಗದವರು ಮತ್ತು ರೈತರು ಹಾಜರಿದ್ದರು.