ಮಡಿಕೇರಿ, ಆ. ೧೯: ಕೊಡಗಿನ ಕಂದಾಯ ಕಾಯಿದೆಗಳ ಸಂಪೂರ್ಣ ಮಾಹಿತಿ ಹೊಂದಿದ್ದ ವ್ಯಕ್ತಿಯಾಗಿದ್ದ ತಾಪಂಡ ಚಂಗಪ್ಪ ತಮ್ಮಯ್ಯ ಅವರು ಇಂದು ಅಸ್ತಂಗತವಾಗಿದ್ದರೂ ಅವರು ಕೊಡಗಿನ ಕಂದಾಯ ಕಾನೂನುಗಳ ಬಗ್ಗೆ ಬರೆದಿರುವ ಲೇಖನಗಳು, ಪುಸ್ತಕಗಳು ಅವರನ್ನು ಚಿರಂಜೀವಿಯಾಗಿಸಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಟಿ.ಪಿ. ರಮೇಶ್ ನುಡಿದರು.

ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದಿಂದ ಏರ್ಪಡಿಸಿದ್ದ ಇತ್ತೀಚೆಗೆ ನಿಧನರಾದ ಟಿ.ಸಿ. ತಮ್ಮಯ್ಯ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆದ ಸಂತಾಪ ಸಭೆಯಲ್ಲಿ ಅವರು ಮಾತನಾಡಿದರು. ಉತ್ತಮ ಲೇಖಕರೂ ಆಗಿದ್ದ ತಮ್ಮಯ್ಯ ಅವರು ಕೊಡಗಿನ ಬಗ್ಗೆ ಹಲವಾರು ಪುಸ್ತಕಗಳನ್ನು ರಚಿಸಿದ್ದು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕೊಡಗಿನಲ್ಲಿ ನಡೆದಾಗ ಕೊಡಗಿನಲ್ಲಿ ಕೃಷಿ ಮತ್ತು ತಂತ್ರಜ್ಞಾನದ ಕುರಿತು ಪುಸ್ತಕ ರಚಿಸಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ತಾಲೂಕು ಅಧ್ಯಕ್ಷರಾಗಿದ್ದ ನಡೆದ ಸಂತಾಪ ಸಭೆಯಲ್ಲಿ ಅವರು ಮಾತನಾಡಿದರು. ಉತ್ತಮ ಲೇಖಕರೂ ಆಗಿದ್ದ ತಮ್ಮಯ್ಯ ಅವರು ಕೊಡಗಿನ ಬಗ್ಗೆ ಹಲವಾರು ಪುಸ್ತಕಗಳನ್ನು ರಚಿಸಿದ್ದು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕೊಡಗಿನಲ್ಲಿ ನಡೆದಾಗ ಕೊಡಗಿನಲ್ಲಿ ಕೃಷಿ ಮತ್ತು ತಂತ್ರಜ್ಞಾನದ ಕುರಿತು ಪುಸ್ತಕ ರಚಿಸಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ತಾಲೂಕು ಅಧ್ಯಕ್ಷರಾಗಿದ್ದ ಯಲ್ಲಿ ಕಾರ್ಯಕ್ರಮ ನಡೆಯಿತು. ಸಭೆಯಲ್ಲಿ ಬಳಗದ ಉಪಾಧ್ಯಕ್ಷೆ ಪಿ. ರೇವತಿ ರಮೇಶ್, ಮೂಡಾ ಮಾಜಿ ಅಧ್ಯಕ್ಷೆ ಸುರಯ್ಯ ಅಬ್ರಾರ್, ಸಮಾಜ ಕಾರ್ಯಕರ್ತೆ ಮಿನಾಜ್ ಪ್ರವೀಣ್ ಉಪಸ್ಥಿತರಿದ್ದರು ಬಳಗದ ನಿರ್ದೇಶಕ ಅಂಬೇಕಲ್ ನವೀನ್ ಸ್ವಾಗತಿಸಿದರು. ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಫರ್ಡ್ ಕ್ರಾಸ್ತಾ ನಿರೂಪಿಸಿದರು. ಅಧ್ಯಾಪಕ ಕೆ.ಯು. ರಂಜಿತ್ ವಂದಿಸಿದರು.