ಮಡಿಕೇರಿ, ಆ. ೨೦: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಮಂಗಳೂರು ವಲಯ ವತಿಯಿಂದ ೧೯ ವರ್ಷದೊಳಗಿನವರ ಕ್ರಿಕೆಟ್ ತಂಡಕ್ಕೆ ಆಟಗಾರರ ಆಯ್ಕೆ ಶಿಬಿರ ಏರ್ಪಡಿಸಲಾಗಿದೆ. ತಾ. ೨೩, ೨೪, ೨೫ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ ೮ ಗಂಟೆಯಿAದ ಆಯ್ಕೆ ಶಿಬಿರ ನಡೆಯಲಿದೆ.
೧.೯.೨೦೦೨ ಹಾಗೂ ನಂತರ ಜನಿಸಿದವರು ಭಾಗವಹಿಸಬಹುದಾಗಿದೆ. ೧೬ ವರ್ಷದೊಳಗಿನವರಿಗೆ ಅವಕಾಶವಿರುವುದಿಲ್ಲ. ಆಸಕ್ತರು ಜನ್ಮ ದಿನಾಂಕ, ಶಾಲಾ ದಾಖಲಾತಿ ಯೊಂದಿಗೆ ಯಾವ ರೀತಿಯ ಆಟಗಾರ ಎಂಬ ವಿವರಣೆಯೊಂದಿಗೆ ಪಾಲ್ಗೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಗ್ಲೆನ್ ರೋಶನ್ ಡಿಸೋಜ (೦೮೨೪೪೨೬೨೨೩೩), ೯೮೪೫೫೦೫೨೦೦, ೯೯೮೦೦೬೦೩೨೨ ಸಂಪರ್ಕಿಸಬಹುದು ವಾಂಡರ‍್ಸ್ ಕಾರ್ಯದರ್ಶಿ ರಘು ಮಾದಪ್ಪ ತಿಳಿಸಿದ್ದಾರೆ.