ಮಡಿಕೇರಿ, ಆ. ೨೦: ಕೊಡಗಿನ ಮಹಿಳೆಯೋರ್ವರು ಸೇರಿದಂತೆ ಇಬ್ಬರು ವ್ಯಕ್ತಿಗಳ ಕುಟುಂಬದ ಸಮ್ಮತಿಯೊಂದಿಗೆ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರುಗಳ ಅಂಗಾAಗ ದಾನದೊಂದಿಗೆ ಒಟ್ಟು ೧೪ ಜನರ ಜೀವ ರಕ್ಷಣೆ ಸಾಧ್ಯವಾದ ವಿಚಾರವೊಂದು ವರದಿಯಾಗಿದೆ. ಮೆದುಳು ನಿಷ್ಕಿçಯಗೊಂಡಿದ್ದ ಪುರುಷ ಹಾಗೂ ಮೆದುಳಿನ ರಕ್ತ ಸ್ರಾವದಿಂದ ಬಳಲುತ್ತಿದ್ದ ಮಹಿಳೆಯ ಕುಟುಂಬದವರು ಅಂಗಾAಗ ದಾನಕ್ಕೆ ಸಮ್ಮತಿಸಿದ್ದ ೧೪ ಜೀವಗಳ ರಕ್ಷಣೆಯಾಗಿದೆ. ಹುಣಸೂರಿನ ಲಾರೆನ್ಸ್ (೪೦) ಹಾಗೂ ಕೊಡಗಿನವರಾದ ವೀರಾಜಪೇಟೆ ಕದನೂರಿನ ಮಾಳೇಟಿರ ಕಿರಣ್ ಅವರ ಪತ್ನಿ ಶೋಭಾ (೪೮) ಅವರುಗಳ ಅಂಗಾAಗ ದಾನ ಮಾಡಲಾಗಿದೆ. ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ ಈ ಮಾನವೀಯ ಪ್ರಸಂಗ ಜರುಗಿದೆ.

ಒಟ್ಟು ೪ ಕಿಡ್ನಿಗಳು, ೨ ಲಿವರ್‌ಗಳು, ೪ ಕಾರ್ನಿಯಾ ಮತ್ತು ೪ ಹೃದಯ ಕವಾಟಗಳನ್ನು ದಾನ ಮಾಡಿ ೧೪ ರೋಗಿಗಳ ಜೀವ ರಕ್ಷಿಸಲಾಗಿದೆ. ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಲಾರೆನ್ಸ್ ಅವರನ್ನು ಕುಟುಂಬದವರು ತಾ. ೧೬ರ ಮಧ್ಯಾಹ್ನ ೧೨.೪೦ರ ವೇಳೆಗೆ ಅಪೋಲೊ ಬಿಜಿಎಸ್ ಆಸ್ಪತ್ರೆಗೆ ಕರೆ ತಂದರು. ಬಳಿಕ ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿದ್ದರಿಂದ ತಾ. ೧೮ರಂದು ವೈದ್ಯರು ಮೆದುಳು ನಿಷ್ಕಿçಯವಾಗಿದೆ ಎಂದು ಘೋಷಿಸಿದರು. ಇದೇ ವೇಳೆ, ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ ಶೋಭ ಅವರನ್ನು ತಾ. ೧೬ರಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಆರೋಗ್ಯದಲ್ಲೂ ಚೇತರಿಕೆ ಕಾಣಿಸದೇ ಇದ್ದುದರಿಂದ ವೈದ್ಯರು ಮೆದುಳು ನಿಷ್ಕಿçಯವಾಗಿದೆ ಎಂದು ಪ್ರಕಟಿಸಿದರು.

ಬಳಿಕ ಆಸ್ಪತ್ರೆಯ ವೈದ್ಯ ಸಮೂಹ, ಎರಡೂ ಕುಟುಂಬದವರನ್ನು ಕರೆಯಿಸಿ ಮೆದುಳು ನಿಷ್ಕಿçಯವಾಗಿರುವ ಬಗ್ಗೆ ತಿಳಿಸಿ ಅಂಗಾAಗ ದಾನದ ಸಲಹೆ ನೀಡಿದ್ದಾರೆ. ಕುಟುಂಬದವರು ಸಮ್ಮತಿಸಿದ ಬಳಿಕ ವೈದ್ಯರು ೧೯೯೪ಎ ಮಾನವ ಅಂಗಾAಗ ಕಸಿ ಕಾಯ್ದೆಯಿಂದ ನಿಗದಿಪಡಿಸಿದ ಆಸ್ಪತ್ರೆಯ ಪ್ರೋಟೋಕಾಲ್ ಪ್ರಕಾರ ಅಂಗಾAಗ ಕಸಿ ಮಾಡಿದ್ದಾರೆ.

ಅಂಗಾAಗ ದಾನ : ೨ ಕಿಡ್ನಿ, ೨ ಲಿವರ್‌ಗಳನ್ನು ಮೈಸೂರು ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿಯೇ ಇರಿಸಿಕೊಂಡಿದ್ದರೆ, ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ, ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ತಲಾ ೧ ಕಿಡ್ನಿ ಕಳುಹಿಸಿಕೊಡಲಾಗಿದೆ.

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ, ಬೆಂಗಳೂರು ಜಯದೇವ ಇನ್ಸ್ಸ್ಟಿಟ್ಯೂಟ್ ಆಫ್ ಕಾಡಿಯಾಲಜಿಗೆ ತಲಾ ೨ ಹೃದಯ ಕವಾಟಗಳನ್ನು ಆ್ಯಂಬ್ಯುಲೆನ್ಸ್ನಲ್ಲಿ ಗುರುವಾರ ಬೆಳಿಗ್ಗೆ ಕಳುಹಿಸಲಾಯಿತು ಹಾಗೂ ೪ ಕಾರ್ನಿಯಾಗಳನ್ನು ಮೈಸೂರು ಐ ಬ್ಯಾಂಕ್‌ಗೆ ಒಪ್ಪಿಸಲಾಯಿತು ಎಂದು ಅಪೋಲೊ ಬಿಜಿಎಸ್ ಆಸ್ಪತ್ರೆ ಉಪಾಧ್ಯಕ್ಷ ಎನ್.ಜಿ. ಭರತೀಶರೆಡ್ಡಿ ತಿಳಿಸಿದ್ದಾರೆ.