ಶ್ರೀಮಂಗಲ, ಆ. ೧೯: ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿ ಯಿಂದಾಗಿ ಕಾಫಿ ಸೇರಿದಂತೆ ಇತರ ಬೆಳೆಗಳು ಹಾನಿಗೀಡಾಗಿರುವ ಬಗ್ಗೆ ಇಂದು ವಿವಿಧ ಇಲಾಖೆಗಳ ಅಧಿಕಾರಿಗಳು ದಕ್ಷಿಣ ಕೊಡಗಿನ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಜಂಟಿ ಪರಿಶೀಲನೆ ನಡೆಸಿದರು. ಶ್ರೀಮಂಗಲ ಹೋಬಳಿ ಮತ್ತು ಹುದಿಕೇರಿ ಹೋಬಳಿಯ ಕೆಲವು ಗ್ರಾಮಗಳ ತೋಟಗಳಿಗೆ ಭೇಟಿ ನೀಡಿ ಅಧಿಕಾರಿಗಳ ತಂಡ ವಿವರ ಸಂಗ್ರಹಿಸಿದೆ.
ಮಳೆಯಿAದ ಹಾನಿ ಸೇರಿದಂತೆ ಕಾಫಿ ಕೊಳೆರೋಗ, ಉದುರುವಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಳೆಗಾರರು ಪರಿಹಾರಕ್ಕಾಗಿ ಆಗ್ರಹಿಸಿದ್ದರು.
(ಮೊದಲ ಪುಟದಿಂದ) ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನ ನೇತೃತ್ವದಲ್ಲಿ ಕಾಫಿ ಮಂಡಳಿ, ಕೃಷಿ, ತೋಟಗಾರಿಕಾ ಇಲಾಖೆಗಳ ಅಧಿಕಾರಿಗಳು, ತಜ್ಞರು ಹಲವು ತೋಟಗಳಿಗೆ ಭೇಟಿ ನೀಡಿದರು. ಶ್ರೀಮಂಗಲ, ಕುರ್ಚಿ, ಬೀರುಗ, ನೆಮ್ಮಲೆ, ತೆರಾಲು, ಬಿರುನಾಣಿ, ಹೊರಾಡ್ ಗ್ರಾಮಗಳಲ್ಲಿ ಪರಿಶೀಲನೆ ನಡೆಸಲಾಯಿತು. ಕಳೆದ ಕೆಲವಾರು ದಿನಗಳ ಹಿಂದಿನಿAದಲೇ ಕಾಫಿ ಉದುರುವಿಕೆ ಹಾಗೂ ಕೊಳೆರೋಗ ಕಂಡುಬAದಿದ್ದು, ನೆಲಕಚ್ಚಿದ್ದ ಫಸಲು ಇದೀಗ ಮಣ್ಣಿನಡಿ ಸಿಲುಕಿದೆ. ಈ ವಾಸ್ತವಾಂಶವನ್ನೂ ಅಧಿಕಾರಿಗಳು ಅರಿತು ವರದಿ ಮಾಡಬೇಕಿದೆ ಎಂದು ಶ್ರೀಮಂಗಲ ವಿಎಸ್‌ಎಸ್‌ಎನ್ ಅಧ್ಯಕ್ಷ ಅಜ್ಜಮಾಡ ಟಿ. ಚಂಗಪ್ಪ ಹಾಗೂ ಇತರರು ಆಗ್ರಹಿಸಿದ್ದಾರೆ.
ಅಧಿಕಾರಿಗಳ ಜೊತೆ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಸಂಚಾಲಕ ಭವಿಕುಮಾರ್, ಸದಸ್ಯ ಅಜ್ಜಮಾಡ ಪಿ. ಮೋಹನ್, ಅಜ್ಜಮಾಡ ಕೆ. ಸಚಿನ್, ಅಜ್ಜಮಾಡ ಜಿ ಪೂಣಚ್ಚ, ಪ್ರಣಮ್ ಮತ್ತು ಇತರರು, ಗ್ರಾಮಸ್ಥರು ತೋಟಗಳಲ್ಲಿ ಕಾಫಿ ಉದುರಿ ಹಾನಿಯಾಗಿರುವ ಬಗ್ಗೆ ವಾಸ್ತವಾಂಶದ ಮಾಹಿತಿ ನೀಡಿದರು.