ಮಡಿಕೇರಿ, ಆ. ೧೯: ಅದು ಅಮ್ಮನ ನೆನಪುಗಳಿಂದ ಕೂಡಿದ್ದ ಮೊಬೈಲ್, ಅಮ್ಮ ತನ್ನನ್ನು ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾಳೆ.. ಆದರೆ, ಅವಳ ನೆನಪುಗಳು ಆ ಮೊಬೈಲ್ನಲ್ಲಿವೆ. ‘ಪ್ಲೀಸ್’ ಅದನ್ನು ಹುಡುಕಿಕೊಡಿ ಎಂದು ಪತ್ರದ ಮೂಲಕ ನೋವು ತೋಡಿಕೊಂಡಿದ್ದ ಬಾಲಕಿಗೆ ಇದೀಗ ಅಮ್ಮನ ನೆನಪುಗಳಿದ್ದ ಮೊಬೈಲ್ ಕೈ ಸೇರಿದೆ. ಮಗಳು ಅಮ್ಮ ಸಿಕ್ಕಷ್ಟೆ ಖುಷಿ ಅನುಭವಿಸುತ್ತಿದ್ದಾಳೆ.
ಚಿಕಿತ್ಸೆ ಫಲಕಾರಿಯಾಗದೆ ಕೋವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ಸೋಂಕಿತ ಮಹಿಳೆಯ ಕಾಣೆಯಾಗಿದ್ದ ಮೊಬೈಲ್ ೩ ತಿಂಗಳ ಬಳಿಕ ಮಗಳ ಕೈ ಸೇರಿದೆ.
ಮೇ ೧೬ ರಂದು ಕುಶಾಲನಗರದ ಗುಮ್ಮನಕೊಲ್ಲಿ ನಿವಾಸಿ ಪ್ರಭಾ ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆ ಬಳಿಕ ಮೃತೆ ಪ್ರಭಾ ಅವರ ಮೊಬೈಲ್ ಸಿಗದ ಬಗ್ಗೆ ಕುಟುಂಬಸ್ಥರು ಆಸ್ಪತ್ರೆ ಸಿಬ್ಬಂದಿಗಳಿಗೆ ತಿಳಿಸಿದ್ದರು. ಎಷ್ಟೇ ಬಾರಿ ಮನವಿ ಮಾಡಿದರು ಮೊಬೈಲ್ ಮಾತ್ರ ನೀಡುತ್ತಿರಲಿಲ್ಲ.
ಮೊಬೈಲ್ ಲಭ್ಯವಾಗದ ಹಿನ್ನೆಲೆ ಮೃತೆ ಪ್ರಭಾ ಅವರ ಮಗಳು ಹೃತಿಕ್ಷಾ (೧೦) ಮೊಬೈಲ್ನಲ್ಲಿ ಅಮ್ಮನ ನೆನಪು, ದಾಖಲೆಗಳಿವೆ. ತನ್ನ ಆನ್ಲೈನ್ ತರಗತಿಗೆ ಸಂಬAಧಪಟ್ಟ ವಿಚಾರಗಳಿವೆ. ಆಗಾಗಿ ಕಾಣೆಯಾಗಿರುವ ಮೊಬೈಲ್ ಹುಡುಕಿಕೊಡುವಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು, ಈ ವಿಚಾರ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿತ್ತು.
ಗೋದಾಮಿನಲ್ಲಿ ಮೊಬೈಲ್
ಕಾಣೆಯಾಗಿದ್ದ ಮೊಬೈಲ್ ಆಸ್ಪತ್ರೆಯ ಕೌಂಟರ್-೨ರ ಗೋದಾಮಿನಲ್ಲಿ ಪತ್ತೆಯಾಗಿದೆ. ಮೊಬೈಲ್ನ ಪ್ಯಾನಲ್ ಬದಲಾಗಿದ್ದು,
(ಮೊದಲ ಪುಟದಿಂದ) ಯಾರೋ ಕಳವು ಮಾಡಿ ಆಸ್ಪತ್ರೆಯ ಕೋಣೆಗೆ ತಂದಿಟ್ಟಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬAದಿದೆ.
ಸಿಬ್ಬAದಿಗಳಿಗೆ ಮೊಬೈಲ್ ದೊರೆತ ಬಳಿಕ ಆಸ್ಪತ್ರೆಯ ಮೇಲಾಧಿಕಾರಿಗೆ ನೀಡಿದ್ದಾರೆ. ನಂತರ ನಗರ ಠಾಣೆಗೆ ಮೊಬೈಲ್ ಒಪ್ಪಿಸಲಾಗಿದೆ. ಹೃತಿಕ್ಷಾ ಠಾಣೆಗೆ ಆಗಮಿಸಿ ಮೊಬೈಲ್ ನೋಡಿದಾಗ ಪ್ಯಾನಲ್ ಬದಲಾಗಿರುವುದನ್ನು ಕಂಡು ಇದು ಅಮ್ಮನ ಮೊಬೈಲ್ ಅಲ್ಲ ಎಂದಿದ್ದಾಳೆ. ನಂತರ ಗ್ಯಾಲರಿಯನ್ನು ಪರಿಶೀಲಿಸಿ ಇದು ಅವರದ್ದೆ ಮೊಬೈಲ್ ಎಂದು ಖಚಿತವಾಗಿದೆ.
ಪರಿಶೀಲನೆ ಸಂದರ್ಭ ಮೊಬೈಲ್ನಲ್ಲಿರುವ ಫೋಟೋ ಸೇರಿದಂತೆ ಡಾಟಾಗಳು ಯಾವುದು ಡಿಲೀಟ್ ಆಗಿರಲಿಲ್ಲ ಇದು ಹೃತಿಕ್ಷಾಗೆ ಖುಷಿ ತಂದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಮೊಬೈಲ್ ಅನ್ನು ಹಸ್ತಾಂತರಿಸಿದ್ದಾರೆ.
ಅಮ್ಮನ ಮೊಬೈಲ್ನಲ್ಲಿ ಹಲವು ನೆನಪುಗಳಿವೆ. ಶಾಲೆಗೆ ಸಂಬAಧಪಟ್ಟ ಮಾಹಿತಿಗಳಿವೆ. ಮೊಬೈಲ್ ಕಾಣೆಯಾದಾಗ ಬೇಸರವಾಗಿತ್ತು. ಇದೀಗ ಸಿಕ್ಕಿರುವುದು ಖುಷಿ ಕೊಟ್ಟಿದೆ ಎಂದು ಹೃತಿಕ್ಷಾ ತಿಳಿಸಿದ್ದಾಳೆ.
ತಾಳಿ ಎಲ್ಲಿ.? : ಮೃತೆ ಪ್ರಭಾ ಅವರ ಮೊಬೈಲ್ ಏನೋ ಪತ್ತೆಯಾಗಿದೆ. ಆದರೆ, ಕಾಣೆಯಾದ ತಾಳಿ ಎಲ್ಲಿ ಎಂಬ ಪ್ರಶ್ನೆಗೆ ಇನ್ನೂ ಉತ್ತರ ದೊರೆತಿಲ್ಲ. ಕೋವಿಡ್ ಆಸ್ಪತ್ರೆಯಲ್ಲಿ ನಡೆದ ಈ ಕಳ್ಳತನವನ್ನು ಪೊಲೀಸರು ಬೇಧಿಸಬೇಕಿದೆ.