ಕಡಂಗ, ಆ. ೨೦: ಅರಪಟ್ಟು ಕಡಂಗ ವ್ಯಾಪ್ತಿಯಲ್ಲಿ ಕಳೆದ ಎರಡು ದಿನ ರಾತ್ರಿ ಸುರಿದ ಮಳೆಯಿಂದ ಚಿಕ್ಕ ಪುಟ್ಟ ಹಾನಿಯಾಗಿದೆ. ಪೈಸಾರಿ ಗ್ರಾಮದ ಅಜಾರುದ್ದಿನ್ ಅವರ ಮನೆಯ ಹಿಂಬದಿ ಗೋಡೆ ಕುಸಿತ ಉಂಟಾಗಿದೆ.

ನರಿಯAದಡ ಗ್ರಾಮ ಪಂಚಾಯಿತಿಯ ವಾರ್ಡ್ ಸದಸ್ಯ ಸುಬಿರ್ ನೇತೃತ್ವದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಮನೆಯನ್ನು ಪರಿಶೀಲಿಸಿ ಸರ್ಕಾರದಿಂದ ಸಿಗುವ ಪರಿಹಾರವನ್ನು ಶೀಘ್ರ ನೀಡುವುದಾಗಿ ಭರವಸೆ ನೀಡಿದರು.