ಪೊನ್ನಂಪೇಟೆ, ಆ. ೧೯: ಕೊಡಗಿನ ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದ ಮಾಳೇಟಿರ ಪ್ರಣವ್ ತಿಮ್ಮಯ್ಯ ಇಂಡಿಯನ್ ಏರ್ ಫೋರ್ಸ್ ನ ಟೆಕ್ನಿಕಲ್ ಆಫೀಸರ್ ಆಗಿ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ. ಪ್ರಸ್ತುತ ವರ್ಷ ಕರ್ನಾಟಕದಿಂದ ಈ ಹುದ್ದೆಗೆ ಮೂವರು ಆಯ್ಕೆಯಾಗಿದ್ದು, ಪ್ರಣವ್ ತಿಮ್ಮಯ್ಯ ಕೊಡಗಿನಿಂದ ಆಯ್ಕೆಯಾಗಿರುವ ಏಕೈಕ ಅಭ್ಯರ್ಥಿಯಾಗಿದ್ದಾರೆ. ಇವರಿಗೆ ಸೆಪ್ಟೆಂಬರ್ ೫ ರಿಂದ ಹೈದ್ರಾಬಾದ್‌ನ ದುಂಡಿಗಲ್‌ನಲ್ಲಿರುವ ಏರ್ ಫೋರ್ಸ್ ಅಕಾಡೆಮಿಯಲ್ಲಿ ತರಬೇತಿ ನಡೆಯಲಿದೆ.
ಪ್ರಣವ್ ತಿಮ್ಮಯ್ಯ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ಮಾಳೇಟಿರ ಬಿ.ಕಾವೇರಪ್ಪ ಹಾಗೂ ಲಯನ್ಸ್ ಶಾಲೆಯ ಶಿಕ್ಷಕಿ ಮಮತ ದಂಪತಿಯ ಪುತ್ರರಾಗಿದ್ದಾರೆ.