ಕೂಡಿಗೆ, ಆ. ೧೯: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಿಗಿ ಮಂಟಿ ಎಂಬ ಜಾಗವನ್ನು ಈಗಾಗಲೇ ಹೆಬ್ಬಾಲೆ ಗ್ರಾಮ ಪಂಚಾಯಿತಿ ಹೆಸರಿಗೆ ಕಾಯ್ದಿರಿಸಿದ್ದು, ಈ ಜಾಗದಲ್ಲಿ ನಿವೇಶನ ರಹಿತರಿಗೆ ನಿವೇಶನಕ್ಕೆ ಜಾಗ ನೀಡುವ ಉದ್ದೇಶದಿಂದ ನಿವೇಶನ ನಕ್ಷೆಯನ್ನು ತಯಾರಿಸಲು ತಾಲೂಕು ಪಂಚಾಯಿತಿ ಅಧಿಕಾರಿಗಳ ತಂಡ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಆಡಳಿತ ಮಂಡಳಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗಿ ಮಂಟಿಯು ಮೂರು ಎಕರೆಗಳಷ್ಟು ಪ್ರದೇಶವಾಗಿದ್ದು ಸರ್ವೆ ನಂಬರ್ ೮೪/೧ರಲ್ಲಿ ಪ್ರದೇಶದಲ್ಲಿ ಕೆಲವು ಭಾಗವು ಒತ್ತುವರಿ ಆಗಿದೆ ಎಂದು ೨೦೧೬ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯು ಸಂಬAಧಿಸಿದ ಜಿಲ್ಲೆಯ ಮತ್ತು ರಾಜ್ಯಮಟ್ಟದ ಅಧಿಕಾರಿಗಳಿಗೆ ಲಿಖಿತ ದಾಖಲೆಗಳ ಮೂಲಕ ಅರ್ಜಿಗಳನ್ನು ಸಲ್ಲಿಸಿತು ಅದರ ಮೂಲಕ ವಿಚಾರಣೆ, ಸ್ಥಳ ಪರಿಶೀಲನೆ ನಡೆಸಿ ನಂತರ ಜಿಲ್ಲಾ ಮಟ್ಟದಿಂದ ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಹೆಸರಿಗೆ ನೋಂದಣಿ ಮಾಡಲಾಗಿತ್ತು. ಈಗಾಗಲೇ ಕಾದಿರಿಸಿರುವ ಜಾಗದಲ್ಲಿ ನಿವೇಶನ ರಹಿತರಿಗೆ ನಿವೇಶನವನ್ನು ನೀಡಲು ಅನುಕೂಲ ಕಲ್ಪಿಸುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎಸ್. ಮಂಜುನಾಥ ಮತ್ತು ಆಡಳಿತ ಮಂಡಳಿಯವರು ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿನವರಿಗೆ ಪಂಚಾಯಿತಿಯ ಹೆಸರಿಗೆ ನೋಂದಣಿ ಮಾಡಲಾಗಿತ್ತು. ಈಗಾಗಲೇ ಕಾದಿರಿಸಿರುವ ಜಾಗದಲ್ಲಿ ನಿವೇಶನ ರಹಿತರಿಗೆ ನಿವೇಶನವನ್ನು ನೀಡಲು ಅನುಕೂಲ ಕಲ್ಪಿಸುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎಸ್. ಮಂಜುನಾಥ ಮತ್ತು ಆಡಳಿತ ಮಂಡಳಿಯವರು ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿನವರಿಗೆ ಪತ್ರ ವ್ಯವಹಾರ ಮಾಡಿದರು. ಅದರಂತೆ ತಾಲೂಕು ಪಂಚಾಯಿತಿಯ ಅಧಿಕಾರಿಗಳ ತಂಡದ ಇಂಜಿನಿಯರ್ ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳದ ನಕ್ಷೆ ತಯಾರಿಸಲು ಮುಂದಾಗಿದ್ದಾರೆ. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎಸ್. ಮಂಜುನಾಥ, ಉಪಾಧ್ಯಕ್ಷೆ ಅರುಣ ಕುಮಾರಿ, ಸದಸ್ಯರಾದ ಶಿವನಂಜಪ್ಪ, ಕವಿತ, ಚಂದ್ರಶೇಖರ್, ಜೋಗಿ ಪರಮೇಶ್, ಪವಿತ್ರ, ಪುಟ್ಟಲಕ್ಷಿ, ಯಶಸ್ವಿ, ರತ್ನಮ್ಮ, ಲತಾ ಸೇರಿದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಕೇಶ್, ತಾಲೂಕು ಪಂಚಾಯಿತಿ ಇಂಜಿನಿಯರ್ ಭರತ್‌ಕುಮಾರ್, ಕಿರಣ್ ಇದ್ದರು.