ಮಡಿಕೇರಿ, ಆ. ೨೦: ಟೋಕಿಯೋ ಒಲಂಪಿಕ್ಸ್ನಲ್ಲಿ ಭಾರತ ಮಹಿಳಾ ಹಾಕಿ ತಂಡದ ಸಹಾಯಕ ತರಬೇತುದಾರರಾದ ಕೊಡಗಿನ ಕಂಬಿಬಾಣೆಯ ಅಂಕಿತಾ ಸುರೇಶ್ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಸನ್ಮಾನಿಸಿ ಗೌರವಿಸಿದರು.

ಅಂಕಿತಾ ಅವರಿಗೆ ರೂ. ೧೦ ಲಕ್ಷ ಪ್ರೋತ್ಸಾಹಕರ ಧನ ನೀಡಿ ಪುರಸ್ಕರಿಸಿದರು. ಅಂತೆಯೇ ಒಡಿಸ್ಸಾ ಮುಖ್ಯಮಂತ್ರಿ ಬಿಜು ಪಾಟ್ನಾಯಕ್ ಕೂಡ ಅಂಕಿತಾ ಸುರೇಶ್ ಹಾಗೂ ಭಾರತೀಯ ಮಹಿಳಾ ಹಾಕಿ ತಂಡದ ಆಟಗಾರ್ತಿಯನ್ನು ಒಡಿಸ್ಸಾ ರಾಜ್ಯದ ಪರವಾಗಿ ಸನ್ಮಾನಿಸಿ ಗೌರವಿಸಿದ್ದಾರೆ.