ಮಡಿಕೇರಿ, ಆ. ೧೯: ೨೦೨೧ ಸಾಲಿನ ದ್ವಿತೀಯ ಪಿ.ಯು ಪರೀಕ್ಷೆ ಪ್ರಾರಂಭವಾಗಿದ್ದು, ಇಂದು ನಡೆಯಬೇಕಿದ್ದ ಗಣಿತ ವಿಷಯದ ಪರೀಕ್ಷೆಗೆ ನೋಂದಣಿ ಮಾಡಿದ್ದ ಜಿಲ್ಲೆಯ ಏಕೈಕ ವಿದ್ಯಾರ್ಥಿನಿ ಗೈರಾಗಿದ್ದರು.
ಇಂದಿನಿAದ ಪ್ರಾರಂಭವಾಗಿ ಸೆ.೩ ರವರೆಗೆ ನಡೆಯಲಿರುವ ದ್ವಿತೀಯ ಪಿ.ಯು ಪರೀಕ್ಷೆಗೆ ಜಿಲ್ಲೆಯಲ್ಲಿನ ೨೨೮ ಖಾಸಗಿ ವಿದ್ಯಾರ್ಥಿಗಳು ಹಾಗೂ ರಾಜ್ಯ ಸರಕಾರ ನೀಡಿದ್ದ ಫಲಿತಾಂಶ ತಿರಸ್ಕರಿಸಿ ಮರುಪರೀಕ್ಷೆ ಎದುರಿಸಲು ೮ ಮಂದಿ ನೋಂದಾಯಿಸಿದ್ದರು. ಈ ೮ ಮಂದಿಯ ಪೈಕಿ ಗಣಿತ ವಿಷಯದಲ್ಲಿ ಸರಕಾರ ನೀಡಿದ್ದ ಫಲಿತಾಂಶವನ್ನು ತಿರಸ್ಕರಿಸಿ ಮರುಪರೀಕ್ಷೆಗೆ ಜಿಲ್ಲೆಯ ಓರ್ವ ವಿದ್ಯಾರ್ಥಿನಿ ನೋಂದಾಯಿಸಿದ್ದರು. ಮಡಿಕೇರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈಕೆ ಪರೀಕ್ಷೆಗೆ ಹಾಜರಾಗಬೇಕಿದ್ದು ಅನಾರೋಗ್ಯ ಸಂಬAಧ ಗೈರಾಗಿದ್ದಾರೆ.
ಓರ್ವ ವಿದ್ಯಾರ್ಥಿನಿ ಮಾತ್ರ ಪರೀಕ್ಷೆ ಎದುರಿಸಬೇಕಿದ್ದರೂ ಶಿಕ್ಷಣ ಇಲಾಖೆ ವತಿಯಿಂದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಸಂಬAಧ ಎಲ್ಲಾ ವ್ಯವಸ್ಥೆಗಳು ಮಾಡಲಾಗಿತ್ತು. ಮಡಿಕೇರಿ ಪದವಿಪೂರ್ವ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಹಾಜರಿದ್ದು ವಿದ್ಯಾರ್ಥಿನಿಗೆ ಕಾಯುತ್ತಿದ್ದ ದೃಶ್ಯ ‘ಶಕ್ತಿ’ಗೆ ಕಂಡುಬAತು.
ಸರಕಾರ ನೀಡಿದ ಫಲಿತಾಂಶವನ್ನು ತಿರಸ್ಕರಿಸಿ ಗಣಿತ ಪರೀಕ್ಷೆ ಬರೆಯಲು ಓರ್ವಳೇ ವಿದ್ಯಾರ್ಥಿಯಿದ್ದು, ಪರೀಕ್ಷೆಗೆ ಹಾಜರಾಗಲಿಲ್ಲ. ಇಲಾಖೆ ವತಿಯಿಂದ ವಿದ್ಯಾರ್ಥಿನಿಯ ಪೋಷಕರನ್ನು ಸಂಪರ್ಕಿಸಿದಾಗ ಆಕೆಗೆ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದ ಕಾರಣ ಪರೀಕ್ಷೆ ಬರೆಯಲು ಅಸಾಧ್ಯ ಎಂದು ತಿಳಿಸಿದರು.
ಇಂದಿನ ಪರೀಕ್ಷೆಗೆ ಇಲಾಖೆ ವತಿಯಿಂದ ಎಲ್ಲಾ ರೀತಿಯ ತಯಾರಿ ಕೈಗೊಳ್ಳಲಾಗಿತ್ತು, ಪರೀಕ್ಷಾ ಕೇಂದ್ರದಲ್ಲಿನ ಪರೀಕ್ಷಾ ಮೇಲ್ವಿಚಾರಕರು, ಸಿಬ್ಬಂದಿ ಕರ್ತವ್ಯಕ್ಕೆ ಹಾಜರಿದ್ದರು.
- ವಿಷ್ಣುಮೂರ್ತಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ