ಮಡಿಕೇರಿ, ಆ. ೧೯: ಟೋಕಿಯೋದಲ್ಲಿ ನಡೆದ ಒಲಂಪಿಕ್ಸ್ನಲ್ಲಿ ಸೇಯ್ಲಿಂಗ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿದ. ಕೊಡಗಿನ ಕೇಳಪಂಡ ಗಣಪತಿ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅಭಿನಂದಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಗಣಪತಿ ಅವರನ್ನು ಕರೆಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದ್ದಾರೆ. ಗಣಪತಿ ಅವರು, ಸೇಯ್ಲಿಂಗ್ ತರಬೇತಿಯನ್ನು ತಮಿಳುನಾಡಿನಲ್ಲಿ ಪಡೆಯುತ್ತಿದ್ದರು.