ಗುಡ್ಡೆಹೊಸೂರು, ಆ. ೧೯: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಲ್ಯಾಂಪ್ಸ್ ಸಹಕಾರ ಸಂಘದ ಆವರಣದಲ್ಲಿ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಯ ಕಬ್ಬಿನಗದ್ದೆ ಗಿರಿಜನ ಹಾಡಿಯ ಒಟ್ಟು ೨೨ ಮಂದಿಗೆ ತಲಾ ೪ ಕುರಿಗಳನ್ನು ವಿತರಿಸಲಾಯಿತು.

ಶಾಸಕ ಅಪ್ಪಚ್ಚು ರಂಜನ್ ಫಲಾನುಭವಿಗಳಿಗೆ ಕುರಿಗಳನ್ನು ನೀಡಿ, ಅವುಗಳನ್ನು ಉತ್ತಮವಾಗಿ ಪಾಲನೆಮಾಡಿ ಮುಂದೆ ಆರ್ಥಿಕವಾಗಿ ಮುಂದುವರಿಯುವAತೆ ಸಲಹೆ ನೀಡಿದರು. ಈ ಕುರಿಗಳನ್ನು ಮಹರ್ಷಿ ವಾಲ್ಮಿಕಿ ಅಭಿವೃದ್ದಿ ನಿಗಮದ ವತಿಯಿಂದ ಗಿರಿಜನರಿಗೆ ನೇರಸಾಲ ಯೋಜನೆಯಡಿ ನೀಡಲಾಯಿತು.

ಈ ಸಂದರ್ಭ ಬಸವನಹಳ್ಳಿ ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ. ಚಂದ್ರ, ಜಿಲ್ಲಾ ವಾಲ್ಮೀಕಿ ಸಂಸ್ಥೆಯ ವ್ಯವಸ್ಥಾಪಕ ಚಂದ್ರಶೇಖರ್ ಪಶುವೈದ್ಯ ನಾಗರಾಜ್, ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ ಹನಿಕುಮಾರ್ ಮತ್ತು ಸಿಬ್ಬಂದಿ ಯಶವಂತ್, ಸ್ಥಳೀಯರಾದ ಎಂ.ಆರ್. ಉತ್ತಪ್ಪ ಮುಂತಾದವರು ಹಾಜರಿದ್ದರು.