ಮಡಿಕೇರಿ, ಆ. ೨೧: ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿರುವ ರಂಗಶಿಕ್ಷಣ ಡಿಪ್ಲೋಮಾಕ್ಕೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಶಿಕ್ಷಣದ ಅವಧಿ ಒಂದು ವರ್ಷವಾಗಿರುತ್ತದೆ. ಕನಿಷ್ಟ ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿಯಾಗಿದ್ದು ಪದವೀಧರರಿಗೆ ಆದ್ಯತೆ ಕೊಡಲಾಗುವುದು. ತರಬೇತಿ ಅವಧಿಯಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಇರುತ್ತದೆ. ಕರ್ನಾಟಕ ಹಾಗೂ ಭಾರತದ ರಂಗತಜ್ಞರು ಮತ್ತು ಅತಿಥಿ ಉಪನ್ಯಾಸಕರಿಂದ ತರಗತಿಗಳು ನಡೆಯುತ್ತದೆ.

ಒಂದು ವರ್ಷದಲ್ಲಿ ಭಾರತೀಯ ರಂಗಭೂಮಿ, ಕನ್ನಡ ರಂಗಭೂಮಿ ಮತ್ತು ಸಾಹಿತ್ಯ ಪರಂಪರೆ ಪಾಶ್ಚಾತ್ಯ ರಂಗಭೂಮಿ, ಅಭಿನಯ ಶಿಕ್ಷಣದಲ್ಲಿ ರಂಗಭೂಮಿ ಕುರಿತಾದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ತರಗತಿಗಳು ನಡೆಯುತ್ತವೆ. ಕಳರಿ, ಯೋಗ, ಕಥಕ್ಕಳಿ, ಯಕ್ಷಗಾನ, ಕಂಸಾಳೆ, ಹೆಜ್ಜೆ ಮೇಳ, ದೊಡ್ಡಾಟ, ವೀರಗಾಸೆ, ಪ್ರಸಾದನ, ಬೆಳಕಿನ ವಿನ್ಯಾಸ, ರಂಗ ವಿನ್ಯಾಸ, ವಸ್ತç ವಿನ್ಯಾಸ ಮುಂತಾದ ಕಾರ್ಯಾಗಾರಗಳ ಜೊತೆಗೆ ಕಾವ್ಯ ಸಿನೆಮಾ, ಚಿತ್ರಕಲೆ ಕುರಿತಾದ ಕಮ್ಮಟಗಳು ನಡೆಯುತ್ತದೆ. ಒಂದು ವರ್ಷದಲ್ಲಿ ೪ ನಾಟಕಗಳ ಅಭ್ಯಾಸ ಹಾಗೂ ಪ್ರದರ್ಶನ ನಡೆಯುತ್ತದೆ. ಒಂದು ವರ್ಷದ ತರಬೇತಿಯ ನಂತರ ಮರುವರ್ಷ ‘ಶಿವಸಂಚಾರ’ ತಿರುಗಾಟದಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿರುತ್ತದೆ.

ರಂಗಶಾಲೆಯ ವೆಬ್‌ಸೈಟ್ ತಿತಿತಿ.ಣheಚಿಡಿಣsಛಿhooಟsಚಿಟಿehಚಿಟಟi.oಡಿg ನಲ್ಲಿ ಪ್ರವೇಶ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಭರ್ತಿ ಮಾಡಿದ ಅರ್ಜಿಗಳನ್ನು ರಂಗಶಾಲೆಯ ವಿಳಾಸಕ್ಕೆ ಅಥವಾ ಅಂಚೆ ಮೂಲಕ ಕಳುಹಿಸಬಹುದು. ಅಂಚೆ ವಿಳಾಸ ಪ್ರಾಚಾರ್ಯರು, ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ, ಸಾಣೇಹಳ್ಳಿ-೫೭೭೫೧೫, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ. ಅರ್ಜಿ ಸಲ್ಲಿಸಲು ಆಗಸ್ಟ್ ೩೧ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ.೯೧೦೮೦೯೧೮೪೫, ೯೪೪೮೩೯೮೧೪೪ ಅನ್ನು ಸಂಪರ್ಕಿಸಿ, ವಾಟ್ಸ್ಆಪ್/ ಜಿ-ಮೇಲ್ ಮೂಲಕ ಅರ್ಜಿಯನ್ನು ಪಡೆದು ಭರ್ತಿಮಾಡಿದ ಅರ್ಜಿಯನ್ನು ಪುನಃ ಅದೇ ದೂರವಾಣಿ ಸಂಖ್ಯೆಗೆ ವಾಟ್ಸ್ಆಪ್ ಮಾಡಬಹುದು ಅಥವಾ ರಂಗಶಾಲೆಯ ಜಿ -ಮೇಲ್‌ಗೆ ರವಾನಿಸಬಹುದು.

ಅರ್ಜಿಗಳನ್ನು ಪರಿಶೀಲಿಸಿ ಸಂದರ್ಶನ ನಡೆಯುವ ದಿನಾಂಕವನ್ನು ಫೋನ್ ಅಥವಾ ಅಂಚೆಯ ಮೂಲಕ ಅಭ್ಯರ್ಥಿಗಳಿಗೆ ತಿಳಿಸಲಾಗುವುದು. ಸಂದರ್ಶನ ಹಾಗೂ ತರಗತಿಗಳಲ್ಲಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ ಹಾಗೂ ಸಂದರ್ಶನಕ್ಕೆ ಬರುವಾಗ ಎಲ್ಲಾ ಅಭ್ಯರ್ಥಿಗಳು ತಮ್ಮ ಊರಿನಿಂದಲೇ, ಕೋವಿಡ್ ಪರೀಕ್ಷೆ ಮಾಡಿಕೊಂಡು ಪ್ರಮಾಣ ಪತ್ರವನ್ನು ಕಚೇರಿಗೆ ಒಪ್ಪಿಸತಕ್ಕದ್ದು ಎಂದು ಶಿವಕುಮಾರ ರಂಗಪ್ರಯೋಗ ಶಾಲೆಯ ಪ್ರಾಚಾರ್ಯರು ತಿಳಿಸಿದ್ದಾರೆ.