ಮಡಿಕೇರಿ, ಆ. ೧೮: ಕೇಂದ್ರ ಕೌಶಲ್ಯಭಿವೃದ್ಧಿ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಜಿಲ್ಲೆಯ ಆಯ್ದ ಕೃಷಿಕರು ಹಾಗೂ ಮಾಜಿ ಸೈನಿಕರೊಂದಿಗೆ ಸಂವಾದ ನಡೆಸಿದರು.
ಕ್ರಿಸ್ಟಲ್ ಕೋರ್ಟ್ ಸಭಾಂಗಣ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರು ಇದುವರೆಗೆ ಯಾವುದೇ ಸಚಿವರುಗಳಾಗಲಿ, ರಾಜಕಾರಣಿ ಗಳಾಗಲಿ ಮಾಜಿ ಸೈನಿಕರನ್ನು ಕರೆಸಿ ಭೇಟಿ ಮಾಡಿಲ್ಲ. ಇದು ಪ್ರಥಮವಾಗಿದೆ. ಮಾಜಿ ಸೈನಿಕರು ಸಾಕಷ್ಟು ಸಮಸ್ಯೆ ಎದುರಿಸು ತ್ತಿರುವುದಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಜಿಲ್ಲೆಯಲ್ಲಿ ಸಾಕಷ್ಟು ಸರಕಾರಿ ಜಾಗಗಳು ಒತ್ತುವರಿ ಯಾಗಿದ್ದು, ಅವುಗಳನ್ನು ಜಿಲ್ಲಾಧಿಕಾರಿ ಗಳ ಮೂಲಕ ತೆರವುಗೊಳಿಸಿ ಮಾಜಿ ಸೈನಿಕರಿಗೆ ನೀಡಬೇಕು. ಅರೆಸೇನಾ ಪಡೆಗಳಿಗೂ, ಮಾಜಿ ಯೋಧರಿಗೂ ಸೌಲಭ್ಯಗಳನ್ನು ಒದಗಿಸಬೇಕೆಂದು ಸೇರಿದಂತೆ ಇನ್ನಿತರ ಸಮಸ್ಯೆಗಳ ಕುರಿತಾಗಿ ಮನವಿ ಪತ್ರವನ್ನು ಸಚಿವರಿಗೆ ಸಲ್ಲಿಸಿದರು.
ಪ್ರಾಣಿ ಹಾವಳಿ ತಡೆಗೆ ಮನವಿ
ಕೃಷಿಕರು ಕೂಡ ತಾವುಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ಸಚಿವರ ಬಳಿ ನೋಡಿಕೊಂಡರು. ಕಾಫಿಗೆ ಕನಿಷ್ಟ ಬೆಂಬಲ ಬೆಲೆ ಹಾಗೂ ಕರಿಮೆಣಸು ಅನಧಿಕೃತ ಆಮದಿ ನಿಂದಾಗಿ ಬೆಲೆ ಕಳೆದುಕೊಂಡಿದ್ದು, ಸೂಕ್ತ ಬೆಲೆ ಒದಗಿಸಿಕೊಡಬೇಕು.
ಜಿಲ್ಲೆಯಲ್ಲಿ ವನ್ಯ ಪ್ರಾಣಿಗಳಿಂದಾಗಿ ಕೃಷಿಕರು, ಕಾರ್ಮಿಕರು, ವಿದ್ಯಾರ್ಥಿಗಳು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ತಡೆಗಟ್ಟಲು ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಮನವಿ ಮಾಡಿಕೊಂಡರು.