ಮಡಿಕೇರಿ: ಸಮೀಪದ ಕಾಟಕೇರಿಯ ಕೂರನಬಾಣೆಯಲ್ಲಿ ಮದೆ ಗ್ರಾಮ ಪಂಚಾಯಿತಿ ಸದಸ್ಯ ಜಯರಾಜ್ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ಮದೆ ಗ್ರಾ.ಪಂ. ಉಪಾಧ್ಯಕ್ಷೆ ಪಿ.ಎ. ಚಂದ್ರಾವತಿ, ಮಾಜಿ ಅಧ್ಯಕ್ಷೆ ಬಿ.ಸಿ. ಗಿರಿಜಾ, ಬೆಟ್ಟಗೇರಿ ಗ್ರಾ.ಪಂ. ಸದಸ್ಯರಾದ ಜಲಜಾಕ್ಷಿ, ಬೈರೇಟಿರ ಚರ್ಮಣ, ಬೈರೇಟಿರ ಬೆಳ್ಯಪ್ಪ, ಕೊಂಬನ ಮಾಚಯ್ಯ, ಮುಕ್ಕಾಟಿರ ಪ್ರಕಾಶ್, ಯೋಧ ಯತೀಶ್, ಅಂಗನವಾಡಿ ಕಾರ್ಯಕರ್ತೆ ನಳಿನಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ನೆರೆದಿದ್ದವರಿಗೆ ಸಿಹಿ ಹಂಚಲಾಯಿತು.ವೀರಾಜಪೇಟೆ: ವೀರಾಜಪೇಟೆಯ ಎಸ್.ಕೆ.ಎಸ್.ಬಿ.ವಿ. ಕಲ್ಲುಬಾಣೆ ಸಮಿತಿ ವತಿಯಿಂದ ಬದ್ರಿಯಾ ಶಾಲಾ ಆವರಣದಲ್ಲಿ ಸ್ವಾತಂತ್ರೋತ್ಸವ ಸಮಾರಂಭ ನಡೆಯಿತು. ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಪಿ.ಕೆ. ಅಫ್ಸಲ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಸಂಸ್ಥೆಯ ಮುಖ್ಯ ಉಪಾಧ್ಯಾಯ ಹನೀಫ್ ಫೈಜಿ ಸ್ವಾತಂತ್ರö್ಯ ಸಂದೇಶ ನೀಡಿ ಸ್ವಾತಂತ್ರö್ಯ ಹೋರಾಟದಲ್ಲಿ ಭಾಗವಹಿಸಿದ ವ್ಯಕ್ತಿಗಳನ್ನು ಸ್ಮರಿಸುವುದು ಹಾಗೂ ದೇಶದಲ್ಲಿ ಶಾಂತಿ ಸೌಹಾರ್ದತೆಯಿಂದ ಜೀವನ ನಡೆಸುವುದು ನಮ್ಮ ಕರ್ತವ್ಯ. ನಮ್ಮ ಹಿರಿಯರ ತ್ಯಾಗ, ಬಲಿದಾನದಿಂದ ಗಳಿಸಿರುವ ಸ್ಯಾತಂತ್ರö್ಯವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.

ಬದ್ರಿಯಾ ಶಾಲೆಯ ಕಾರ್ಯದರ್ಶಿ ಶಫೀಕ್, ಆರ್ಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಟಿ. ಬಷೀರ್ ಹಾಗೂ ಶಹದೀರ್ ಸ್ವಾತಂತ್ರö್ಯ ಸಂದೇಶ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಪಿ.ಕೆ. ಅಫ್ಸಲ್ ವಹಿಸಿದ್ದರು.

ಎಸ್.ಕೆ.ಎಸ್.ಬಿ.ವಿ. ಉಪಾಧ್ಯಕ್ಷ ಸಪ್ವಾನ್, ಸಹ ಅಧ್ಯಾಪಕರಾದ ಸುಲೈಮಾನ್ ದಾರಿಮಿ, ಹುಸೈನ್ ಫೈಜಿ, ಎಸ್.ವೈ.ಎಸ್. ಅಧ್ಯಕ್ಷ ಅಜೀಜ್, ಎಸ್.ಕೆ.ಎಸ್.ಎಸ್.ಎಫ್. ಅಧ್ಯಕ್ಷ ಯೂಸಫ್, ರಹಮಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶಾಫಿ, ಕಾರ್ಯದರ್ಶಿ ಶಾಹುಲ್ ಅಲಿ, ಎಸ್‌ಕೆಎಸ್‌ಎಸ್‌ಎಫ್, ಎಸ್‌ವೈಎಸ್ ಕಾರ್ಯಕರ್ತರುಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಶಾಹುಲ್ ಅಲಿ ಪ್ರತಿಜ್ಞಾ ವಿಧಿ ಭೋದಿಸಿದರು.ನಾಪೋಕ್ಲು: ಮರಗೋಡಿನ ಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಾಂಶುಪಾಲ ಸುರೇಶ್ ನಾಯ್ಕ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.

ಧ್ವಜಾರಕ್ಷಕರಾಗಿ ಶಿವಪ್ರಸಾದ್ ಕೆ. ಕರ್ತವ್ಯ ನಿರ್ವಹಿಸಿದರೆ, ಸಂಸ್ಥೆಯ ಹಿರಿಯ ಉಪನ್ಯಾಸಕರು, ಹಿರಿಯ ಸಹ ಶಿಕ್ಷಕರು, ಸಂಸ್ಥೆಯ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಹಾಜರಿದ್ದರು.ಗೋಣಿಕೊಪ್ಪ: ಕಾಫಿ ಮಂಡಳಿಯ ಗೋಣಿಕೊಪ್ಪಲು ಉಪನಿರ್ದೇಶಕರ ಕಚೇರಿಯಲ್ಲಿ ಸ್ವಾತಂತ್ರೊö್ಯÃತ್ಸವ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸುಲೋಚನ, ಧಣಿ ಜಯರಾಂ, ಖದೀಜ, ಕೆ.ಟಿ. ಸೋಮಯ್ಯ, ಮಿಥುನ್, ಮೀರಾ, ಪ್ರೀತಾ ಮತ್ತಿತರರು ಪಾಲ್ಗೊಂಡಿದ್ದರು.ಮಡಿಕೇರಿ: ಸಮೀಪದ ಗಾಳಿಬೀಡು ನವೋದಯ ವಿದ್ಯಾಲಯದಲ್ಲಿ ಸ್ವಾತಂತ್ರö್ಯ ದಿನವನ್ನು ಆಚರಿಸಲಾಯಿತು.

ನಿವೃತ್ತ ಯೋಧ ಕ್ಯಾಪ್ಟನ್ ಟಿ.ಎಸ್. ದಯಾನಂದ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಎಲ್ಲಕ್ಕಿಂತ ದೇಶ ದೊಡ್ಡದು, ಮಕ್ಕಳು ದೇಶಸೇವೆಗಾಗಿ ಸದಾ ಸಿದ್ಧರಾಗಿರಬೇಕು. ಶ್ರದ್ಧೆಯಿಂದ ಓದಿ ಸೇನಾಧಿಕಾರಿಗಳಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಶಾಲೆಯ ಪ್ರಾಂಶುಪಾಲ ಪಂಕಜಾಕ್ಷನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾಲಯದ ಸುಮಾರು ೨೦೦ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಕಾರ್ಯಕ್ರಮ ವೀಕ್ಷಿಸಿದರು. ಮಕ್ಕಳು ತಾವು ಹಾಡಿದ, ಮಾತನಾಡಿದ, ದೇಶದ ಸ್ವಾತಂತ್ರ‍್ಯ ಹೋರಾಟಗಾರರ ಪಾತ್ರಗಳನ್ನು ಅಭಿನಯಿಸಿ ಸಿದ್ಧಪಡಿಸಿ ಕಳುಹಿಸಿದ್ದ ವೀಡಿಯೋಗಳನ್ನು ಪ್ರದರ್ಶಿಸಲಾಯಿತು.

ಶಿಕ್ಷಕರಾದ ಬಾಬು, ಗಣೇಶ ಹೆಗಡೆ, ಮಾರುತಿ ದಾಸಣ್ಣವರ ಮಾತನಾಡಿದರು.ಪ್ರಗತಿ ಆಂಗ್ಲ ಮಾಧ್ಯಮ ಶಾಲೆ

ವೀರಾಜಪೇಟೆ: ನಗರದ ವಿದ್ಯಾನಗರದ ಅಂಚಿನಲ್ಲಿರುವ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೂತನವಾಗಿ ಸ್ಥಾಪಿತವಾದ ಧ್ವಜ ಸ್ತಂಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಪಿ.ಸಿ. ಮಚ್ಚಾಡೊ ಅವರು ಧ್ವಜಾರೋಹಣ ಮಾಡಿದರು. ಕಾರ್ಯಕ್ರಮದ ಅಂಗವಾಗಿ ವೀರಾಜಪೇಟೆ ತಾಲೂಕಿನಲ್ಲಿ ಕನ್ನಡ ಮಾಧ್ಯಮದ ಎಸ್.ಎಸ್. ಎಲ್.ಸಿ. ಪರೀಕ್ಷೆಯಲ್ಲಿ ಉನ್ನತ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಶಾಲೆಯ ಸಂಸ್ಥಾಪಕ ಎಂ.ಎಸ್. ಪೂವಯ್ಯ, ವ್ಯವಸ್ಥಾಪಕ ಎಂ.ಪಿ. ತಿಮ್ಮಯ್ಯ, ಮುಖ್ಯೋಪಾಧ್ಯಾಯರು, ಶಿಕ್ಷಕರು, ಶಾಲಾ ಸಿಬ್ಬಂದಿಗಳು ಮತ್ತು ಪೋಷಕರು ಹಾಜರಿದ್ದರು.ಬಿಳಿಗೇರಿ ಗ್ರಾ.ಪಂ. ವ್ಯಾಪ್ತಿಯ ನಂದಿಮೊಟ್ಟೆ

ಬಿಳಿಗೇರಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಮೊಟ್ಟೆಯಲ್ಲಿ ಗ್ರಾಮಸ್ಥರು ಒಗ್ಗೂಡಿ ೭೫ನೇ ಸ್ವಾತಂತ್ರ‍್ಯ ದಿನವನ್ನು ಆಚರಿಸಿದರು. ಧ್ವಜಾ ರೋಹಣವನ್ನು ಮಾಜಿ ಸೈನಿಕ ಅಚ್ಚಯ್ಯ ಅವರ ನೇತೃತ್ವದಲ್ಲಿ ಮಾಜಿ ಯೋಧ ಬೆಳ್ಯಪ್ಪ ಅವರು ನೆರವೇರಿಸಿದರು. ಈ ಸಂದರ್ಭ ಮೂಸಾ, ಪಂಚಾಯಿತಿ ಅಧ್ಯಕ್ಷ ಬೆಳ್ಯಪ್ಪ, ರಮೇಶ್, ಹಂಸ, ಪಂಚಾಯಿತಿ ಸದಸ್ಯ ಗಿರೀಶ್, ರಾಜಣ್ಣ, ಅಲೆಕ್ಸ್, ಸಂತೋಷ್, ಅಶ್ರಫ್, ಆಟೋ ರಾಜ, ದಿನೇಶ್, ಅಪ್ಪಲ್, ವಿಠಲ, ಅಣ್ಣಿ, ಕವನ್, ರವಿ, ಅಫ್ರಿದ್, ಚುಬ್ಬಣ್ಣ, ಅಶ್ರಫ್, ಸಜನ್, ಮಿಟ್ಟು, ಶರಣು, ಅರ್ಷದ್, ಸಂತೋಷ್, ಶಿವ, ಮಂಜು, ಪ್ರಶಾಂತ್, ಆರೀಸ್, ರಂಜನ್, ರಂಜಿತ್, ಸಮದ್, ಇಬ್ರಾಹಿಂ, ಕುಟ್ಟ, ಚಂಗಪ್ಪ, ಕೊರಗಪ್ಪ, ಕೃಷ್ಣಪ್ಪ, ಆರೀಫ್ ನಂದಿಮೊಟ್ಟೆ ಮತ್ತು ಮಕ್ಕಳು ಸೇರಿದಂತೆ ಗ್ರಾಮದ ನಿವಾಸಿಗಳು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಮೂಸಾ ಅವರು ಸಿಹಿ ವಿತರಿಸಿ ಶುಭ ಹಾರೈಸಿದರು.ಮಡಿಕೇರಿ: ರೋಟರಿ ಮಡಿಕೇರಿಯ ಸದಸ್ಯರು ರೋಟರಿ ಮಡಿಕೇರಿ: ರೋಟರಿ ಮಡಿಕೇರಿಯ ಸದಸ್ಯರು ರೋಟರಿ ಮಡಿಕೇರಿ: ರೋಟರಿ ಮಡಿಕೇರಿಯ ಸದಸ್ಯರು ರೋಟರಿ ಕಣಿವೆ: ಇಲ್ಲಿಗೆ ಸಮೀಪದ ಹೆಬ್ಬಾಲೆಯಲ್ಲಿ ೭೫ನೇ ಸ್ವಾತಂತ್ರ‍್ಯದ ದಿನವನ್ನು ಯೋಧನನ್ನು ಸನ್ಮಾನಿಸುವ ಮೂಲಕ ಆಚರಿಸಲಾಯಿತು. ಸಿಬ್ಬಂದಿ ನಬಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹೆಚ್.ಎಲ್. ರಮೇಶ್, ಪ್ರೌಢಶಾಲಾ ಮುಖ್ಯಶಿಕ್ಷಕ ಹೆಚ್.ಎಸ್. ಗಣೇಶ್, ಶಿಕ್ಷಕರಾದ ಮೆ.ನಾ. ವೆಂಕಟನಾಯಕ್, ಭೋಜೆಗೌಡ, ಮುತ್ತಣ್ಣ ಉಪಸ್ಥಿತರಿದ್ದರು.ಕಣಿವೆ: ಇಲ್ಲಿಗೆ ಸಮೀಪದ ಹೆಬ್ಬಾಲೆಯಲ್ಲಿ ೭೫ನೇ ಸ್ವಾತಂತ್ರ‍್ಯದ ದಿನವನ್ನು ಯೋಧನನ್ನು ಸನ್ಮಾನಿಸುವ ಮೂಲಕ ಆಚರಿಸಲಾಯಿತು. ಸಿಬ್ಬಂದಿ ನಬಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹೆಚ್.ಎಲ್. ರಮೇಶ್, ಪ್ರೌಢಶಾಲಾ ಮುಖ್ಯಶಿಕ್ಷಕ ಹೆಚ್.ಎಸ್. ಗಣೇಶ್, ಶಿಕ್ಷಕರಾದ ಮೆ.ನಾ. ವೆಂಕಟನಾಯಕ್, ಭೋಜೆಗೌಡ, ಮುತ್ತಣ್ಣ ಉಪಸ್ಥಿತರಿದ್ದರು.

ಕಣಿವೆ: ಇಲ್ಲಿಗೆ ಸಮೀಪದ ಹೆಬ್ಬಾಲೆಯ ಸಂಯುಕ್ತ ಪಿಯು ಕಾಲೇಜಿನಲ್ಲಿ ೭೫ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಸಂಭ್ರಮ ವನ್ನು ಕೋವಿಡ್-೧೯ ನಡುವೆಯೂ ಆಚರಿಸಲಾಯಿತು.

ಕೊಡಗು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ ಅಮೃತ ಮಹೋತ್ಸವ ಬಗ್ಗೆ ಮಾತನಾಡಿ, ಇಂದಿನ ಯುವ ಪೀಳಿಗೆಯನ್ನು ರಾಷ್ಟçದ ಸಂಪತ್ತನ್ನಾಗಿ ರೂಪಿಸುವುದು ಪ್ರತಿಯೊಬ್ಬ ಶಿಕ್ಷಕ, ಪೋಷಕ ಹಾಗೂ ಸಮುದಾಯದ ಕರ್ತವ್ಯವಾಗಿರುತ್ತದೆ.

ಇಂದಿನ ಯುವಕರು ದೇಶದ ಅಭಿವೃದ್ಧಿಪಥದತ್ತ ಚಿಂತಿಸುತ್ತಾ, ಕಾರ್ಯೋನ್ಮುಖರಾಗುವ ಮುಖೇನ ಸೃಜನಶೀಲ ವ್ಯಕ್ತಿಗಳಾಗ ಬೇಕು ಎಂದು ಕರೆಕೊಟ್ಟರು. ನಿವೃತ್ತ ಪ್ರಾಂಶುಪಾಲರು ಹೆಚ್.ಹೆಚ್. ಸುಂದರ, ಹೆಬ್ಬಾಲೆ ಗ್ರಾ.ಪಂ. ಉಪಾಧ್ಯಕ್ಷೆ ಅರುಣಾ ಕುಮಾರಿ ಇವರುಗಳು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಹೆಚ್.ಎಲ್. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಂಶುಪಾಲ ಧರ್ಮಪ್ಪ, ಪ್ರೌಢಶಾಲಾ ಮುಖ್ಯ ಶಿಕ್ಷಕ ಹೆಚ್.ಎಸ್. ಗಣೇಶ್, ಶಿಕ್ಷಕರಾದ ಮೆ.ನಾ. ವೆಂಕಟನಾಯಕ್, ಭೋಜೆಗೌಡ, ಮುತ್ತಣ್ಣ, ಮಣಜೂರು ಮಂಜುನಾಥ ಇದ್ದರು. ವಿದ್ಯಾರ್ಥಿನಿ ಪೂರ್ವಿ ಪ್ರಾರ್ಥಿಸಿದರು. ಕವಿತಾ ಸ್ವಾಗತಿಸಿದರು. ದೃಶ್ಯ ನಿರೂಪಿಸಿದರು. ಶಿಕ್ಷಕ ಸಿ.ಡಿ. ಲೋಕೇಶ್ ವಂದಿಸಿದರು. ಉಪನ್ಯಾಸಕಿಯಾದ ಹೆಚ್.ಎನ್. ದೃಶ್ಯ ನಿರೂಪಿಸಿದರು.ಕೂಡಿಗೆ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಘಟಕ ಹಾಗೂ ಜಿಲ್ಲಾ ರಾಷ್ಟಿçÃಯ ಹಸಿರು ಪಡೆಯ ಸಹಯೋಗದೊಂದಿಗೆ ಕೂಡಿಗೆ ಸರ್ಕಾರಿ ಕ್ರೀಡಾ ಪ್ರೌಢಶಾಲೆಯಲ್ಲಿ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಸಂಭ್ರಮದ ಅಂಗವಾಗಿ ಸ್ವಾತಂತ್ರ‍್ಯ ೭೫ರ ಸಂಭ್ರಮ ಕುರಿತು ‘ನಮ್ಮ ನಡೆ ಹಸಿರೆಡೆಗೆ - ಜನರೆಡೆಗೆ ಸ್ವಾತಂತ್ರ‍್ಯದ ನಡಿಗೆ' ಕುರಿತು ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಶಾಲಾವರಣದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕ್ರೀಡಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಿ.ಟಿ. ದೇವಕುಮಾರ್, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ಇಲಾಖೆಯ ಕಾರ್ಯಕ್ರಮ ಸಂಯೋಜಕ ಮಣಜೂರು ಮಂಜುನಾಥ್ ಇವರುಗಳು ಮಾತನಾಡಿದರು.

ಜಿಲ್ಲಾ ವಾಣಿಜ್ಯ ತೆರಿಗೆ ಇಲಾಖೆಯ ಮೆನೇಜರ್ ಎಸ್.ಬಿ. ನಾಗಪ್ಪ, ಶಾಲೆಯ ಕ್ರೀಡಾ ತರಬೇತುದಾರ, ಶಿಕ್ಷಕಿ ಪಿ.ಆರ್. ಅಶ್ವಿನಿ, ಸಿಬ್ಬಂದಿ ವರ್ಗದವರು ಇದ್ದರು.ಮಡಿಕೇರಿ: ಮಡಿಕೇರಿ ಲಯನ್ಸ್ ಸಂಸ್ಥೆಯ ವತಿಯಿಂದ ನಡೆದ ಸ್ವಾತಂತ್ರೊö್ಯÃತ್ಸವ ಸಮಾರಂಭದಲ್ಲಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ನಟರಾಜ್ ಕೆಸ್ತೂರು ಅವರು ಧ್ವಜಾರೋಹಣ ಮಾಡಿದರು.

ನಗರಸಭಾ ಸದಸ್ಯೆ ಸವಿತಾ ರಾಕೇಶ್, ಕಲಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್ ಲಾಲಿ, ರಫೀಕ್ ಹಾಗೂ ಲಯನ್ಸ್ ಸದಸ್ಯರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದಲ್ಲಿ ಸ್ನೇಹಾಶ್ರಯ ಸಂಸ್ಥೆಯ ಬಡ ವಿದ್ಯಾರ್ಥಿನಿಗೆ ಆನ್‌ಲೈನ್ ಶಿಕ್ಷಣಕ್ಕಾಗಿ ಲಯನ್ಸ್ ಸದಸ್ಯ ಬೇಬಿ ಮ್ಯಾಥ್ಯೂ ಅವರು ಒಂದು ಮೊಬೈಲ್ ಫೋನ್ ಕೊಡುಗೆಯಾಗಿ ನೀಡಿದರು. ಮಕ್ಕಳಿಗೆ ದೇಶಭಕ್ತಿ ಗೀತೆ, ಸ್ವಾತಂತ್ರ‍್ಯ ದಿನಾಚರಣೆಯ ಮಹತ್ವದ ಬಗ್ಗೆ ಆಶುಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಭಾಗವಹಿಸಿದ ಮಕ್ಕಳಿಗೆ ಬಹುಮಾನ ನೀಡಲಾಯಿತು.

ಕಮಲಾ ಮುರುಗೇಶ್ ಪ್ರಾರ್ಥಿಸಿದರು, ದೀಪಾ ನಾಗೇಂದ್ರ ಧ್ವಜವಂದನೆ ಸಲ್ಲಿಸಿದರು. ನಿರಂಜನ್ ಅವರು ಮಕ್ಕಳಿಗೆ ಪರಿಣಾಮಕಾರಿ ಮಾತನಾಡುವ ಕೌಶಲ್ಯಗಳ ಕುರಿತು ಸಲಹೆ ನೀಡಿದರು. ವೇದಿಕೆಯಲ್ಲಿ ಲಯನ್ಸ್ ಸಂಸ್ಥೆಯ ನವೀನ್ ಅಂಬೆಕಲ್, ಸೋಮಣ್ಣ ಪಿ.ಪಿ., ಅನಿತಾ ಸೋಮಣ್ಣ ಉಪಸ್ಥಿತರಿದ್ದರು. ಮಧುಕರ್ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.